w
Headlines
Home » ಜಾನಪದ ಸಮೂಹ ಗಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :

ಜಾನಪದ ಸಮೂಹ ಗಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :

ಹೊಸನಗರ : ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕ್ರತಿಕ ಮೇಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಿಕ್ಷಕರ ಸಮೂಹವು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

ಇದೇ ತಿಂಗಳು 15,16,17 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ 75ನೇ ಆಜಾದ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ  ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸಾಧನೆಗೈದ ತಾಲೂಕಿನ ಪ್ರತಿಭಾವಂತ ಶಿಕ್ಷಕರುಗಳಾದ ತೀರ್ಥಕುಮಾರ್ ,ದುಗ್ಗಪ್ಪ,ಮೋಹನ್ ಕುಮಾರ್ ಸಿ,ಪ್ರಕಾಶ್,ಮೋಹನ್ ಹೆಚ್ ಆರ್ ,ತಿಮ್ಮಪ್ಪ ಕಣಬಂದೂರು ,ದೊಡ್ಡಪ್ಪ,ಸೈಯದ್ ಇರ್ಫ಼ಾನ್ ,ಮನೋಹರ ಮೂರ್ತಿ ಮತ್ತು ಕುಮಾರ್ ಇವರುಗಳಿಗೆ ಸಾಹಿತ್ಯ ಪ್ರೇಮಿಗಳು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದ್ದಾರೆ

ಈ ತಂಡ ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿಯೂ ಉತ್ತಮ ಸಾಧನೆ ತೋರಿ ನಮ್ಮ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂಬುವುದೇ ನಮ್ಮ ಆಶಯ.


ವರದಿ : ತ ಮ ಸುಧಾಕರ್

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.