w
Headlines
Home » ಆನಂದಪುರದಲ್ಲಿ ರಾಯಲ್ ಕ್ಲಬ್ ನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅದ್ದೂರಿ ಸನ್ಮಾನ :

ಆನಂದಪುರದಲ್ಲಿ ರಾಯಲ್ ಕ್ಲಬ್ ನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅದ್ದೂರಿ ಸನ್ಮಾನ :

ಆನಂದಪುರ : ಅತ್ಯುನ್ನತ ಸಾಧನೆ ಗೈದು ಜನ ಸಾಮಾನ್ಯರಲ್ಲಿ ನೆನಪುಳಿಯುವಂತೆ  ಸಾಧನೆಗೈದ ಸನ್ಮಾನಿತರಿಗೆ ಗೌರವಿಸಲಾಯಿತು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ರಾಯಲ್ ಕ್ಲಬ್ ವತಿಯಿಂದ ನಾಡಿನಾದ್ಯಂತ ಹೆಸರನ್ನು ಗಳಿಸಿ ನಾಡಿಗೆ ಕೀರ್ತಿ ತಂದ ಹಲವು ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ರಾಯಲ್ ಕ್ಲಬ್ ಕಳೆದ 2ವರ್ಷಗಳಿಂದ ಆನಂದಪುರದಲ್ಲಿ ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಹಾಗೂ ನೊಂದವರಿಗೆ ನೆರವು ನೀಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು ಸಮಾಜಮುಖಿ ಕೆಲಸ ನಿರ್ವಹಿಸುವತ್ತ ಗಮನ ಹರಿಸಿದೆ.

 ರಾಯಲ್ ಎನ್ನುವ ಶಬ್ದದಲ್ಲೇ ಸರ್ವ ಧರ್ಮವನ್ನು ಗೌರವಿಸುವಂತಹ ( ರಾ ಎಂದರೆ ರಾಮ, ಯ ಎಂದರೆ ಏಸು, ಲ್ ಎಂದರೆ ಅಲ್ಲಾ ) ಎಂಬ ವಿಶೇಷವಾದ ಅರ್ಥ ಹೊಂದಿದ್ದು  ಸಮಾಜಮುಖಿ ಕಾರ್ಯವನ್ನು ನಿರ್ವಹಿಸಿ ಸಮಾಜದ ಏಳಿಗೆಗೆ ದುಡಿಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಸಂಘದ ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.




 ವರದಿ :  ಪವನ್ ಕುಮಾರ್ ಕಠಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.