Headlines

ಮಂಜುನಾಥ ಗೌಡರೇ ಮೋಸಗಾರಿಕೆ ಇಲ್ಲಿಗೆ ನಿಲ್ಲಿಸಿ : ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ,ಸೆ.24- ಆರ್.ಎಂ.ಮಂಜುನಾಥ್ ಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮರುದಿನದಿಂದಲೇ ಗುಂಪುಗಾರಿಕೆ ಪ್ರಾರಂಭ ಮಾಡಿ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇವರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಬಹುದು ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್.ಎಂ.ಮಂಜುನಾಥ್ ಗೌಡರು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಫೋಟೋಗಳನ್ನು ಕರಪತ್ರದಲ್ಲಿ ಪ್ರಕಟಿಸಿ ಖಾಸಗಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್…

Read More

ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಸಾದಿಕ್ ಕೊಲೆ!

ಶಿವಮೊಗ್ಗ: ನಗರದ ಕಲ್ಲೂರು ಮಂಡ್ಲಿಯ ಸಮೀಪ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಇಲಿಯಾಸ್ ನಗರದ ಸೈಯದ್ ಸಾದಿಕ್ (40) ಮೃತ ದುರ್ದೈವಿ. ಕಲ್ಲೂರು ಮಂಡ್ಲಿಯ ತೋಟದಲ್ಲಿ  ಕೊಲೆ ನಡೆದಿರುವ ಸಾಧ್ಯತೆಯಿದೆ. ಸಾದಿಕ್ ಅವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಈ ವ್ಯವಹಾರಕ್ಕೆ ಸಂಬಂದಿಸಿದಂತೆಯೇ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ತುಂಗಾನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.  

Read More

ಭಾರತ್ ಬಂದ್ ಗೆ ಶಿವಮೊಗ್ಗ ಸ್ಥಬ್ದವಾಗಲಿದೆ : ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ

ಶಿವಮೊಗ್ಗ : ಭಾರ‌ತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ, ಬಂದ್ ಯಶಸ್ವಿಗೊಳಿಸುವಲ್ಲಿ ಎಲ್ಲರೂ  ಸಹಕಾರ ನೀಡಬೇಕೆಂದು ಶಿವಮೊಗ್ಗದ ರೈತ  ಸಂಘದ ಅಧ್ಯಕ್ಷ  ಬಸವರಾಜಪ್ಪ  ತಿಳಿಸಿದರು. ಕೇಂದ್ರದ ಕೃಷಿ ಕಾಯ್ದೆಗಳನ್ನು ಮರಳಿ ಹಿಂಪಡೆಯುವಂತೆ  ಹಾಗೂ  ಸರ್ಕಾರಿ  ಕಂಪನಿಗಳನ್ನು  ಖಾಸಗೀಕರಣ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗವನ್ನು  ಸಹ ಬಂದ್ ಮಾಡಿ  ಬೆಂಬಲ  ಸೂಚಿಸಲಾಗುವುದು ಎಂದು ಗೌರವಾಧ್ಯಕ್ಷ ಹೆಚ್ ಬಸವರಾಜ್  ತಿಳಿಸಿದರು. ಕೇಂದ್ರ ಸರ್ಕಾರ ಕೃಷಿ ವಲಯವನ್ನೂ ಪರೋಕ್ಷವಾಗಿ ಖಾಸಗೀಕರಣ ಮಾಡಲು ಮುಂದಾಗಿದೆ ಎಲ್ಲರೂ  ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಈ …

Read More

ಮುಳುಗಡೆ ಸಂತ್ರಸ್ತರಿಗೆ ಹಲವು ದಶಕಗಳಿಂದ ಪರಿಹಾರ ನೀಡದೇ ವಂಚಿಸುತ್ತಿರುವ ಸರ್ಕಾರದ ವಿರುದ್ದ ಶರಾವತಿ ಚಳುವಳಿ : ಆರ್ ಎಂ ಮಂಜುನಾಥ್ ಗೌಡ

ರಿಪ್ಪನ್ ಪೇಟೆ : ಶರಾವತಿ,ವರಾಹಿ,ಚಕ್ರ ಮತ್ತು ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಹಾಗೂ ಬಗರ್ ಹುಕುಂ ರೈತರ ಹೋರಾಟ ಸಮಿತಿಯ ವತಿಯಿಂದ ಹಲವಾರು ದಶಕಗಳಿಂದ ಸೂಕ್ತ ಪರಿಹಾರ ನೀಡದೇ ವಂಚಿಸುತ್ತಿರುವ ಸರ್ಕಾರವು ಕೂಡಲೇ ಅವರಿಗೆ ಪರಿಹಾರ ನೀಡಬೇಕೆಂದು ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ್ ಗೌಡ ಆಗ್ರಹಿಸಿದರು. ಇಂದು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ 1962 ರಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಶರಾವತಿ ನದಿ ಪಾತ್ರದ 504 ಹಳ್ಳಿಗಳು ಮುಳುಗಡೆಯಾಗಿ ಇಪ್ಪತೈದು ಸಾವಿರ…

Read More

ಕ್ಯಾತಿನಕೊಪ್ಪ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಶಿವಮೊಗ್ಗ: ಕಳೆದೊಂದು ವಾರದಿಂದ ಶಿವಮೊಗ್ಗ ತಾಲೂಕಿನ ಕ್ಯಾತಿನಕೊಪ್ಪದ ತೋಟ ಹಾಗೂ ಮನೆಗಳ ಬಳಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಸಮೀಪದಲ್ಲಿರುವ ತೋಟದ ಮನೆಯಲ್ಲಿ ಮಂಜುನಾಥ್ ಎಂಬವರ ಕುಟುಂಬ ವಾಸವಿದೆ. ಕಳೆದ ನಾಲ್ಕೈದು ದಿನದ ಹಿಂದೆ ಮಂಜುನಾಥ್ ಅವರ ಸಾಕು ನಾಯಿಯನ್ನು ಚಿರತೆ ಬೇಟೆ ಆಡಿದ್ದನ್ನು ಗಮನಿಸಿದ್ದರು. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.  ಕಳೆದ ಐದು ದಿನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ್ ಅವರ ತೋಟದ ಮನೆ ಬಳಿ…

Read More

20 ವರ್ಷಗಳಿಂದ ದುರಸ್ತಿ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಯುವಕನೊಬ್ಬನಿಂದ ಸ್ವಚ್ಚ : ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ :

ಸಾಗರ : 20 ವರ್ಷಗಳಿಂದ ಬಸ್ ಸ್ಟ್ಯಾಂಡ್ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಏಕ ವ್ಯಕ್ತಿಯಿಂದ ಸ್ವಚ್ಚ.ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ. ನಮ್ಮ ದೇಶ ಸ್ವಾತಂತ್ರ ಬಂದು ಅದೆಷ್ಟೋ ವರ್ಷ ಕಳೆದಿವೆ ಆದರೆ ಇನ್ನೂ ಕೂಡ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಬಸ್ ಸ್ಟ್ಯಾಂಡ್ ಇಲ್ಲದೆ ಸಾರ್ವಜನಿಕರು ಶಾಲೆಗೆ ಹೋಗು ಬರುವ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಿರುವುದನ್ನು ಕಂಡು ಇಲ್ಲೊಬ್ಬ ಯುವಕ ಬಸ್ ನಿಲ್ದಾಣವನ್ನು ಸ್ವಚ್ಚ…

Read More

ಸೂಡೂರು ಚೆಕ್ ಪೋಸ್ಟ್ ಬಳಿಯೇ ಲಕ್ಷಾಂತರ ಬೆಲೆಬಾಳುವ ಸಾಗುವಾನಿ ಮರಗಳು ಕಳವು:

ರಿಪ್ಪನ್ ಪೇಟೆ : ಅಕ್ರಮವಾಗಿ ಬೃಹದಾಕಾರದ ಸಾಗುವಾನಿ ಮರಗಳನ್ನು ಕಡಿದು ಕಳ್ಳತನ ಮಾಡಿರುವ ಘಟನೆ ಸೂಡೂರು ಅರಣ್ಯ ಚೆಕ್ ಪೋಸ್ಟ್ ಬಳಿ ನಡೆದಿದೆ.  ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೂಡೂರು ಮುಖ್ಯ ರಸ್ತೆಯ ಬಳಿ ಹಾಗೂ ಸೂಡೂರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ನ ಕೂಗಳತೆಯ ದೂರದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಮರಗಳ್ಳರು ಅಕ್ರಮ ಪ್ರವೇಶ ಮಾಡಿ ಲಕ್ಷಾಂತರ ರೂ ಬೆಲೆಬಾಳುವ ಸಾಗುವನಿ ಮರಗಳನ್ನು ಕಡಿದು ಮರದ ತುಂಡುಗಳನ್ನು ಅಕ್ರಮ ಸಾಗಾಟ…

Read More

ರಿಪ್ಪನ್ ಪೇಟೆ : ಪಟ್ಟಣದ ಹೃದಯ ಭಾಗದಲ್ಲಿ ಅನಾದಿ ಕಾಲದಿಂದ ಮೀಸಲಿಟ್ಟ ಜಾಗದಲ್ಲೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ :

ರಿಪ್ಪನ್ ಪೇಟೆ : ಪಟ್ಟಣದ ಬಹು ನಿರೀಕ್ಷಿತ ಬಸ್ ನಿಲ್ದಾಣಕ್ಕೆ ಸರ್ವೇ ನಂ  329 ರಲ್ಲಿ 1962 ರ ಸಾಲಿನಲ್ಲಿಯೇ ಮೀಸಲಿಟ್ಟು ಗ್ರಾಮ ಪಂಚಾಯತಿಯಲ್ಲಿ ನಿರ್ಣಯಿಸಲಾಗಿದೆ.ಬಸ್ ನಿಲ್ದಾಣದ ಸಂಬಂಧ ಅನೇಕ ಹೋರಾಟಗಳು ನಡೆದಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಈಗ ಗ್ರಾಮ ಪಂಚಾಯತ್ ಅನ್ಯ ಉದ್ದೇಶಗಳ ಬಳಕೆಗೆ ಈ ಸ್ಥಳದಲ್ಲಿ ಅವಕಾಶ ನೀಡದೇ ಪಟ್ಟಣದ ಹೃದಯ ಭಾಗದಲ್ಲೆ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೊಸನಗರ ತಾಲೂಕ್ ಜನಪರ ವೇದಿಕೆ ಅಧ್ಯಕ್ಷರಾದ ಆರ್ ಎನ್…

Read More

ಕ್ರೈಸ್ತ ಸಮುದಾಯದ ಮೇಲೆ ಅಪಪ್ರಚಾರ ಸಲ್ಲ : ಬಿ ರಾಜಶೇಖರ್

ಶಿವಮೊಗ್ಗ :  ಕ್ರೈಸ್ತ ಸಮುದಾಯವನ್ನ ನಿಯಂತ್ರಿಸಲು ಮತಾಂತರ ಕಾಯ್ದೆ ಜಾರಿಗೊಳಿಸಬೇಕೆಂಬ ಚರ್ಚೆ ಆಗುತ್ತಿದ್ದು ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಎಲ್ಲೂ ಮತಾಂತರ ಮಾಡುತ್ತಿಲ್ಲವೆಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸ್ಪಷ್ಟಪಡಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬಿ.ರಾಜಶೇಖರ್ ಮಾತನಾಡಿ, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಮಾತನಾಡಿ, ಕ್ರೈಸ್ತ ಮಿಷನರಿಗಳಿಂದ ವ್ಯಾಪಕ ಮತಾಂತರಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಅತ್ಯಾಚಾರದ ಪ್ರಕರಣಗಳನ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಸದನದಲ್ಲಿ ಮತಾಂತರ ಕಾಯ್ದೆ ಜಾರಿಗೆ…

Read More

ಈ ಬಾರಿ ಶಿವಮೊಗ್ಗದಲ್ಲಿ ವೈಭವದ ದಸರಾಕ್ಕೆ ಮಹಾನಗರ ಪಾಲಿಕೆ ನಿರ್ಧಾರ !

ಶಿವಮೊಗ್ಗ : ಈ ಬಾರಿ ಮೈಸೂರು ದಸರಾ ನೆಡಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿಯೂ ಅದ್ದೂರಿ ದಸರಾ ನಡೆಸಲು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಸರ್ಕಾರ ಅನುದಾನ ನೀಡಿದರೆ 9 ದಿನವೂ ವೈಭವದ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು ಒಂದು ವೇಳೆ ಅನುದಾನ ನೀಡದಿದ್ದರೆ 50 ಲಕ್ಷ ಪಾಲಿಕೆ ಬಜೆಟ್ ನಲ್ಲಿ ಆಚರಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.  ದಸರಾ ವಿಷಯದಲ್ಲಿ ಮೊದಲು ಮಾತನಾಡಿದ ಹೆಚ್ ಸಿ ಯೋಗೇಶ್ ದಸರಾಕ್ಕೆ ಈvಬಾರಿ ಅನುದಾನವೆಷ್ಟು ಎಂಬುದು ಘೋಷಣೆ ಆದರೆ…

Read More