ಕಳೂರುಕಟ್ಟೆಯಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ  – ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಣೆ

ಕಳೂರುಕಟ್ಟೆಯಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ  – ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಣೆ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಸಂಖ್ಯೆ ಸಾಕಷ್ಟಿರುವ ಕಾರಣಕ್ಕೆ ನೂತನ ಆಶ್ರಯ ಬಡಾವಣೆ ನಿರ್ಮಾಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳೂರು ಗ್ರಾಮದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 10 ಎಕರೆ ಭೂ ಮಂಜೂರಾತಿಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು,…

Read More

ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು – ಎಲ್ಲೆಲ್ಲಿ ಏನೇನಾಗಿದೆ..!?

ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು – ಎಲ್ಲೆಲ್ಲಿ ಏನೇನಾಗಿದೆ..!? ಹೊಸನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 3;30 ರಿಂದ ವರ್ಷದ ಮೊದಲ ಮಳೆ ಸತತ ಒಂದೂವರೆ ಗಂಟೆಗಳ ಕಾಲ ಬಿರುಗಾಳಿ ಸಹಿತ ಸುರಿದಿದ್ದು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೊಪ್ಪರಗುಂಡಿ ಸೇತುವೆ ಬಳಿಯಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು , ಎಂ ಗುಡ್ಡೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ , ಕೋಡುರು ಸಮೀಪದಲ್ಲಿ ಮುಖ್ಯ…

Read More

NSUI ಹೊಸನಗರ ಬ್ಲಾಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ನೇಮಕ

NSUI ಹೊಸನಗರ ಬ್ಲಾಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ನೇಮಕ ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಎನ್ ಎಸ್ ಯುಐ ಸಂಘಟನೆಯ ತಾಲೂಕ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ಎಸ್ ರವರನ್ನು ನೇಮಕಗೊಳಿಸಿ ಶಿವಮೊಗ್ಗ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಎಸ್ ಎನ್ ಆದೇಶಿಸಿದ್ದಾರೆ. ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಯುವಮುಖಂಡ ಅಶೋಕ್‌ ಬೇಳೂರು ಸೂಚನೆಯ ಮೇರೆಗೆ ಈ ಕೂಡಲೇ ಜಾರಿಗೆ ಬರುವಂತೆ ಕಿರಣ್ ಕುಮಾರ್ ರವರನ್ನು ಹೊಸನಗರ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.

Read More

HOSANAGARA | ಚಿರತೆ ದಾಳಿಗೆ ಜಾನುವಾರು ಬಲಿ

HOSANAGARA | ಚಿರತೆ ದಾಳಿಗೆ ಜಾನುವಾರು ಬಲಿ ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಬ್ರಹ್ಮೇಶ್ವರದಲ್ಲಿ ಕೆಲ ದಿನಗಳಿಂದ ಚಿರತೆ ಸಂಚರಿಸುತ್ತಿದ್ದು ಗ್ರಾಮದ ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ. ಇಲ್ಲಿನ ಅಂಬೇಡ್ಕರ್ ಕಾಲೋನಿ ಸಮೀಪದ ಅರಣ್ಯ ಪ್ರದೇಶದಲ್ಲಿ 4 ದನಗಳ ಶವದ ಅವಶೇಷಗಳು ದೊರಕಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಗ್ರಾಮಸ್ಥರು ಪತ್ತೆ ಮಾಡಿರುವುದು, ಈ ಭಾಗದಲ್ಲಿ ಚಿರತೆಯ ಇರುವಿಕೆಯನ್ನು ದೃಢಪಡಿಸಿದೆ. ಕೆಲ ದಿನಗಳಿಂದ ಕಾಡಿಗೆ ಮೇಯಲು ಬಿಟ್ಟ ಜಾನುವಾರುಗಳು ಮನೆ…

Read More

ಅಪಘಾತಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.! – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!!??

ಅಪಘಾತಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.! – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!!?? ಹೊಸನಗರ: ಡಿಸೇಲ್ ಹಾಕಿಸುತ್ತಿದ್ದ ಪಿಕಪ್ ವಾಹನಕ್ಕೆ ರಾಷ್ಟ್ರೀಯ ಪ್ರಕೃತಿ ವಿಕೋಪ‌ ನಿರ್ವಹಣಾ ತಂಡ (NDRF ) ದ ವಾಹನ ಡಿಕ್ಕಿ ಹೊಡೆದಿದ್ದಲ್ಲದೆ, , ಅಪಘಾತದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಅದರ ಸಿಬ್ಬಂದಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಮೂಗಿನಲ್ಲಿ ರಕ್ತ ಬರುವ ಹಾಗೇ  NDRF ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಹೊಸನಗರ ಪೆಟ್ರೋಲ್ ಬಂಕ್…

Read More

RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

RIPPONPETE | ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮುಡುಬ ಗ್ರಾಮದ ಪಾಲಾಕ್ಷಪ್ಪ ಗೌಡ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ ನಷ್ಟವಾಗಿರುವ ಘಟನೆ ನಡೆದಿದೆ. ಮುಡುಬಾ ಗ್ರಾಮದ ಪಾಲಾಕ್ಷಪ್ಪ ರವರಿಗೆ ಸೇರಿದ 200ಕ್ಕೂ ಹೆಚ್ಚು ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವುಂಟಾಗಿದೆ. ಈ ಅವಘಡದಲ್ಲಿ 50ಕ್ಕೂ ಹೆಚ್ಚು ನೀರಿನ ಪೈಪುಗಳು ಸುಟ್ಟು ಭಸ್ಮವಾಗಿದೆ. ಅವಘಡ ನಡೆದ ಸ್ಥಳದಲ್ಲಿ…

Read More

ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ

ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬಕ್ಕೆ ಹೊಸನಗರದಲ್ಲಿ ಜನಸಾಗರ ಹೊಸನಗರ; ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವೈಶಿಷ್ಠö್ಯಪೂರ್ಣವಾಗಿ ಫೆ.22ರ ಶನಿವಾರ ರಾತ್ರಿ ಹೊಸನಗರದ ನೆಹರು ಮೈದಾನದಲ್ಲಿ ಬ್ಲಾಕ್ ಕಾಂಗ್ರೇಸ್ ಪಕ್ಷ ಹಾಗೂ ಬೇಳೂರು ಅಭಿಮಾನಿ ಬಳಗದವರು ಆಚರಿಸಲಾಗಿದ್ದು ನೆಹರು ಮೈದಾನದ ತುಂಬಾ ಜನ ಸಾಗರವೇ ಸೇರಿ ಬೇಳೂರು ಹುಟ್ಟು ಹಬ್ಬದ ಶುಭಾಷಯ ಕೋರಿದರು. ದೇಶವನ್ನು ಸೈನಿಕರು ರಕ್ಷಣೆ ಮಾಡಿದ ಹಾಗೇ ಬಡವರ ಶ್ರೀ…

Read More

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಹೊಸನಗರ : ಸಾಗರ- ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಬಿ ಜಿ  ಚಂದ್ರಮೌಳಿ ನೇತೃತ್ವದಲ್ಲಿ  ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳು ಜೊತೆಗೂಡಿ  ಕೊಡೂರಿನ ಶಂಕರೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿ ಸುತ್ತಮುತ್ತಲಿನ ಶಾಲೆಗಳಿಗೆ ಸಿಹಿ ಹಂಚಲಾಯಿತು. ಈ ಸಮಯದಲ್ಲಿ ಕಲಗೋಡ್ ಉಮೇಶ್ ಸುಧಾಕರ್ ಗೌಡ ವೇದಾಂತ ಗೌಡ್ರು ರಂಜಿತ್ ಕುಮಾರ್ ವಿಕಾಸ್ …

Read More

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ರಸಮಂಜರಿ, ಕಾಗೋಡು ತಿಮ್ಮಪ್ಪಗೆ ಸನ್ಮಾನ

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ರಸಮಂಜರಿ, ಕಾಗೋಡು ತಿಮ್ಮಪ್ಪಗೆ ಸನ್ಮಾನ ಹೊಸನಗರ ; ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವೈಶಿಷ್ಠ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು. ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹುಟ್ಟುಹಬ್ಬದ ಪ್ರಯುಕ್ತ ಫೆ. 22 ರಂದು ಇದೇ ಮೊದಲ ಬಾರಿ ಹೊಸನಗರ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನರೊಂದಿಗೆ ಬೆರೆಯುವ ಶಾಸಕ ಬೇಳೂರು ಗೋಪಾಲಕೃಷ್ಣ…

Read More

ಫೆ 22 ರಂದು ಹೊಸನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ ಸಂಭ್ರಮ | 10 ಸಾವಿರಕ್ಕೂ ಹೆಚ್ವು ಜನ ಸೇರುವ ನಿರೀಕ್ಷೆ

ಫೆ 22 ರಂದು ಹೊಸನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ ಸಂಭ್ರಮ | 10 ಸಾವಿರಕ್ಕೂ ಹೆಚ್ವು ಜನ ಸೇರುವ ನಿರೀಕ್ಷೆ ರಿಪ್ಪನ್‌ಪೇಟೆ : ಫೆಬ್ರವರಿ 22 ರಂದು ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅದ್ದೂರಿಯಾಗಿ  ಆಚರಿಸಲಿದ್ದು 10,000 ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದು ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ…

Read More