ಶಿವಮೊಗ್ಗ : ಹಲವು ದೇಶದಲ್ಲಿ ಆರ್ಭಟ ನೆಡೆಸುತ್ತಿರುವ ಕೊರೋನಾ ವೈರಸ್ ನ ಹೊಸ ತಳಿ ಒಮಿಕ್ರಾನ್ ಶಿವಮೊಗ್ಗ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 20 ವರ್ಷದ ಯುವತಿಯೊಬ್ಬರಿಗೆ ಒಮಿಕ್ರಾನ್ ಸೊಂಕು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 7ರಂದು ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಗಂಟಲ ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
ಡಿ.19ರಂದು ರಾಜ್ಯದಲ್ಲಿ ಐವರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಭದ್ರಾವತಿಯ 20 ವರ್ಷದ ಯುವತಿಯೂ ಒಬ್ಬಳಾಗಿದ್ದಾಳೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದೆ ಮೊದಲ ಓಮಿಕ್ರಾನ್ ಕೇಸ್ ಆಗಿದೆ.
ಈ ಯುವತಿಗೆ ಸೊಂಕು ಹೇಗೆ ಬಂತು? ಟ್ರಾವೆಲ್ ಹಿಸ್ಟರಿ ಏನು? ಎಂಬ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.