POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ ಕೆಇಬಿ ವೃತ್ತ ಇನ್ನು ಮುಂದೆ ಡಾ. ಪುನೀತ್ ರಾಜಕುಮಾರ್ ವೃತ್ತ – ಶಾಸಕ ಬೇಳೂರು ಘೋಷಣೆ|HSN

ಹೊಸನಗರ ಕೆಇಬಿ ವೃತ್ತ ಇನ್ನು ಮುಂದೆ ಡಾ. ಪುನೀತ್ ರಾಜಕುಮಾರ್ ವೃತ್ತ – ಶಾಸಕ ಬೇಳೂರು ಘೋಷಣೆ

ಹೊಸನಗರ : ಪಟ್ಟಣದ ನಗರ ರಸ್ತೆಯ ಲೋಕೋಪಯೋಗಿ ಇಲಾಖೆ ಮೆಸ್ಕಾಂ ಇಲಾಖೆ ಅರಣ್ಯ ಅಧಿಕಾರಿಗಳ ಕಚೇರಿ ಸಂಪರ್ಕಿಸುವ ವೃತ್ತ ವನ್ನು ಸುಸಜ್ಜಿತವಾಗಿ ರಚಿಸಿ ಈ ವೃತ್ತವನ್ನು ಮುಂದೆ ಯುವರತ್ನ ಪುನೀತ್ ರಾಜಕುಮಾರ್ ನಾಮಕರಣ ಮಾಡಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ರವರು ಘೋಷಿಸಿದರು.


ಅವರು ಇಂದು ಪಟ್ಟಣದ ಕುವೆಂಪು ವಿದ್ಯಾ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಶರಣ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ ಕೆಇಬಿ ವೃತ್ತಕ್ಕೆ ಭೇಟಿ ನೀಡಿ ಈ ರಸ್ತೆಯ ರಾಷ್ಟ್ರೀಯ ಹೆದ್ದಾರಿ 776 ಸಿ ನಡೆಯುತ್ತಿದ್ದು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಇಲ್ಲಿ ಸುಸಜ್ಜಿತ ವೃತ್ತವನ್ನು ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸುವಂತೆ ತಮ್ಮ ಕಚೇರಿಯ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಳೂರು ಸೇವಾ ಸಹಕಾರ ಸಂಘದ ಅಧ್ಯಕ್ಷ ಡಿ ಆರ್ ವಿನಯ್ ಪಟ್ಟಣ ಪಂಚಾಯತಿ ಸದಸ್ಯ ಕೆ ಕೆ ಅಶ್ವಿನಿ ಕುಮಾರ್ ಯುವರತ್ನ ಪುನೀತ್ ರಾಜಕುಮಾರ್ ಕನ್ನಡ ಸಂಘದ ಅಧ್ಯಕ್ಷ ಪ್ರಶಾಂತ್ ಬಾವಿಕಟ್ಟೆ ಸತೀಶ್ ಗಣೇಶ ಸಿಟಿ ಮಂಜು ಕೆ ಪಿ ಮಾ ಲತೇಶ್ ಕಾಳಿಕಾಪುರ ಗಣೇಶ್ ನಾಗರಾಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಬಾರಿ ಹೊಸನಗರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್ ಅವರು ಸಹ ಈ ವೃತ್ತದಲ್ಲಿ ನಿಂತು ಈ ವೃತ್ತದಲ್ಲಿದ್ದ ತಮ್ಮ ಸಹೋದರನ ಭಾವಚಿತ್ರಕ್ಕೆ ಅಶ್ವತರ್ಪಣದೊಂದಿಗೆ ಪುಷ್ಪ ನಮನ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.