ಹೊಂಬುಜ ಜೈನ ಮಠದಲ್ಲಿ ನವರಾತ್ರಿಯ ವಿಶೇಷ ಅಲಂಕಾರ
ಬಳೆಗಳು ಜೀವನದ ಸುರಕ್ಷಾ ಕಂಕಣ- ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ರಿಪ್ಪನ್ ಪೇಟೆ :ಸುರಕ್ಷಾ ಕವಚದಂತೆ ಧರಿಸುವ ಬಳೆಗಳು ಭಾರತೀಯ ಸಂಸ್ಕೃತಿಯಲ್ಲಿ ಸ್ತಿçÃಯರಿಗೆ ಕೇವಲ ಅಲಂಕಾರ ವಸ್ತುವಾಗಿರದೇ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುವಂತೆ ಮಾಡುತ್ತದೆ ಎಂದು ಹೊಂಬುಜದ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶುಭಾಶೀರ್ವಚನದಲ್ಲಿ ಹೇಳಿದರು.
ನವರಾತ್ರಿಯ ಏಳನೇಯ ದಿನವಾದ ಶನಿವಾರದಂದು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾಸ್ಥಳವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ನೈತಿಕ. ಮೌಲ್ಯಗಳು ಬಳೆಗಳಂತೆ ಪ್ರತಿಯೋರ್ವರಿಗೂ ಧರ್ಮಪಥವು ಸುಕೃತ ಫಲ ನೀಡುವಂತೆ ಚೈತನ್ಯದಾಯಕವಾಗಿದೆ ಎಂದರು.
ಹೊಂಬುಜ ಜೈನ ಮಠದಲ್ಲಿ ಪರಂಪರಾನುಗತ ಬಳೆಗಳಿಂದ ಅಲಂಕರಿಸಿದ ಅಭೀಷ್ಠವರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯವರಿಗೆ ಆಗಮೋಕ್ತ ಶಾಸ್ತçದನ್ವಯ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಅಷ್ಟವಿಧಾರ್ಚನೆ ಪೂಜೆಯ ಬಳಿಕ ಫಲ-ಪುಷ್ಪಗಳನ್ನು ಸಮರ್ಪಿಸಿ ಭಕ್ತವೃಂದದವರು ಜಿನನಾಮ ಸ್ತೋತ್ರಗಳನ್ನು ಪಠಿಸಿದರು.
ಶ್ರೀ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ಪೂರ್ವ ಪದ್ಧತಿಯಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ನವರಾತ್ರಿ ಪೂಜೆ, ಸಂಗೀತ ಕಾರ್ಯಕ್ರದಲ್ಲಿ ದೇಶದ ಹಾಗೂ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು. ಸೇವಾಕರ್ತೃರಾದ ಬೆಂಗಳೂರಿನ ಶ್ರೀಮತಿ ಚೂಡಾಮಣಿ ಶ್ರೀ ರವಿರಾಜ್ ಜೈನ್‌ರವರನ್ನು ಶ್ರೀಗಳವರು ಹರಸಿದರು. ಪುರೋಹಿತ ಪದ್ಮರಾಜ ಇಂದ್ರರವರು ಪೂಜಾ ವಿಧಿ ನೆರವೇರಿಸಿದರು.