
ರಿಪ್ಪನ್ ಪೇಟೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್ ಠಾಣೆಗೆ ಆಗಮಿಸಿದ ವಿಘ್ನ ನಿವಾರಕ
ರಿಪ್ಪನ್ ಪೇಟೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್ ಠಾಣೆಗೆ ಆಗಮಿಸಿದ ವಿಘ್ನ ನಿವಾರಕ ರಿಪ್ಪನ್ ಪೇಟೆ : ಪಟ್ಟಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಗಣಪತಿ ಬಪ್ಪನ ಪ್ರತಿಷ್ಠಾಪನೆ ನೆರವೇರಿದೆ. ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದಲ್ಲಿ ಬುಧವಾರ (ಗಣೇಶ ಚತುರ್ಥಿ) ದಿನ ಮೆರವಣಿಗೆಯ ಮೂಲಕ ಗಣಪತಿಯನ್ನು ಠಾಣೆಗೆ ತಂದು ಪ್ರತಿಷ್ಠಾಪಿಸಲಾಯಿತು. ಈ ದೃಶ್ಯ ಸ್ಥಳೀಯರಲ್ಲಿ ಭಾರಿ ಕುತೂಹಲ ಹುಟ್ಟಿಸಿತು. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಸಂಘಟನೆಗಳ ವತಿಯಿಂದ ಅಥವಾ ಮನೆಗಳಲ್ಲಿ ಮಾತ್ರ…


