
ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ ಪದ್ಮಾವತಿ ದೇವಿ ಉಯ್ಯಾಲೆ ಸೇವೆ
ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ ಪದ್ಮಾವತಿ ದೇವಿ ಉಯ್ಯಾಲೆ ಸೇವೆ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಅಧಿದೇವತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ರಜತ ಉಯ್ಯಾಲೆ ಸೇವೆಯನ್ನು ಶ್ರೀಕ್ಷೇತ್ರದ ಚಂದ್ರಶಾಲೆಯಲ್ಲಿ ಫೆ. 18ರಂದು ಸಾಯಂಕಾಲ ಶೋಡೋಪಚಾರ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು. ಅಷ್ಟವಿದಾರ್ಚನೆ ಪೂಜೆಯಲ್ಲಿ ವಿವಿಧ ಪುಷ್ಪ, ಫಲ, ಸುಗಂಧ ದ್ರವ್ಯಗಳಿಂದ ಶ್ರೀ ಪದ್ಮಾವತಿ ದೇವಿಯನ್ನು ಆರಾಧಿಸಿ, ಪದ್ಮಾವತಿ ದೇವಿ ಸ್ತುತಿಗಳೊಂದಿಗೆ ಶಾಸ್ತ್ರೋಕ್ತ ವಿಧಾನದಲ್ಲಿ ಉಯ್ಯಾಲೆ ಸೇವೆಯಲ್ಲಿ ಊರ-ಪರವೂರ ಭಕ್ತರು ಸಮರ್ಪಿಸಿಕೊಂಡರು. ಸ್ವರ್ಣ ಪಲ್ಲಕ್ಕಿಯಲ್ಲಿ ಉತ್ಸವ ಶ್ರೀ ಪದ್ಮಾವತಿ ದೇವಿ…