ಮುಂದಿನ 4 ದಿನಗಳವರೆಗೆ ಗುಡುಗು ಸಹಿತ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ | Weather Report

ಮುಂದಿನ 4 ದಿನಗಳವರೆಗೆ ಗುಡುಗು ಸಹಿತ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ Weather Report: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ(Rain)ಯಾಗುತ್ತಿದ್ದು ರೈತರ ಮುಖದಲ್ಲಿ ಸಂತಸ ತರಿಸಿದೆ ಏಕೆಂದರೆ ಕಳೆದ ಒಂದು ವರ್ಷದಿಂದ ಮಳೆ ಬಾರದೆ ರೈತರು ಕಂಗಾಲಾಗಿದ್ದರು ಇದೀಗ ವರುಣ ಕೃಪೆ ತೋರಿದ್ದು, ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆಗುತ್ತಿದೆ.ಅಲ್ಲದೆ ಮುಂದಿನ ನಾಲ್ಕು ದಿನಗಳ ವರೆಗೆ ಪೂರ್ವ ಮುಂಗಾರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇಂದು ಉಡುಪಿ, ಉತ್ತರ…

Read More

ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು | sandal theft

ಮನೆಯಂಗಳದಲ್ಲಿದ್ದ ಶ್ರೀಗಂದದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು ಸಾಗರ : ನಗರದ ಶ್ರೀರಾಂಪುರ ಬಡಾವಣೆಯ ಪ್ರಗತಿಪರ ಕೃಷಿಕ ಗೌತಮ್ ಪೈರವರ ಮನೆ ಅಂಗಳದಲ್ಲಿದ್ದ ಎರಡು ಗಂಧದ ಮರದ ಕಾಂಡವನ್ನು ಕತ್ತರಿಸಿಕೊಂಡು ಕಳ್ಳರು ಹೊತ್ತೊಯ್ದಿರುವ ಪ್ರಕರಣ ನಡೆದಿದೆ. ಗೌತಮ್ ಪೈ ಪ್ರಗತಿಪರ ಕೃಷಿಕರಾಗಿದ್ದು, ಮನೆಯ ಅಂಗಳದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಹೂ, ಹಣ್ಣಿನ ಗಿಡಗಳನ್ನು ಬೆಳೆದು ಮಾದರಿಯಾಗಿದ್ದಾರೆ. ಎರಡು ಗಂಧದ ಮರಗಳು 18 ಹಾಗೂ 22 ವರ್ಷದ ಅವಧಿಯಲ್ಲಿ ಬೆಳೆದಿದ್ದು, ಕಾಂಡಗಳು ಸದೃಢವಾಗಿ ಬೆಳೆದಿದ್ದವು. ಅವರೇ ತಿಳಿಸಿದಂತೆ ಸುಮಾರು…

Read More

ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಕಬ್ಬಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ|kabbadi

ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ  ಆಯ್ಕೆ  ರಿಪ್ಪನ್‌ಪೇಟೆ : ಪಟ್ಟಣದ ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬ್ಬಡ್ಡಿ  ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ  ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ  ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ   ಮೂಲಕ  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಗ್ರಾಮೀಣ ಪ್ರದೇಶವಾದ ರಿಪ್ಪನ್ ಪೇಟೆ ಪಟ್ಟಣದ ವಿದ್ಯಾರ್ಥಿಗಳ…

Read More

ಸಾಗರ : ಕೊರೊನಾ ಜಾಗೃತಿ ಕುರಿತು ಜೋಗಿಪದ ಕಾರ್ಯಕ್ರಮ

ಸಾಗರ :ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನ ಶ್ರೀ ಆನಂದೇಶ್ವರ ಕಲಾ ಸಂಘ ಇವರ ವತಿಯಿಂದ ಕೊರೊನಾ ಜಾಗೃತಿ ಕುರಿತು ಜೋಗಿ ಪದ ಕಾರ್ಯಕ್ರಮವನ್ನು ಸಾಗರದ ದೇವರಾಜ ಅರಸು ಸಭಾ ಭವನದಲ್ಲಿ ಇಂದು ಏರ್ಪಡಿಸಲಾಗಿತ್ತು.  ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್‍ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ.ವಾಸುದೇವ, ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪ್ರಕಾಶ್ ಭೋಸ್ಲೆ, ಆರೋಗ್ಯ ಇಲಾಖೆ ಸಂಘದ ಜಿಲ್ಲಾಧ್ಯಕ್ಷ ಮ.ಸ,ನಂಜುಂಡಸ್ವಾಮಿ, ತಾಲ್ಲೂಕು ಆರೋಗ್ಯ ಇಲಾಖೆ ನೌಕರರ…

Read More

ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ – ಪ್ರಕರಣ ದಾಖಲು

ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ – ಪ್ರಕರಣ ದಾಖಲು ಶಿವಮೊಗ್ಗ, ಸೆ.9: ನಗರದ ಹೃದಯ ಭಾಗವಾದ ಶರಾವತಿ ನಗರ ಎ ಬ್ಲಾಕ್ ಹಾಗೂ ಸರ್ಕ್ಯೂಟ್ ಹೌಸ್ ಬಳಿ ಭಾನುವಾರದ ಬೆಳಗಿನ ಜಾವ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಯತ್ನ ನಡೆದ ಪ್ರಕರಣ ನಡೆದಿದೆ ಮೂಲಗಳ ಪ್ರಕಾರ, ತಾಯಿ ಮತ್ತು ಸಹೋದರನನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಹತ್ತಿಸಿ ಸ್ವಂತ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು, ಇಬ್ಬರು ಸಂಶಯಾಸ್ಪದ ಯುವಕರು ಹಿಂಬಾಲಿಸಿದ್ದಾರೆ….

Read More

RIPPONPETE |ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಲಕ್ಷ್ಯ – ಕನ್ನಡಪರ ಹೋರಾಟಗಾರರ ಆಕ್ರೋಶ

ರಿಪ್ಪನ್‌ಪೇಟೆ : ನಾಡಿನಾದ್ಯಂತ ದೀಪಾವಳಿ ಹಬ್ಬದ ನಡುವೆಯೂ ಸಡಗರ ಹಾಗೂ ಸಂಭ್ರದಿಂದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತಿದ್ದು ಅದಕ್ಕೆ ತದ್ವಿರುದ್ಧ ಎಂಬುವಂತೆ ಪ್ರಾಂಶುಪಾಲರ ನಿರ್ಲಕ್ಷ್ಯದಿಂದ 800 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೇ ನಿರ್ಲಕ್ಷ್ಯ ತೋರಿರುವ ಘಟನೆ ನಡೆದಿದೆ. ಹೌದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತಿದ್ದಾರೆ.ಈ ಕಾಲೇಜು ಕಲೆ, ಸಾಹಿತ್ಯ,ವಿಜ್ಞಾನ ಮತ್ತು ಕ್ರೀಡೆಯಲ್ಲಿ ತನ್ನದೇ ಆದ ಛಾಫು…

Read More

ಬಳೆಗಳು ಜೀವನದ ಸುರಕ್ಷಾ ಕಂಕಣ – ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ|hombuja

ಹೊಂಬುಜ ಜೈನ ಮಠದಲ್ಲಿ ನವರಾತ್ರಿಯ ವಿಶೇಷ ಅಲಂಕಾರ ಬಳೆಗಳು ಜೀವನದ ಸುರಕ್ಷಾ ಕಂಕಣ- ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ರಿಪ್ಪನ್ ಪೇಟೆ :ಸುರಕ್ಷಾ ಕವಚದಂತೆ ಧರಿಸುವ ಬಳೆಗಳು ಭಾರತೀಯ ಸಂಸ್ಕೃತಿಯಲ್ಲಿ ಸ್ತಿçÃಯರಿಗೆ ಕೇವಲ ಅಲಂಕಾರ ವಸ್ತುವಾಗಿರದೇ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುವಂತೆ ಮಾಡುತ್ತದೆ ಎಂದು ಹೊಂಬುಜದ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶುಭಾಶೀರ್ವಚನದಲ್ಲಿ ಹೇಳಿದರು. ನವರಾತ್ರಿಯ ಏಳನೇಯ ದಿನವಾದ ಶನಿವಾರದಂದು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾಸ್ಥಳವಾದ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ…

Read More

ರಿಪ್ಪನ್‌ಪೇಟೆ ನಾಡಕಛೇರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ|beluru

“ಶಾಸಕ ಗೋಪಾಲಕೃಷ್ಣ ಬೇಳೂರು ನಾಡಕಛೇರಿ ದಿಢೀರ್ ಭೇಟಿ’’ ರಿಪ್ಪನ್‌ಪೇಟೆ;-ಕೆರೆಹಳ್ಳಿ ಹೋಬಳಿ ಕಛೇರಿಗೆ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಯಕ್ಕೆ ಸರಿಯಾಗಿ ಕಛೇರಿಗೆ ಅಧಿಕಾರಿಗಳು ಬರುತ್ತಿಲ್ಲ ಮತ್ತು ಗ್ರಾಮ ಸಹಾಯಕ ಪ್ರವೀಣ್ ಎಂಬಾತನ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ ಎಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ಉಪತಹಶೀಲ್ದಾರ್ ಊಟಕ್ಕೆ ಹೋಗಿದ್ದಾನೆ ಬಂದಿಲ್ಲ ಎಂಬ ಉತ್ತರ ನಿಮ್ಮ ಊಟದ ಸಮಯ ಎಷ್ಟು ಈಗ ಎಷ್ಟು ಸಮಯ ಎಂದಾಗ ಗ್ರಾಮ ಲೆಕ್ಕಾಧಿಕಾರಿ ಹೊಸನಗರಕ್ಕೆ ಮುಟೇಷನ್ ದಾಖಲೆ ತರಲು…

Read More

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!?

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!? ಶಿವಮೊಗ್ಗ : ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ವೇತಾ ಬಂಡಿ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ  ತುಂಬಿದೆ ಎಂದು ಬಣ್ಣಿಸಿದರು. ಬಂಜಾರ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ…

Read More

ವಿದ್ಯುತ್ ತಂತಿ ತಗುಲಿ ಮೂರು ವರ್ಷದ ಮಗು ಸಾವು :

ವಿದ್ಯುತ್  ತಂತಿ ಬೇಲಿಯ ಮೇಲೆ ಕೇಬಲ್ ಬಿದ್ದಿದ್ದು  ಕೇಬಲ್ ನ್ನು ಮೂರು ವರ್ಷದ ಹೆಣ್ಣು ಮಗು ಮುಟ್ಟಿದ್ದರ ಪರಿಣಾಮ  ಮಗು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಮನೆ ಬಳಿ ಹಾಕಿರುವ ವಿದ್ಯುತ್ ತಂತಿ ಬೇಲಿಯ ಮೇಲೆ ಟಿವಿ ಕೇಬಲ್ ಹರಿದು ಬಿದ್ದಿದೆ. ಈ ಕೇಬಲ್ ನ್ನ ಆಟಾಡುವ ವೇಳೆ ಮಗು  ಮುಟ್ಟಿದ ಹಿನ್ನಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವುಕಂಡಿದೆ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿದ್ದರಿಂದ ಕೇಬಲ್…

Read More