w
Headlines
Home » ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

ತೀರ್ಥಹಳ್ಳಿ: ಭಾರತದ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಪ್ರಯುಕ್ತ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ಮಂಗಳವಾರ ರಾಮ ಮಂದಿರದಲ್ಲಿ ರಕ್ತದಾನ  ಕಾರ್ಯಕ್ರಮ ನಡೆಸಿದರು. 

ಈ ಶಿಬಿರದಲ್ಲಿ  ಬರೋಬ್ಬರಿ 157 ಯೂನಿಟ್ ರಕ್ತದಾನವಾಗಿದ್ದು 78 ಜನರು  ಮೊದಲ ಬಾರಿ ರಕ್ತದಾನ ಮಾಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ಉಪಾಧ್ಯಕ್ಷರಾದ ಗಣೇಶ್ ಬಿಳಕಿ ,ಸುಹಾಸ್ ಶಾಸ್ತ್ರಿ, ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿಗಳಾದ ಮೇಘರಾಜ್ ಹೊಳಲೂರು, ಧ್ರುವ ,ತೀರ್ಥಹಳ್ಳಿ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಂದೀಪ್ ಭಟ್ ಗುಡ್ಡೆಕೊಪ್ಪ,  ಯುವಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯಶಸ್ವೀ ಕಡ್ತೂರು , ಪ್ರಶಾಂತ್ ಹಳ್ಳದಬೈಲು, ಅಮಿತ್ ಹೆಗ್ಗಾರು ,ಸಂತೋಷ್ ಬದನೆಹಿತ್ತಲು, ಪ್ರಮೋದ್ ಪೂಜಾರಿ ಕುರುವಳ್ಳಿ,ಪೂರ್ಣೀಶ್ ಮೇಲಿನ ಕುರುವಳ್ಳಿ, ಸುರೇಂದ್ರ ಯಡೂರು,ಆದರ್ಶ ಮುತ್ತುಗುಂಡಿ, ಅವಿನಾಶ್ ವಿಠಲ ನಗರ ಸೇರಿದಂತೆ ಎಲ್ಲಾ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,  ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದರು. 

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ನಾಗರಾಜ್ ಶೆಟ್ಟಿ,  ಮಂಡಲ ಬಿಜೆಪಿ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ನಾಯಕ್,  ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್ , ಮಾಜಿ ತಾ. ಪಂ ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಗೀತಾ ಸದಾನಂದ ಶೆಟ್ಟಿ, ಕುಕ್ಕೆ  ಪ್ರಶಾಂತ್ ,ಸಂದೇಶ್ ಜವಳಿ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರುಗಳು ,ಪಕ್ಷದ ಪ್ರಮುಖರು ಮುಂತಾದವರು ಇದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.