w
Headlines
Home » ಮಂಡಗದ್ದೆ : ಅನಾಥ ಶವವಾಗಿ ಸಿಕ್ಕ ಎರಡು ದಿನದ ನವಜಾತ ಶಿಶು

ಮಂಡಗದ್ದೆ : ಅನಾಥ ಶವವಾಗಿ ಸಿಕ್ಕ ಎರಡು ದಿನದ ನವಜಾತ ಶಿಶು

ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆಯಲ್ಲಿ ಹುಟ್ಟಿದ ಎರಡು ದಿನದ ಮಗು ಕರಳು ಬಳ್ಳಿ ಸಹ ಹಾಗೆ ಇರುವ ಗಂಡು ಮಗುವೊಂದು ಮಂಡಗದ್ದೆಯ ಕೆರೆಯ ಬಳಿ ಯಾರೋ ಇಟ್ಟು ಅಥವಾ ಬಿಸಾಕಿ ಹೋಗಿರುವ ದಾರುಣ ಘಟನೆ ನೆಡೆದಿದೆ.

ಮಂಡಗದ್ದೆಯ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಬೆಸ್ತರಿಗೆ ಈ ಶಿಶು ಸಿಕ್ಕಿದ್ದು ತಕ್ಷಣವೇ ಅಲ್ಲಿನ ಗ್ರಾಮಪಂಚಾಯಿತಿ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ.
ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೃತ್ಯಕ್ಕೆ ಕಾರಣರಾದ ಪಾಪಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.