POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕಾರ್ಮಿಕ ಸಾವನ್ನಪ್ಪಿದ ಸುದ್ದಿ ಮನೆಯವರಿಗೆ ತಿಳಿಸಲು ಹೋದ ಮಾಲೀಕನೂ ಹೃದಯಾಘಾತದಿಂದ ಸಾವು :

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ. ಕಾರ್ಮಿಕ ಸಾವನ್ನಪ್ಪಿದ್ದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲುಕುವ ಘಟನೆ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರಗ ಗೇಟ್ ಸಮೀಪ ನಡೆದಿದೆ.

ಕೂಲಿ ಕಾರ್ಮಿಕ ಬರ್ಮಪ್ಪ (55) ಎಂಬಾತ ಎಂದಿನಂತೆ ನಿವೃತ್ತ ಶಿಕ್ಷಕ ದುಗ್ಗಪ್ಪಗೌಡ(75) ಎಂಬುವರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ.ಅನೇಕ ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಕೂಡ ಮಾಡುತ್ತ ಇದ್ದ ಮದ್ಯಾಹ್ನದವರೆಗೆ ಲವಲವಿಕೆಯಿಂದ ತೋಟದಲ್ಲಿ ಕೆಲಸ ಮಾಡಿ ಬಂದ ಬರ್ಮಾ ನಂತರ ಸಂಜೆ ಬಂದು ಊಟ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ಅವನಿಗೆ ಹೃದಯಾಘಾತವಾಗಿ ಅಸುನಿಗಿದ್ದ. ಈ ವಿಷಯ ತಿಳಿದ ತಕ್ಷಣ ದುಗ್ಗಪ್ಪಗೌಡ ಕುಟುಂಬದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬರ್ಮಾ ಸಾವನ್ನಪ್ಪಿದ್ದ.

ಸಾವಿನ ಸುದ್ದಿಯನ್ನು ಮನೆಯವರಿಗೆ ತಿಳಿಸಲು ದುಗ್ಗಪ್ಪಗೌಡ ತೆರಳಿದರೆ ದಾರಿ ಮಧ್ಯೆ ಅವರಿಗೂ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಅಕ್ಕ ಪಕ್ಕದ ಗ್ರಾಮಸ್ಥರ ನೆರವಿನಿಂದ ಆಸ್ಪತ್ರೆ ತೆಗೆದು ಕೊಂಡು ಹೋದಾರಾದರು ಹೋಗುವ ಸಮಯದಲ್ಲಿ ಮಾರ್ಗಮಧ್ಯೆ ಅವರು ಅಸುನೀಗಿದ್ದಾರೆ.

ದುಗ್ಗಪ್ಪ ಗೌಡ ಸರ್ಕಾರಿ ಪ್ರೌಢಶಾಲೆ ಆರಗ, ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ತೀರ್ಥಹಳ್ಳಿ ಮತ್ತು ಸರ್ಕಾರಿ ಪ್ರೌಢಶಾಲೆ ಮೇಗರವಳ್ಳಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು .

ಇತ್ತ ಮಾಲೀಕ ಮತ್ತು ಕಾರ್ಮಿಕನ ಹೃದಯಾಘಾತದ ಸುದ್ದಿ ತೀರ್ಥಹಳ್ಳಿ ಜನತೆಯನ್ನು ದಿಗ್ಬ್ರಾಂತಗೊಳಿಸಿದೆ.




ವರದಿ : ಶ್ರೀಕಾಂತ್. ವಿ. ನಾಯಕ್ ತೀರ್ಥಹಳ್ಳಿ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.