w
Headlines
Home » ಶಿವಮೊಗ್ಗ :ಅಕ್ರಮ ಗೋ ಸಾಗಾಣಿಕೆ ಆರೋಪಿಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಭಜರಂಗದಳದ ಕಾರ್ಯಕರ್ತರು!!

ಶಿವಮೊಗ್ಗ :ಅಕ್ರಮ ಗೋ ಸಾಗಾಣಿಕೆ ಆರೋಪಿಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಭಜರಂಗದಳದ ಕಾರ್ಯಕರ್ತರು!!

ಶಿವಮೊಗ್ಗ : ತಡರಾತ್ರಿ ಸಮಾರು 9.30 ಆಸುಪಾಸುನಲ್ಲಿ ಹೊಸದುರ್ಗ- ಶಿವಮೊಗ್ಗ ಮಾರ್ಗವಾಗಿ ಶಿವಮೊಗ್ಗದ ಕಡೆಗೆ ಟಾಟಾ ಲಗೇಜ್ ಆಟೋ ಒಂದು ಹೋರಿಯನ್ನು,ತುಂಬಿಕೊಂಡು ಬರುತ್ತಿದ್ದ ಗಾಡಿಯನ್ನು ಗಮನಿಸಿದ ಅಭಿಷೇಕ್ ಹುಂಚ ಹಾಗೂ ಮತ್ತವರ ಸ್ನೇಹಿತರು ಅನುಮಾನಗೊಂಡು ಗಾಡಿಯನ್ನು ತಡೆದು ನಿಲ್ಲಿಸಿ,ವಿಚಾರಿಸಿ ಕೇಳಿದಾಗ ಗಾಡಿಯಲ್ಲಿದವರು, ಮಾಚೇನಹಳ್ಳಿ ಆಯನೂರು ಹತ್ತಿರ ಹೋಗುದಾಗಿ ಹೇಳಿದರು ,ಅನುಮಾನ ಹೆಚ್ಚಿದ್ದರಿಂದ ಗಾಡಿ ಅಲ್ಲೇ ನಿಲ್ಲಿಸಿ 112ಗೆ ಮಾಹಿತಿ ನೀಡಿ ಹತ್ತಿರದ ದೊಡ್ಡಪೇಟೆ ಠಾಣೆಗೆ  ಮಾಹಿತಿ ನೀಡಿ ಗಾಡಿ ತಲುಪಿಸಿ, ಸೂಕ್ತ ವಿಚಾರಣೆ ನೆಡೆಸಲು ಪೊಲೀಸ್ ಸಿಬ್ಬಂದಿಗಳ ಹತ್ತಿರ ಮಾತುಕತೆ ನೆಡಿಸಿ. ಹಾಗೂ ಇದೆ ಸಂದರ್ಭದಲ್ಲಿ,ಮಲೆನಾಡು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಎಗ್ಗಿಲ್ಲದೇ ನೆಡೆಯುತ್ತಿರುವ ಗೋವುಗಳ ಅಕ್ರಮ ಸಾಗಾಟ ದಂದೆ ಹೆಚ್ಚಾಗಿ ಕಂಡುಬರುತ್ತಾ ಇರುವುದರಿಂದ ರಾಜ್ಯ ಗೃಹ ಸಚಿವರ ಸಂಪರ್ಕ ಮಾಡಿ  ಪ್ರಕರಣವನ್ನ ಗಮನಕ್ಕೆ ತಂದು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನ ಆಗ್ರಹ ಮಾಡಿದ್ದೇವೆ ಎಂದು ಅಭಿಷೇಕ್ ಹುಂಚ ಹಾಗೂ ಭಜರಂಗದಳದ ಕಾರ್ಯಕರ್ತರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಭಜರಂಗದಳದ ಗಣೇಶ್ ಪ್ರಸಾದ್ ದೇವಾಡಿಗ,ಬಸವರಾಜ್, ಹಾಗೂ ರಾಜು ಗೌಡ್ರು ಅಭಿಷೇಕ್ ಹುಂಚ, ಮತ್ತಿರರು ಇದ್ದರು.


ವರದಿ : ಅಜಿತ್ ಗೌಡ ಬಡೆನಕೊಪ್ಪ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.