w
Headlines
Home » ಕ್ಯಾಪ್ ಧರಿಸದ ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಗಳ ವಿರುದ್ಧ ಗರಂ ಆದ ಶಾಸಕ ಹರತಾಳು ಹಾಲಪ್ಪ

ಕ್ಯಾಪ್ ಧರಿಸದ ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಗಳ ವಿರುದ್ಧ ಗರಂ ಆದ ಶಾಸಕ ಹರತಾಳು ಹಾಲಪ್ಪ

ಹೊಸನಗರ : ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ನಾಡಗೀತೆ ಹಾಡುವ ವೇಳೆಯಲ್ಲಿ ಅಬಕಾರಿ ಹಾಗೂ ಅರಣ್ಯ ಸಿಬ್ಬಂದಿಗಳು  ಕ್ಯಾಪ್ ಧರಿಸದೆ ಇರುವುದನ್ನು ಗಮನಿಸಿದ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ  ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
 ತಾಪಂ  ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯ ಆರಂಭದಲ್ಲಿ ನಾಡಗೀತೆಗೆ ಗೌರವ ಸೂಚಿಸುವ ಸಂದರ್ಭದಲ್ಲಿ  ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಗಳು ಕ್ಯಾಪ್ ಧರಿಸದೆ ನಾಡಗೀತೆಗೆ ಅಗೌರವ ತೋರಿದ್ದು ಶಾಸಕರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರಿಗಳ ಮೇಲೆ ಗರಂ ಆದರು.
ನಂತರ ಅಗೌರವ ತೋರಿದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ  ಅವರು ಸರಕಾರ ಯೂನಿಫಾರ್ಮ್ ಯಾತಕ್ಕಾಗಿ ಕೊಟ್ಟಿರುವುದು, ಶಿಸ್ತು ಬೇಡ್ವಾ ನಿಮ್ಮ ಮೇಲಾಧಿಕಾರಿಗಳೇ ಕ್ಯಾಪ್ ಧರಿಸಿ ಗೌರವ ಸೂಚಿಸುತ್ತಿರುವಾಗ ನಿಮಗೆ ಯಾಕೆ ಈ ಅಸಡ್ಡೆ ಎಂದು ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ  ಈ ರೀತಿ  ಘಟನೆ  ನಡೆಯದಂತೆ  ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.