w
Headlines
Home » ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ : ನೂತನ ಜಿಲ್ಲಾಧಿಕಾರಿಯಾಗಿ ಡಾ. ಸೆಲ್ವಮಣಿ ಅಧಿಕಾರ ಸ್ವೀಕಾರ

ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ : ನೂತನ ಜಿಲ್ಲಾಧಿಕಾರಿಯಾಗಿ ಡಾ. ಸೆಲ್ವಮಣಿ ಅಧಿಕಾರ ಸ್ವೀಕಾರ

ಜಿಲ್ಲೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಕೆ ಬಿ ಶಿವಕುಮಾರ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದ್ದು , ಅವರ ಸ್ಥಾನಕ್ಕೆ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಸೆಲ್ವಮಣಿ (2013 ನೇ ಬ್ಯಾಚಿನ ಐಎಎಸ್ ಅಧಿಕಾರಿ)ರವರನ್ನು ಸರ್ಕಾರ ವರ್ಗಾಯಿಸಿ ಆದೇಶ ನೀಡಿದ್ದು .ಇಂದು ಬೆಳಿಗ್ಗೆ  ನೂತನ ಜಿಲ್ಲಾಧಿಕಾರಿಗಳು ಹಿಂದಿನ ಜಿಲ್ಲಾಧಿಕಾರಿ ಅವರಿಂದ  ಅಧಿಕಾರವನ್ನು ಸ್ವೀಕರಿಸಿದ್ದಾರೆ.


ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿದ್ದು ಕೆಲವು ಮಾಫಿಯಾಗಳು ಅದರಲ್ಲೂ ಮುಖ್ಯವಾಗಿ ಹುಣಸೋಡು ಕ್ರಷರ್ ಮತ್ತು ಕಲ್ಲು ಮಾಫಿಯಾ ಮತ್ತು ಕೆಲವು ಭೂ ಮಾಫಿಯಾಗಳು ಅವರ ವಿರುದ್ಧ ವರ್ಗಾವಣೆಗೆ ಕಾರ್ಯಾಚರಣೆ ನಡೆಸುತ್ತಿದ್ದವು .

2019 ಆಗಸ್ಟ್ ತಿಂಗಳಲ್ಲಿ ಜಿಲ್ಲಾಧಿಕಾರಿಯಾಗಿ ಬಂದಿದ್ದ ಕೆ.ಬಿ.ಶಿವಕುಮಾರ್ ಇಂದು ವರ್ಗವಾಗಿದ್ದು ಕೋಲಾರದ ಡಿಸಿ ಡಾ.ಸೆಲ್ವಮಣಿ ವರ್ಗವಾಗಿದ್ದಾರೆ.

ಇಂದಿನಿಂದ ಡಾ.ಸೆಲ್ವಮಣಿ ಶಿವಮೊಗ್ಗ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅನೇಕ ದಿನಗಳಿಂದ ಕೆ.ಬಿ.ಶಿವಕುಮಾರ್ ವರ್ಗಾವಣೆ ಗುಸುಗುಸು ಇಂದು ನಿಜವಾಗಿದೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.