ತೀರ್ಥಹಳ್ಳಿ: ಸಚಿವರು ಇಂದು ಬೆಂಗಳೂರಿನಿಂದ ಬರುತ್ತಿರುವಾಗ ಮಾರ್ಗ ಮಧ್ಯದ ಬಿ ಆರ್ ಪಿಯಲ್ಲಿ  ಮುತ್ತಿನಕೊಪ್ಪದ ದಂಪತಿಗಳು ಮಗುವಿನೊಂದಿಗೆ ಬೈಕ್ ನಲ್ಲಿ ತೆರಳುವಾಗ ಹಸುವಿಗೆ  ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿಗೆ ಗಾಯವಾಗಿತ್ತು.
ಅದೇ ಸಂದರ್ಭಕ್ಕೆ ಅದೇ ಮಾರ್ಗದಲ್ಲಿ ಅಲ್ಲಿಗೆ ಬಂದ ಸಚಿವರು ತಮ್ಮ ಬೆಂಗಾವಲು ವಾಹನದಲ್ಲಿ ಬಿ ಆರ್ ಪಿಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವಿಯತೆ ಮೆರೆದಿದ್ದಾರೆ.
ಗೃಹ ಸಚಿವರ ಮಾನವೀಯತೆಯ ಕಾರ್ಯಕ್ಕೆ ಸಾಮಾಜಿಕ ಜಾಲಾತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
 
                         
                         
                         
                         
                         
                         
                         
                         
                        