
ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ
ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ ರಿಪ್ಪನ್‌ಪೇಟೆ : ಸ್ಥಳೀಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 58ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮೆರವಣಿಗೆ ಪಟ್ಟಣದಲ್ಲಿ ಭವ್ಯವಾಗಿ ಜರುಗಿತು. ವಿನಾಯಕ ವೃತ್ತದಲ್ಲಿ ಹಿಂದೂ ಧ್ವಜಾರೋಹಣ ನೆರವೇರಿಸಿದ ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ 11 ದಿನಗಳ ಗಣಪತಿ ಪ್ರತಿಷ್ಠಾಪನಾ ಪೂಜೆ ಭಕ್ತಿಭಾವದಿಂದ ಆರಂಭವಾಯಿತು. ವಿನಾಯಕ ವೃತ್ತದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅರ್.ಈಶ್ವರಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ…