Headlines

ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ

ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯ ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ,ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಲಿಂಗಪ್ಪ ಕಗ್ಗಲಿ, ಮೋಹನ್,ಜಯಲಕ್ಷಿ, ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ, ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು.

Read More

RIPPONPETE | ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

RIPPONPETE | ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ ರಿಪ್ಪನ್ ಪೇಟೆ : ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿರುವ ಮೂಲಕ ಸೌಹಾರ್ಧತೆ ಮೆರೆದಿರುವ ಘಟನೆ ನಡೆದಿದೆ. ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (‌ತನ್ವಿ ಮೊಬೈಲ್ ವರ್ಲ್ಡ್)‌ ಅಂಗಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ…

Read More

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಗುರುವಾರ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.  ಅಂಗಡಿಗಳು, ಶೋರೂಮ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ದೀಪಾವಳಿಯ ಅಮವಾಸ್ಯೆಯ ದಿನವಾದ ಗುರುವಾರ ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು. ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ,…

Read More

RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ

RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ ಮಲೆನಾಡಿನ ಪ್ರದೇಶದಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಿಪ್ಪನ್‌ಪೇಟೆ ಪಟ್ಟಣದ ಮೇಲಿನ ಕೆರೆಹಳ್ಳಿ ಹಾಗೂ ಕೆಳಗಿನ ಕೆರೆಹಳ್ಳಿ ಗ್ರಾಮಸ್ತ್ಗರು ತಮ್ಮ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಹಬ್ಬವನ್ನು ಆಚರಿಸಿದರು. ರೈತರು ತಮ್ಮ ಕುಟುಂಬದ ನೇಮ ನಿಷ್ಠೆಯಂತೆ ವರ್ಷವೂ…

Read More