w
Headlines
Home » ಸಾಹಿತಿ ಮೈನಾ ನಾಸಿರ್ ಕಾರ್ಗಲ್ ರವರಿಗೆ ಒಲಿದ ರಾಜ್ಯ ಮಟ್ಟದ ಗುರುಕುಲ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿ :

ಸಾಹಿತಿ ಮೈನಾ ನಾಸಿರ್ ಕಾರ್ಗಲ್ ರವರಿಗೆ ಒಲಿದ ರಾಜ್ಯ ಮಟ್ಟದ ಗುರುಕುಲ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿ :

ಕಾರ್ಗಲ್: ಗುರುಕುಲಾ ಕಲಾ ಪ್ರತಿಷ್ಠಾನ ರಾಜ್ಯ ಘಟಕದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದಗುರುಕುಲ ಸಾರ್ವಭೌಮ ಕವಿತಾಕೃಷ್ಣ ಪ್ರಶಸ್ತಿಗೆ ಕಾರ್ಗಲ್ ನ ಸಾಹಿತಿ ಮೈನಾ ನಾಸಿರ್ ಕಾರ್ಗಲ್ ರವರು ಆಯ್ಕೆಯಾಗಿದ್ದಾರೆ.ಈ ಕುರಿತು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈನಾ ನಾಸಿರ್ ಕಾರ್ಗಲ್ ರವರು ಮೂಲತಃ ಉಡುಪಿ ತಾಲೂಕಿನ ಕೋಟಾದ ಸಮೀಪವಿರುವ ಮಧುವನದವರು. ಮದುವೆಯ ನಂತರ22 ವರ್ಷಗಳಿಂದ ಇವರು ಸಾಗರ ತಾಲೂಕಿನ ಜೋಗದ ಸಮೀಪವಿರುವ ಕಾರ್ಗಲ್ ನಲ್ಲಿ ವಾಸವಾಗಿರುತ್ತಾರೆ.

25 ವರ್ಷಗಳಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರ “ಮಧುವನ” ಕವನ ಸಂಕಲನ ನಾ ಡಿಸೋಜಾರವರ ಮುನ್ನುಡಿಯೊಂದಿಗೆ.. ಬಿಡುಗಡೆಯಾಗಿರುತ್ತದೆ. ಇವರು ಮೈಲಾಂಜಿ , ಮದರಂಗಿ ಮಾಸಪತ್ರಿಕೆಯ ಲೇಖಕಿ ಯಾಗಿದ್ದರು.

ಇವರು ಹಲವಾರು ಕಥೆ, ಕವನ, ಲೇಖನ, ಗಜಲ್, ಹನಿಕವನಗಳು, ಚುಟುಕುಗಳು, ನಾಟಕದಂತಹ ವಿವಿಧ ಸಾಹಿತ್ಯ ಪ್ರಕಾರಗಳನ್ನು ಬರೆದು ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದ ಹಲವಾರು ಪ್ರಶಸ್ತಿಯನ್ನು ಪಡೆದುದಲ್ಲದೆ.. ರಾಷ್ಟ್ರಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಗುರುಕುಲ ಪ್ರತಿಷ್ಠಾನದ ರಾಜ್ಯ ಮಹಿಳಾ ಪ್ರತಿನಿಧಿಯಾದ ಇವರಿಗೆ ಗುರುಕುಲ ಪ್ರತಿಷ್ಠಾನ ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷರಾದ ರಫಿ ರಿಪ್ಪನ್ ಪೇಟೆ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.