w
Headlines
Home » ಶಿವಮೊಗ್ಗ: ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ :ಕಾರು ಚಾಲಕ ಸ್ಥಳದಲ್ಲೆ ಸಾವು

ಶಿವಮೊಗ್ಗ: ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ :ಕಾರು ಚಾಲಕ ಸ್ಥಳದಲ್ಲೆ ಸಾವು

ಶಿವಮೊಗ್ಗ: ಖಾಸಗಿ ಬಸ್ ಮತ್ತು ಕಾರ್ ಡಿಕ್ಕಿಯಾಗಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ದುರ್ಘಟನೆ ಶಿವಮೊಗ್ಗದ ಕುಂಚೇನಹಳ್ಳಿ ಸಮೀಪ ನಡೆದಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಶಿಕಾರಿಪುರ ನಿವಾಸಿ ರಾಕೇಶ್ (35) ಮೃತಪಟ್ಟ ಕಾರು ಚಾಲಕ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನಿಬ್ಬರು ಸಹ ಪ್ರಯಾಣಿಕರಾದ ಜ್ಯೋತಿ ಮತ್ತು ಚೈತ್ರರಿಗೆ ಅಪಘಾತದಲ್ಲಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಸಿಫ್ಟ್ ಕಾರಿನಲ್ಲಿ ಬರುವಾಗ ಕುಂಚೇನ ಹಳ್ಳಿಯ ಗ್ರಾಪಂ ಕಚೇರಿ ಮುಂಭಾಗ ಕೃಷ್ಣ ಬಸ್ ಗೆ ಓವರ್ ಟೇಕ್ ಮಾಡುವಾಗ ಎದುರಿನಿಂದ  ವಾಹನ ಬಂದಿದ್ದು ಇದನ್ನ ತಪ್ಪಿಸಲು ಹೋಗಿ ರಸ್ತೆ ಅಪಘಾತವಾಗಿದೆ.

ಬಸ್ ನ ಮುಂಭಾಗದ ಎರಡು ಟೈರ್ ಗದ್ದೆಗಿಳಿದಿದೆ. ಸಿಫ್ಟ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ರಾಕೇಶ್ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ. ಜ್ಯೋತಿ ಮತ್ತು ಚೈತ್ರರಿಗೆ ಗಾಯಗಳಾಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ.

 ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.