ಇಸ್ಪೀಟು ಅಡ್ಡೆ ಪೊಲೀಸರ ದಾಳಿ – ನಗದು ಸಹಿತ ಹನ್ನೊಂದು ಮಂದಿ ವಶಕ್ಕೆ.!

ಇಸ್ಪೀಟು ಅಡ್ಡೆ ಪೊಲೀಸರ ದಾಳಿ – ನಗದು ಸಹಿತ ಹನ್ನೊಂದು ಮಂದಿ ವಶಕ್ಕೆ.! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಹಳೆಬಾಣೆಗ ಗ್ರಾಮದಲ್ಲಿ ಇಸ್ಪೀಡ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ನಗದು ಹಾಗೂ ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಹಳೆ ಬಾಣಿಗ ರಸ್ತೆಯ ಪೊದೆಯೊಂದರ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ದೊರೆತ ಹೊಸನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ…

Read More

HOSANAGARA | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಾಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

ಹೊಸನಗರ : ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯಕಾರಣಿ ಸಭೆಯ ನಿರ್ಣಯದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಲೇಖನಿ ಕೆಳಗಿಟ್ಟು, ಮೊಬೈಲ್ ಆಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ಗುರುವಾರ ಇಲ್ಲಿನ ತಾಲೂಕು ಕಚೇರಿ ಎದುರು ಕೈಗೆ ಕಪ್ಪು ಪಟ್ಟಿ ಧರಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಘಟನೆ ನಡೆದಿದೆ. ಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಘದ ಹೊಸನಗರ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಕಂದಾಯ…

Read More

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲಿ ; ಶಾಸಕ ಆರಗ ಜ್ಞಾನೇಂದ್ರ ಆಗ್ರಹ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲಿ ; ಶಾಸಕ ಆರಗ ಜ್ಞಾನೇಂದ್ರ ಆಗ್ರಹ ಹೊಸನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಆರಗಜ್ಞಾನೇಂದ್ರ ಆಗ್ರಹಿಸಿದರು. ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಬುಧವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ…

Read More

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ..

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ.. ಹೊಸನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ  ಹೆಚ್ ಆರ್ ಪ್ರಕಾಶ್ ಇಂದು ಅವರ ಸ್ವಗೃಹ ದಲ್ಲಿ ನಿಧನರಾದರು. ಪಟ್ಟಣದ ಹಳೆ ಸಾಗರ ರಸ್ತೆಯ ದಿವಂಗತ ಸೋಡಾ ರಾಜಪ್ಪನವರ ಪುತ್ರರಾದ ಎಚ್ ಆರ್ ಪ್ರಕಾಶ್ ಅವರು ಇಂದು ಮಧ್ಯಾಹ್ನ 1:30 ಸಮಯದಲ್ಲಿ ತಮ್ಮ 63 ರ ಹರೆಯದಲ್ಲಿ ಅವರ ಸ್ವಗೃಹದಲ್ಲಿ ತೀವ್ರ ಹೃದಯಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಪಟ್ಟಣದ ಶ್ರೀ…

Read More

ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ

ಹೊಸನಗರದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ ಹೊಸನಗರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದವರು ಪ್ರತಿಷ್ಠಾಪಿಸಿದ ಆರನೇ ವರ್ಷದ ಶ್ರೀ ಗಣೇಶೋತ್ಸವದ ವಿಸರ್ಜನಾ ಶೋಭ ಯಾತ್ರೆ ಶನಿವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು. ಶೋಭಾ ಯಾತ್ರೆಯೊಂದಿಗೆ ವಾದ್ಯಗೋಷ್ಠಿ ಡೊಳ್ಳು ಕುಣಿತ ಕೋಲಾಟ ಜಾನಪದ ಗೀತೆ ಬೊಂಬೆಗಳ ಕುಣಿತ ಹಲವಾರು ಪ್ರಕಾರದ ಜಾನಪದ ತಂಡಗಳು ಭಾಗವಹಿಸಿದ್ದು ಶೋಭಾ ಯಾತ್ರೆಗೆ ಮೆರಗು ನೀಡಲಾಗಿದೆ. ಶ್ರೀ ಗಣಪತಿ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ಹೆಚ್ಚುವರಿ…

Read More

ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಭೇಟೆಯಾಡಿದ ಹೊಸನಗರದ ಯುವಕ

ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ಭೇಟೆಯಾಡಿದ ಹೊಸನಗರದ ಯುವಕ ಹೊಸನಗರ : ತಾಲೂಕಿನ ಕಾರಣಗಿರಿಯ ಯುವಕನೊಬ್ಬ ವೈದ್ಯಕೀಯ  ವಿಭಾಗದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ. ತಾಲ್ಲೂಕಿನ ಕಾರಣಗಿರಿ ಗ್ರಾಮದ ವರ್ತಕ ಜಯರಾಮ್ ಮತ್ತು ರತ್ನ ದಂಪತಿಗಳ ಪುತ್ರ ಜೆ. ಸುಮನ್ ಸಾಧನೆಗೈದ ಯುವಕನಾಗಿದ್ದಾನೆ. ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸನಗರ ತಾಲ್ಲೂಕಿನ ಜೆ. ಸುಮನ್ ಅವರು ಅಂತಿಮ ವರ್ಷದ ಆರು ಪರೀಕ್ಷೆಗಳಲ್ಲಿ ಆರರಲ್ಲೂ ಉತ್ತಮ ಫಲಿತಾಂಶ ದಾಖಲಿಸಿ…

Read More

ಹೊಸನಗರದಲ್ಲಿ ಅದ್ದೂರಿಯಾಗಿ ಜರುಗಿದ ಈದ್ ಮಿಲಾದ್ ಮೆರವಣಿಗೆ

ಹೊಸನಗರದಲ್ಲಿ ಅದ್ದೂರಿಯಾಗಿ ಜರುಗಿದ ಈದ್ ಮಿಲಾದ್ ಮೆರವಣಿಗೆ ಹೊಸನಗರ : ಪಟ್ಟಣದಲ್ಲಿ ಇಂದು ಮುಸ್ಲಿಂ ಬಾಂಧವರು ಜಗತ್ತಿಗೆ ಮಾನವತೆಯನ್ನು ಪಸರಿಸಿದ ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಾಫಾ ರವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪ್ರಾರ್ಥನಾ ಮಂದಿರದಿಂದ ಹೊಸನಗರ ಬಸ್ ನಿಲ್ದಾಣ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಮುಸಲ್ಮಾನ ಭಾಂಧವರು ಯುವಕರ “ದಫ಼್’’ ಅಕರ್ಷಣೆಯೊಂದಿಗೆ  ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ  ಮೆರವಣಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

Read More

ಪಕ್ಷಪಾತ ಮಾಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಜೇನುಕಲ್ಲಮ್ಮ ದೇವಸ್ಥಾನದ ಏಳಿಗೆಗೆ ಶ್ರಮಿಸಿದ್ದೇನೆ : ಕಲಗೋಡು ರತ್ನಾಕರ್

ಪಕ್ಷಪಾತ ಮಾಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಜೇನುಕಲ್ಲಮ್ಮ ದೇವಸ್ಥಾನದ ಏಳಿಗೆಗೆ ಶ್ರಮಿಸಿದ್ದೇನೆ : ಕಲಗೋಡು ರತ್ನಾಕರ್ ಹೊಸನಗರ: ಸುಮಾರು 2012ರಿಂದ 2022ರವರೆವಿಗೆ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ತಾಪಕ ಸಮಿತಿಯ ಅಧ್ಯಕ್ಷನಾಗಿ ನಾನು ಸೇವೆ ಮಾಡಿದ್ದೇನೆ ಸಾಕಷ್ಟು ಹಣವನ್ನು ಸರ್ಕಾರದಿಂದ ಹಾಗೂ ದೇಣಿಗೆಯ ರೂಪದಲ್ಲಿ ಹಣ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ನನ್ನ ಆಡಳಿತಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೇ ಎಲ್ಲ ಪಕ್ಷದವರನ್ನು ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿಕೊಂಡು ದೇವಸ್ಥಾನದ ಏಳಿಗೆಗಾಗಿ  ಕೆಲಸ ಮಾಡಿದ್ದೇನೆ ಎಂದು ಜೇನುಕಲ್ಲಮ್ಮ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ…

Read More

HOSANAGARA | ಮಾಣಿ ಡ್ಯಾಂ – ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ

HOSANAGARA | ಮಾಣಿ ಡ್ಯಾಂ – ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರಿನ ಮಾಣಿ ಜಲಾಶಯದ ನೀರಿನ ಮಟ್ಟ ಏರುತ್ತಿದ್ದು ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇದ್ದು ಸುರಕ್ಷತೆ ದೃಷ್ಟಿಯಿಂದ ಅಂತಿಮ ಮುನ್ನೆಚ್ಚರಿಕೆ ನೀಡಲಾಗಿದೆ. ಯಡೂರಿನ ಮಾಣಿಯಲ್ಲಿರುವ 594.36 ಮೀ ಗರಿಷ್ಠ ಮಟ್ಟದ ಜಲಾಶಯದಲ್ಲಿ ನೀರಿನ ಮಟ್ಟ ಗುರುವಾರ(ಸೆ 12) ಬೆಳಗ್ಗೆ ತನಕ 591.90 ಮೀ ತಲುಪಿದೆ.2642 ಕ್ಯೂಸೆಕ್ಸ್ ಒಳಹರಿವು ಇದೆ. ಮಳೆ ಮುಂದುರೆದಿದ್ದು ನೀರಿನ ಹರಿವು ಕೂಡ ಇದೇ…

Read More

ನಕಲಿ ದಾಖಲೆ ಸೃಷ್ಠಿಸುತ್ತಿದ್ದ ವ್ಯಕ್ತಿಯ ಮನೆಯಲ್ಲಿ 48 ನಕಲಿ ಸೀಲ್, ನೂರಾರು ನಕಲಿ ಹಕ್ಕುಪತ್ರ ಪತ್ತೆ, ಆರೋಪಿ ವಿರುದ್ಧ ಪ್ರಕರಣ

ನಕಲಿ ದಾಖಲೆ ಸೃಷ್ಠಿಸುತ್ತಿದ್ದ ವ್ಯಕ್ತಿಯ ಮನೆಯಲ್ಲಿ 48 ನಕಲಿ ಸೀಲ್, ನೂರಾರು ನಕಲಿ ಹಕ್ಕುಪತ್ರ ಪತ್ತೆ, ಆರೋಪಿ ವಿರುದ್ಧ ಪ್ರಕರಣ ಹೊಸನಗರ; ನಕಲಿ ಹಕ್ಕುಪತ್ರ ತಯಾರಿಸಿ, ಜನರನ್ನು ವಂಚಿಸುತ್ತಿದ್ದ ಪ್ರಕರಣವೊಂದನ್ನು ತಹಸೀಲ್ದಾರ್ ಎಚ್.ಜೆ.ರಶ್ಮಿ ಬೇಧಿಸಿದ್ದಾರೆ. ಹೊಸನಗರ ತಾಲೂಕಿನ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೆಕೊಪ್ಪದ ರಾಜೇಂದ್ರ ಎಂಬಾತ ನಕಲಿ ಹಕ್ಕುಪತ್ರ ಹಾಗು ಸರಕಾರಿ ದಸ್ತಾವೇಜುಗಳ ನಕಲಿ ದಾಖಲೆ ಸೃಷ್ಠಿಸಿ ಮಾರುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದರು….

Read More