ಶಿಕಾರಿಪುರ : ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಯೋರ್ವಳನ್ನ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಕಪ್ಪನಹಳ್ಳಿ ಗ್ರಾಮದ ಹೇಮಾವತಿ ಕೊಲೆಯಾದ ದುರ್ಧೈವಿ.
ಈಕೆ ಗಂಡನಿಂದ ದೂರವಾಗಿ ಅನೇಕ ವರ್ಷಗಳಾಗಿದ್ದವು.ಗ್ರಾಮದ ಪರಿಚಯಸ್ಥ ಅನಿಲ್ ಎಂಬುವವನೊಂದಿಗೆ ಮಹಿಳೆಗೆ ಅನೈತಿಕ ಸಂಬಂಧವಿದ್ದು, ಈ ಬಗ್ಗೆ ಪಂಚಾಯಿತಿ ನಡೆಸಿ ಇಬ್ಬರಿಗೂ ಬೇರೆ ಬೇರೆ ಇರುವಂತೆ ತಾಕೀತು ಮಾಡಲಾಗಿತ್ತು.
ಗ್ರಾಮಸ್ಥರು ಪಂಚಾಯಿತಿ ನಡೆಸಿ ನೀಡಿದ ತೀರ್ಪು ಅನಿಲ್ ನ ಅಸಮಾಧಾನಕ್ಕೆ ಕಾರಣವಾಗಿತ್ತು.ಹೇಮಾವತಿ ನನ್ನೊಂದಿಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಇಂದು ಹೇಮಾವತಿ ಫ್ಯಾಕ್ಟರಿ ಕೆಲಸಕ್ಕೆ ಹೋಗುವಾಗ ಅಮಟೆಕೊಪ್ಪದ ಸ್ಮಶಾನ ಬಳಿ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.