RIPPONPETE | ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – ಮದ್ಯದ ಹಾವಳಿಗೆ ಮತ್ತೊಂದು ಬಲಿ

RIPPONPETE | ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – ಮದ್ಯದ ಹಾವಳಿಗೆ ಮತ್ತೊಂದು ಬಲಿ

ರಿಪ್ಪನ್‌ಪೇಟೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಳಿತಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಕೆದಲುಗುಡ್ಡೆ ಗ್ರಾಮದ ಷಣ್ಮುಖ (50)ವರ್ಷ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯರು ವೈದ್ಯರಾದ ಅನಂತ್ ಮಯ್ಯ ರವರಿಗೆ ಮಾಹಿತಿ ತಿಳಿಸಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಅವರು ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಧೃಡ ಪಡಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.

ಮೃತ ವ್ಯಕ್ತಿಯು ತೀವ್ರ ಮದ್ಯವಯಸನಿಯಾಗಿದ್ದು ಕಳೆದೆರಡು ದಿನಗಳಿಂದ ಮನೆಗೆ ತೆರಳದೇ ಬಸ್ ನಿಲ್ದಾಣದಲ್ಲಿಯೇ ತಂಗಿದ್ದ ಎನ್ನಲಾಗುತ್ತಿದೆ.

ಸ್ಥಳಕ್ಕೆ ಪಟ್ಟಣದ ಪೊಲೀಸ್ ಸಿಬ್ಬಂದಿ ಗಳು ಭೇಟಿ ನೀಡಿದ್ದಾರೆ.

ಮದ್ಯದ ಹಾವಳಿಗೆ ಪಟ್ಟಣದಲ್ಲಿ ಹಲವಾರು ಪ್ರಾಣಹಾನಿಗಳು ಸಂಭವಿಸುತಿದ್ದು ಅದಕ್ಕೆ ಈ ಪ್ರಕರಣವೊಂದು ಸೇರ್ಪಡೆಯಾಗಿದೆ.2023 ರ ಜೂನ್ ನಲ್ಲಿ ಇದೇ ಬಸ್ ನಿಲ್ದಾಣದಲ್ಲಿ ತೀವ್ರ ಮದ್ಯವ್ಯಸನದಿಂದ ಛತ್ರಿ ರಿಪೇರಿ ಮಾಡುವ ಹೆದ್ದಾರಿಪುರ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದನು ಆ ಘಟನೆ ನಡೆದ ಎರಡು ದಿನಗಳ ಅಂತರದಲ್ಲಿ ತೀರ್ಥಹಳ್ಳಿ ರಸ್ತೆಯ ನ್ಯೂ ಚಾಣಕ್ಯ ಬಾರ್ ನಲ್ಲಿ ಕೆಲಸ ಮಾಡುತಿದ್ದ ಎನ್ನುವ ವ್ಯಕ್ತಿಯೊಬ್ಬ ಅದೇ ಬಾರ್ ನ ಹಿಂಬಾಗದಲ್ಲಿ ಶವವಾಗಿ ಪತ್ತೆಯಾಗಿದ್ದನು.ಕಳೆದೊಂದು ವಾರದಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ವಿಪರೀತ ಮದ್ಯ ಸೇವನೆಯಿಂದ ಮೂವರು ಮೃತಪಟ್ಟಿರುವುದು ಆತಂಕಕಾರಿಯಾಗಿದೆ.

ತೀರ್ಥಹಳ್ಳಿ ರಸ್ತೆಯಲ್ಲಿರುವ ಬಾರ್ ನ ಮಾಲೀಕರು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದೇ ಬಾರ್ ಹಿಂಭಾಗದಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಟ್ಟಿದ್ದು ಕೆಲವೊಂದು ಕಿಂಡಿಗಳನ್ನು ಸೃಷ್ಟಿಸಿದ್ದಾರೆ.ಈ ಕಿಂಡಿಗಳು ಮುಂಜಾನೆಯ ಕುಡುಕರಿಗೆ ಸ್ವರ್ಗದ ಬಾಗಿಲಂತೆ ಕಂಡು ಬರುತ್ತಿದೆ.ಈ ಕುಡುಕರಿಂದ ಹಿಂಭಾಗದಲ್ಲಿರುವ ಸ್ಥಳೀಯರಿಗೆ ದಿನನಿತ್ಯ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಇನ್ನೂ ಪಟ್ಟಣದ ಬಸ್ ನಿಲ್ದಾಣವಂತೂ ಕುಡುಕರ ಪಾಲಿಗೆ ಸ್ವರ್ಗದಂತಾಗಿದ್ದೂ ಇಲ್ಲಿಗೆ ಬರುವ ಮಹಿಳಾ ಪ್ರಯಾಣಿಕರೂ ಎಷ್ಟೊತ್ತಿಗೆ ಬಸ್ ಬರುತ್ತದೆ ಎಂದು ಉಸಿರು ಬಿಗಿಹಿಡಿದು ಕುಳಿತಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲೇ ಇರುವ ಬಾರ್ ಗಳಲ್ಲಿ ಕುಡಿದು ವಿಶ್ರಾಂತಿ ತೆಗೆದುಕೊಂಡು ಮತ್ತೆ ಕುಡಿದು ಅಲ್ಲೇ ಮಲಗಿರುವವ ಕೆಲವರನ್ನು ಕಂಡರೆ ಅವರೆಲ್ಲಾ ಯಮಪಾಶಕ್ಕೆ ಕ್ಯೂ ನಲ್ಲಿ ಕಾಯುತ್ತಿರುವಂತೆ ಭಾಸವಾಗುತ್ತದೆ.

ಒಟ್ಟಾರೆಯಾಗಿ ಇನ್ನಾದರು ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಾರೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *