ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ
ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗದ ಲಕ್ಕಿನಕೊಪ್ಪದ ದಂಪತಿ ಅರೆಸ್ಟ್ ಆಗಿದ್ದಾರೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣ ಸಂಬಂದ ಪೊಲೀಸರು ತನಿಖೆ ನಡೆಸಿ ಶಿವಮೊಗ್ಗದ ಲಕ್ಕಿನಕೊಪ್ಪ ನಿವಾಸಿ ಸಾದಿಕ್ ಹಾಗೂ ಸಲ್ಮಾ ಎಂಬವರನ್ನ ಬಂಧಿಸಿದ್ದಾರೆ. ಎನ್‌ಆರ್‌ಪುರದ ಮುತ್ತಿನಕೊಪ್ಪದಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣದ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಸಂಶಯದ ಮೇರೆಗೆ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಗೊತ್ತಾಗಿದೆ….