Headlines

ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಿದ ತೀರ್ಥಹಳ್ಳಿ ಭಜರಂಗದಳದ ಕಾರ್ಯಕರ್ತರು

ತೀರ್ಥಹಳ್ಳಿ : ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ `ಮತಾಂತರದಿಂದ ನಿಮ್ಮ ಮೋಸದ ಪ್ರಚಾರ,ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂದು ಮತಾಂತರಗೊಳಿಸಿ “ಸ್ವಇಚ್ಚೆಯ ಮತಾಂತರ” ಎಂದು ಬಿಂಬಿಸಲಾಗುತ್ತಿದೆ.  ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ…

Read More

ಆಯನೂರು ಸಮೀಪ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಸ್ಥಳದಲ್ಲೇ ಸಾವು

ಶಿವಮೊಗ್ಗ : ಇಲ್ಲಿನ ಸಮೀಪದ ಮುದ್ದಿನಕೊಪ್ಪದ ಬಳಿ  ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.   ನಿತ್ಯದ ಕೆಲಸದ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಯುವಕನಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿ ಸಾವು ಸಂಭವಿಸಿರುವ ದುರಂತದ ಘಟನೆ ನಡೆದಿದೆ.  ಇದರಲ್ಲಿ ಕಾರು‌ಚಾಲಕ ಆಗಿದ್ದ ಶಿವಮೊಗ್ಗ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಅತ್ತೆ ಮನೆಗೆ ಹೋಗುತ್ತಿದ್ದ ಅಳಿಯ ಸ್ಥಳದಲ್ಲೆ ಸಾವು ಕಂಡಿರುವ ಘಟನೆ ನಡೆದಿದೆ.ಹೊನ್ನಾಳ್ಳಿ ತಾಲ್ಲೂಕಿನ ಗೋಣಗೇರೆ ನಿವಾಸಿ…

Read More

ಶಿವಮೊಗ್ಗ : ಕೆರೆಯಲ್ಲಿ ಈಜಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಶಿವಮೊಗ್ಗ : ಸ್ನಾನಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಸಾವು ಕಂಡಿರುವ ಘಟನೆ ಹಾಯ್ ಹೊಳೆ ಕೆರೆಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅರಣ್ಯ ಇಲಾಖೆಯಲ್ಲಿ ಎಫ್ ಡಿ ಎ ಕೆಲಸ ಮಾಡುತ್ತಿದ್ದ ಅಲ್ಲಾಭಕ್ಷಿ(30) ಅವರು ಶಿವಮೊಗ್ಗ ತಾಲೂಕಿನಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬದೊಂದಿಗೆ ಬಂದಿದ್ದರು. ಹಾಯ್ ಹೊಳೆ ಕೆರೆಯ ನೀರಿನ ಆಳದ ಅರಿವಿಲ್ಲದೆ ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ತಮ್ಮ ಕಾರನ್ನು ಇದೇ ಹಾಯ್ ಹೊಳೆ ಕೆರೆಯಲ್ಲಿ…

Read More

ಡಾ. ರಾಜ್ ಸ್ವರ ಸಂಭ್ರಮ ಸಂಗೀತ ಸ್ಪರ್ಧೆಯಲ್ಲಿ ಸ್ಪರ್ದಿಸಿರುವ ರಿಪ್ಪನ್ ಪೇಟೆಯ ಯುವ ಪ್ರತಿಭೆ ಪ್ರಣತಿ ಪ್ರವೀಣ್ ಗೆ ಬೆಂಬಲಿಸಿ:

ರಿಪ್ಪನ್ ಪೇಟೆ : ಸಾಗರದ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನಡೆಯುತ್ತಿರುವ “ಡಾ ರಾಜ್ ಸ್ವರ ಸಂಭ್ರಮ” ಕಾರ್ಯಕ್ರಮದ ಅಂತರ್ಜಾಲ ಸಂಗೀತ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಪ್ರಣತಿ ಪ್ರವೀಣ್ ಸ್ಪರ್ಧಿಸಿದ್ದು  ಈ ಯುವ ಪ್ರತಿಭೆಯು ಸ್ಪರ್ಧೆಯಲ್ಲಿ ಮುಂದಿನ ಹಂತಕ್ಕೆ ತೆರಳಲು ವೀಕ್ಷಕರ ಸಹಕಾರದ ಅಗತ್ಯವಿದೆ. ರಿಪ್ಪನ್ ಪೇಟೆಯ ಮಹಾಲಕ್ಷ್ಮಿ ಹಾಗೂ ಪ್ರವೀಣ್ ದಂಪತಿಗಳ ಪುತ್ರಿಯಾದ ಪ್ರಣತಿ ಪ್ರವೀಣ್ ಸಂಗೀತ ಲೋಕದಲ್ಲಿ ಅಧ್ಬುತ ಸಾಧನೆಗೈದಿದ್ದು ಪ್ರಸ್ತುತ ಸಾಗರದ ಯೂತ್ ಐಕಾನ್…

Read More

ರಿಪ್ಪನ್ ಪೇಟೆ: ಗುರುವಾರದಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ:

ರಿಪ್ಪನ್ ಪೇಟೆ : ದಿನಾಂಕ 21ರ ಗುರುವಾರ,ಸಮಯ ಸಂಜೆ 5:00 ಗಂಟೆಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ, ಬಿ,ಜಿ, ನಾಗರಾಜ್, ತಾಲ್ಲೂಕು ವೀಕ್ಷಕರಾದ  ಮಲ್ಲಿಕಾರ್ಜುನ್ ಹಕ್ರೆ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡ್ ರತ್ನಕರ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ, ಬಿ ಪಿ ರಾಮಚಂದ್ರ,ಜಿಲ್ಲಾ ಪಂಚಾಯತ್…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಸಡಗರ: ಭೂ ತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

ಶಿವಮೊಗ್ಗ: ಜಿಲ್ಲೆಯಲ್ಲಿ ಅನ್ನದಾತರು ಭೂಮಿ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜಿಲ್ಲೆಯ ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ ತಾಲೂಕಿನಲ್ಲಿ ಈ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತೆ. ಭೂಮಿ ಹುಣ್ಣಿಮೆ ಮಲೆನಾಡಿನ ಹಳ್ಳಿಗರಿಗೆ ವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟ ಹೊಂದಿರುವವರಿಗೆ ಈ ದಿನ ಹೊಸ ಸಡಗರ. ನಸುಕಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ. ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತರುವ ಅನ್ನದಾತರು ಅದನ್ನು ಬೇಯಿಸುತ್ತಾರೆ. ಇದರ ಮಿಶ್ರಣಕ್ಕೆ ‘ಚರಗ’ ಎನ್ನುತ್ತಾರೆ. ಈ ಮಿಶ್ರಣವನ್ನು…

Read More

ಯುವ ಸಾಹಿತಿ ರಫ಼ಿ ರಿಪ್ಪನ್ ಪೇಟೆ ರವರಿಗೆ ಒಲಿದ ರಾಜ್ಯ ಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ :

ರಿಪ್ಪನ್ ಪೇಟೆ : ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ವಹಿಸಿದ್ದರು..  ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಹಾಗೂ ಗುರುಕುಲ ಶಿರೋಮಣಿ…

Read More

ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕೃತಿ ದಹಿಸಿ ಪ್ರತಿಭಟನೆ

ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ ಅಡಿಟ್ ಮತ್ತು ಪೆಡ್ಲರ್ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಗೋಪಿ ವೃತ್ತದಲ್ಲಿ ನಳಿನ್ ಕುಮಾರ್ ಕಟೀಲ್ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು. ಇದೇ ರೀತಿ ದಿನನಿತ್ಯ ಬಿಜೆಪಿಯ ನಾಯಕರುಗಳು ಬಾಲಿಶತನದ ಹಾಗೂ ಜೋಕರ್ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ದೇಶದಲ್ಲಿ ಬಿಜೆಪಿ ಪಕ್ಷದ ಸಂಸ್ಕೃತಿ ಜೋಕರ್ ಸಂಸ್ಕೃತಿ ಎಂದು ತೋರಿಸುತ್ತಿದ್ದಾರೆ….

Read More

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ರಿಪ್ಪನ್ ಪೇಟೆಯ ಉಲ್ಲಾಸ್ ಆರ್ ಆಯ್ಕೆ :

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ರಿಪ್ಪನ್ ಪೇಟೆಯ ಯುವ ಮುಖಂಡ ಉಲ್ಲಾಸ್ ಆರ್ ರವರು ಆಯ್ಕೆಯಾಗಿದ್ದಾರೆ.  ಹೊಸನಗರ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹೆಚ್ಚು ಗುರುತಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಯುವ ನಾಯಕರಿಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಲ್ಲಿ ಉತ್ತಮ ಹುದ್ದೆ ನೀಡುವಂತೆ ಹೊಸನಗರ ಯುವ ಕಾಂಗ್ರೆಸ್ ಸಮಿತಿಯಿಂದ ಶಿಪಾರಸು ಮಾಡಲಾಗಿತು. ಪಕ್ಷ ಸಂಘಟನೆಯ ಆದಾರದ ಮೇಲೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ರವರ ನಿರ್ದೇಶನದಂತೆ ಜಿಲ್ಲಾ ಯುವ ಕಾಂಗ್ರೆಸ್…

Read More

ಶಿವಮೊಗ್ಗ ಕೃಷಿ ಕಾಲೇಜಿನ ಪ್ರೊಫೆಸರ್ ಚಿಕ್ಕಬಾಸೂರು ಕೆರೆಯಲ್ಲಿ ಶವವಾಗಿ ಪತ್ತೆ :

ಶಿವಮೊಗ್ಗ : ಇಲ್ಲಿನ ಕೃಷಿ ಕಾಲೇಜಿನ ಜಿ.ಪಿ.ಬಿ. ವಿಭಾಗದ ಮುಖ್ಯಸ್ಥರಾದ ಪ್ರೊ. ಗಂಗಾಪ್ರಸಾದ್ ಅವರ ಮೃತದೇಹ ಹೊನ್ನಾಳಿ ತಾಲೂಕಿನ ಸ ಸಾಸ್ವೆಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡದ (ವಿಜಯಪುರ) ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಶಿವಮೊಗ್ಗ ಬಸವೇಶ್ವರ ನಗರದ ನಿವಾಸಿಯೂ, ಅಪಾರ ವಿದ್ಯಾರ್ಥಿಗಳ ಆಪ್ತ ಗುರುಗಳೂ ಆಗಿದ್ದ ಗಂಗಾಪ್ರಸಾದ್ (59) ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ.ಕೆರೆ ಮಗ್ಗುಲಲ್ಲಿ ಅವರ ಪ್ಯಾಂಟ್, ಚಪ್ಪಲಿ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡ( ವಿಜಯಪುರ) ಬಳಿ ಪತ್ತೆಯಾಗಿರುವ ಇವರ ಶವವನ್ನು ಕಾಲೇಜಿನ ವಿದ್ಯಾರ್ಥಿಯೋರ್ವ…

Read More