ಸಾಗರ : ಮಹಿಳೆಗೆ ಅಮಿಷವೊಡ್ಡಿ ಮತಾಂತರಕ್ಕೆ ಯತ್ನ :ಇಬ್ಬರ ಬಂಧನ
ಶಿವಮೊಗ್ಗ : ಸಾಗರ ತಾಲೂಕಿನಲ್ಲಿ ಮತಾಂತರಕ್ಕೆ ಯತ್ನಿಸಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ತಾಲೂಕಿನ ತಾಳಗುಪ್ಪದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಜೋಗ್‌ಫಾಲ್ಸ್‌ನ ಅನಿಲ್ ಕುಮಾರ್ ಹಾಗೂ ಪತ್ನಿ ಪ್ರಶಾಂತಿ ಅವರನ್ನು ಬಂಧಿಸಲಾಗಿದೆ. ಜ್ಯೋತಿ ಎಂಬುವವರ ಪತಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ ಬಂದಿದ್ದ ಪ್ರಶಾಂತಿ ಮತ್ತು ಅನಿಲ್ ಕುಮಾರ್ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ…