ತೀರ್ಥಹಳ್ಳಿ:: ಸಂಘ ಪರಿವಾರದಿಂದ ಯಶಸ್ವಿ ರಕ್ತದಾನ ಶಿಬಿರ
ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘ ಪರಿವಾರಗಳು ತೀರ್ಥಹಳ್ಳಿ ಇವರು ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತೀರ್ಥಹಳ್ಳಿಯ ರೋಟರಿ ರಕ್ತನಿಧಿಯಲ್ಲಿ ಇಂದು ನಡೆಯಿತು. ಸಂಘ ಪರಿವಾರದ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ರಕ್ತನಿಧಿ ತೀರ್ಥಹಳ್ಳಿಯ ಟೆಕ್ನೀಶಿಯನ್ ಅರುಣ್ ಕೆರೋಡಿ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ “ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಸೇವೆ, ಸಂಘದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ದಿನವನ್ನು ಸೇವೆಗೆ ಮುಡಿಪಾಗಿಡುತ್ತಾರೆ ಅದರಲ್ಲಿ ಸ್ವಚ್ಚತಾ…