ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ಸಿದ್ದರಾಮಯ್ಯ ನಿವಾಸಕ್ಕೆ ಮಧು ಬಂಗಾರಪ್ಪ ಇಂದು ಭೇಟಿ ನೀಡಿದರು. ಇದಾದ ಅರ್ಧ ಗಂಟೆ ಬಳಿಕ ಕುಮಾರ್ ಬಂಗಾರಪ್ಪ ಕೂಡ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.
ವಿಜಯದಶಮಿ ಪ್ರಯುಕ್ತ ಸಿದ್ದರಾಮಯ್ಯಗೆ ಶುಭಕೋರಲು ಮಧು ಬಂಗಾರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದರು. ಇದೇ ವೇಳೆ ಕುಮಾರ್ ಬಂಗಾರಪ್ಪ ಕೂಡ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸಿದ್ದರಾಮಯ್ಯ ಅಣ್ಣ-ತಮ್ಮನ ಸಂಧಾನಕ್ಕೆ ಮುಂದಾದರ ಎಂಬ ಪ್ರಶ್ನೆ ಮೂಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ನನ್ನ ಮಗಳ ಮದುವೆ ಕಾರ್ಡ್ ಕೊಡಲು ಬಂದಿದ್ದೆ. ಅದೇ ವೇಳೆ ನನ್ನ ಸಹೋದರ ಕೂಡ ಸಿಕ್ಕಿದ್ರು. ಇಬ್ಬರೂ ಒಂದೇ ಕಡೆ ಸಿಕ್ಕಿದ್ದು ಒಳ್ಳೆಯದೆ. ಆದರೆ, ನಾವು ಯಾವುದೇ ಮಾತುಕತೆ ನಡೆಸಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆ ಅನ್ನೋದು ಸುಳ್ಳು. ಅಂತಹ ಯಾವ ಪರಿಸ್ಥಿತಿಯೂ ಇಲ್ಲ. ನಾನು ಬಿಜೆಪಿ ಶಾಸಕನಾಗಿದ್ದೇನೆ, ಅಲ್ಲಿಯೇ ಇರ್ತೇನೆ ಎಂದರು.
ಇಬ್ಬರ ನಡುವೆ ಸಂಧಾನಕ್ಕೆ ವೇದಿಕೆ ಸಿದ್ದಪಡಿಸುವತ್ತಾ ಮಾಜಿ ಸಿ ಎಂ ಸಿದ್ದರಾಮಯ್ಯ ಮುಂದಾಗಿದ್ದಾರ ಕಾದು ನೋಡಬೇಕಾಗಿದೆ.