Headlines

ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಎಟಿಎಂ ಕಾರ್ಡ್ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಎಟಿಎಂ ಕಾರ್ಡ್ ಕಳ್ಳತನ ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ, ನಗದು ಕಳ್ಳತನ ಮುಂದುವರೆದಿದೆ. ನಗರದ KSRTC ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನವಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿದ್ದ ಗೀತಾ ಎಂಬುವವರು ನ್ಯಾಮತಿಗೆ ಹಿಂತಿರುಗುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ಗಮನಿಸಿದಾಗ ಜಿಪ್‌ ತೆರೆದಿರುವುದು ಗೊತ್ತಾಗಿದೆ….

Read More

ಅಕ್ರಮ ಮರಳು ದಂಧೆಗೆ ಸಂಪೂರ್ಣ ಕಡಿವಾಣ: ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ

ಅಕ್ರಮ ಮರಳು ದಂಧೆಗೆ ಸಂಪೂರ್ಣ ಕಡಿವಾಣ: ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ ಶಿವಮೊಗ್ಗ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್‌ಗಳನ್ನು ಸರ್ಕಾರದ ವಿವಿಧ ಕಾಮಗಾರಿಗಳಿಗೆ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ನಿಯಮಾನುಸಾರ ಸರ್ಕಾರದ ಮರಳು ನೀತಿಯ ನಿಬಂಧನೆಗಳಿಗೊಳಪಟ್ಟು ಇಲಾಖೆಗಳಿಗೆ ಕಾಯ್ದಿರಿಸಲು ಜಿಲ್ಲಾ ಸಮಿತಿಗೆ ಇರುವ ಪ್ರದತ್ತ ಅಧಿಕಾರವನ್ನು ಬಳಸಿ, ಗಣಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ…

Read More

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ ಶಿವಮೊಗ್ಗ : ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ನಗರಾಧ್ಯಕ್ಷರಾಗಿದ್ದ ಜಗದೀಶ್‌ ಕೆಎನ್‌ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಜಗದೀಶ್‌ ಸೇರಿದಂತೆ ಒಟ್ಟು ಮೂರು ಹೆಸರುಗಳನ್ನು ರಾಜ್ಯಮಟ್ಟಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಳಹಿಸಿಕೊಟ್ಟಿತ್ತು. ಈ ಪೈಕಿ ಚುನಾವಣಾ ಪ್ರಕ್ರಿಯೆ ವೇಳೆ ಜಗದೀಶ್‌ ಮಾತ್ರ ನಾಮಪತ್ರ ಸಲ್ಲಿಸಿದ್ದರು.  ಜಿಲ್ಲಾಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದಾರೆ. ಉಳಿದಂಥೆ  ಜಿಲ್ಲಾ ಬಿಜೆಪಿ ಪ್ರತಿನಿಧಿಯಾಗಿ ಮಾಜಿ ಎಂಎಲ್ಸಿ ಎಸ್ ರುದ್ರೇಗೌಡ ಆಯ್ಕೆಯಾಗಿದ್ದಾರೆ.

Read More

ಪರಿಸರ ಹೋರಾಟಗಾರ ಗಿರೀಶ್ ಆಚಾರ್ ರವರಿಗೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿ

ಪರಿಸರ ಹೋರಾಟಗಾರ ಗಿರೀಶ್ ಆಚಾರ್ ರವರಿಗೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿ ಬೆಂಗಳೂರಿನಲ್ಲಿ ನ್ಯಾಷನಲ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ 2025 ಎಂಬ ಹೆಸರಿನ ಪ್ರಶಸ್ತಿಯನ್ನು ಪರಿಸರ ಹೋರಾಟಗಾರ , ಮಲೆನಾಡಿನ ಬುದ್ದ ಖ್ಯಾತಿಯ ಗಿರೀಶ್ ಆಚಾರ್ ರವರಿಗೆ ಲಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸವಾಲು ಮತ್ತು ಹಲವಾರು ಅಡೆತಡೆಗಳ ಹೊರತಾಗಿಯೂ ತಮ್ಮ ಪರಿಸರ ಉಳಿಸುವ ಹೋರಾಟ ಕ್ಷೇತ್ರದಲ್ಲಿ ತಮ್ಮದೇ ಶೈಲಿಯಲ್ಲಿ ಸಾಧನೆಗೈದ ಹೊಸನಗರ ತಾಲೂಕಿನ ಪುಟ್ಟ ಗ್ರಾಮ ಬ್ರಹ್ಮೇಶ್ವರದ…

Read More

ಕೊಟ್ಟಿಗೆಯಲ್ಲಿದ್ದ ಕರು ಮೇಲೆ ಚಿರತೆ ದಾಳಿ

ಕೊಟ್ಟಿಗೆಯಲ್ಲಿದ್ದ ಕರು ಮೇಲೆ ಚಿರತೆ ದಾಳಿ ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲುಮೆಜಡ್ಡಿನ ರುಕ್ಮಿಣಮ್ಮನವರ ಮನೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಕರುವಿನ ಚೀರಾಟ ಕೇಳಿ, ಎದ್ದು ಬರುವಷ್ಟರಲ್ಲಿ ಚಿರತೆ ಕರುವನ್ನು ಬಿಟ್ಟು ಪರಾರಿಯಾಗಿದೆ. ಕರುವಿನ ಮುಖಕ್ಕೆ ತೀವ್ರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಎರಡು ವಾರದ ಹಿಂದೆ ಪಕ್ಕದ ಊರು ಗುಬ್ಬಿಗದಲ್ಲಿ ಚಿರತೆಯೊಂದು ನಾಯಿಯನ್ನು…

Read More

ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಆಟೋ ಚಾಲಕ

ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಆಟೋ ಚಾಲಕ ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ‌ ನಗರದಲ್ಲಿ ನಡೆದಿದೆ. ಬಜಾಜ್ ಮತ್ತು ಟಿವಿಎಸ್ ಫೈನಾನ್ಸ್ ನಿಂದ ಸಾಲ ಪಡೆದ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದ  ಮೆಗ್ಗಾನ್ ಗೆ ದಾಖಲಿಸಲಾಗಿದೆ. ಬಜಾಜ್ ನಲ್ಲಿ 1.40 ಸಾಲ ಪಡೆದಿದ್ದರು. ಇದಕ್ಕೆ ತಿಂಗಳು 8.031 ಕಂತು ಕಟ್ಟುತ್ತಿರುವುದಾಗಿ.‌ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ  ಮತ್ತು ಟಿವಿಎಸ್…

Read More

RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ

RIPPONPETE | ಹುಲ್ಲು ಸಾಗಿಸುತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ ಹುಲ್ಲು ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕಣಬಂದೂರು ಗ್ರಾಮದಲ್ಲಿ ನಡೆದಿದೆ. ಕಣಬಂದೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಒಣ ಹುಲ್ಲಿನ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಹೊತ್ತಿ ಉರಿದಿದೆ. ಸ್ಥಳೀಯರು , ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ…

Read More

ಹೆದ್ದಾರಿಪುರದ ಸಿಂಧುಗೆ ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನ

ಹೆದ್ದಾರಿಪುರದ ಸಿಂಧುಗೆ ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಮೂರು ಚಿನ್ನ ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರದ ಸಿಂಧು ಕೆ.ಟಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ನೊಂದಿಗೆ ಮೂರು ಚಿನ್ನದ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ಹೆದ್ದಾರಿಪುರ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ತಾಯಿ ದೇವಮ್ಮ ಮತ್ತು ತಿಮ್ಮಪ್ಪ ಗೌಡ ಅವರ ಪುತ್ರಿಯಾದ ಸಿಂಧು ಕೆ.ಟಿ ಅವರು, ಹೆದ್ದಾರಿಪುರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು,…

Read More

ಕಾಡಾನೆಗಳ ಸ್ಥಳಾಂತರ | ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಚಾರಕ್ಕೆ ಕೆಲಕಾಲ ಅಡಚಣೆ

ಕಾಡಾನೆಗಳ ಸ್ಥಳಾಂತರ | ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಚಾರಕ್ಕೆ ಕೆಲಕಾಲ ಅಡಚಣೆ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಹಲವಾರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದ ಆನೆಗಳ ಹಿಂಡನ್ನು ಅರಣ್ಯ ಇಲಾಖೆಯ ಕಾರ್ಯಾಚರಣೆ ನಡೆಸಿ ಓಡಿಸುವ ಸಂಧರ್ಭದಲ್ಲಿ ಸೂಡೂರಿನಲ್ಲಿ ರಸ್ತೆ ಮಧ್ಯೆ ಆನೆಗಳು ಪುಂಡಾಟ ನಡೆಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಶಿವಮೊಗ್ಗ-ರಿಪ್ಪನ್ ಪೇಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಘಟನೆ ನಡೆದಿದೆ. ಮಲೆನಾಡಿನ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ…

Read More

ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ

ಸಾಲಗಾರರ ಕಾಟಕ್ಕೆ ಬೆದರಿ ಸಾವಿಗೆ ಶರಣಾದ ವ್ಯಕ್ತಿ – ಐದು ಸಾವಿರ ಸಾಲಕ್ಕೆ ಜೀವತೆತ್ತ ವ್ಯಕ್ತಿ ಫೈನಾನ್ಸ್ ನವರ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ ವ್ಯಕ್ತಿಯೋರ್ವ ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹೇಶ್ (48) ಮೃತ ವ್ಯಕ್ತಿಯಾಗಿದ್ದಾರೆ. ಖಾಸಗಿ ವ್ಯಕ್ತಿಯ ಬಳಿ 5 ಸಾವಿರ ರೂಪಾಯಿ ಸಾಲ ಪಡೆದಿದ್ದರು. 5…

Read More