Headlines

ಆಚಾರ್ಯ ತುಳಸಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು

ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಸಂಭ್ರಮದಿಂದ ಸಿನೆಮಾ ಹಾಡುಗಳಿಗೆ ಭರ್ಜರಿ ಸ್ಟೆಪ್​ ಹಾಕಿ ಸಂಭ್ರಮಿಸಿದರು. ಕಳೆದ ವರ್ಷದಿಂದ ಕೊರೊನಾ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಂದ ದೂರ ಉಳಿದಿದ್ದರು. ಕೊರೊನಾ ಸ್ವಲ್ಪ ಮಟ್ಟಿಗೆ ನಿಯಂತ್ರಣಗೊಂಡ ಹಿನ್ನೆಲೆ, ಸರ್ಕಾರ ಶಾಲಾ – ಕಾಲೇಜುಗಳನ್ನು ಪ್ರಾರಂಭಿಸಿದೆ. ಹಾಗಾಗಿ ವಿದ್ಯಾರ್ಥಿಗಳು – ಕಾಲೇಜಿನವರು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಿನೆಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ….

Read More

ರಿಪ್ಪನ್ ಪೇಟೆ : ಶೌಚಾಲಯ ನಿರ್ಮಾಣ ಕಾಮಗಾರಿಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ : ಗರಂ ಆದ ಗ್ರಾಪಂ ಸದಸ್ಯ

ರಿಪ್ಪನ್ ಪೇಟೆ : ಪಟ್ಟಣದ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪಕ್ಕದ ಜಾಗದ ಕೆಲ ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸುತ್ತಿರುವುದರಿಂದ ಕಾಮಗಾರಿ ಕುಂಠಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಶೌಚಾಲಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪಿಲ್ಲರ್ ಗಾಗಿ ಗುಂಡಿಯನ್ನು ತೋಡಿದ್ದು ಇಂದು ಬೆಳಿಗ್ಗೆ ಏಕಾಏಕಿ ಬಂದ ಪಕ್ಕದ ಜಾಗದ ಖಾಸಗಿ ವ್ಯಕ್ತಿಗಳು ಗುಂಡಿಯನ್ನು ಮುಚ್ಚಿದ್ದಾರೆ.ಈ ಸಂಬಂಧ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ಹಾಗೂ ಗ್ರಾಪಂ ಸದಸ್ಯರುಗಳು ಸ್ಥಳಕ್ಕೆ ಆಗಮಿಸಿ ಮಾತನಾಡುತ್ತಿರುವಾಗ ಪರಿಸ್ಥಿತಿ ಕೈಮೀರಿ…

Read More

ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

ತೀರ್ಥಹಳ್ಳಿ: ಭಾರತದ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಪ್ರಯುಕ್ತ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ಮಂಗಳವಾರ ರಾಮ ಮಂದಿರದಲ್ಲಿ ರಕ್ತದಾನ  ಕಾರ್ಯಕ್ರಮ ನಡೆಸಿದರು.  ಈ ಶಿಬಿರದಲ್ಲಿ  ಬರೋಬ್ಬರಿ 157 ಯೂನಿಟ್ ರಕ್ತದಾನವಾಗಿದ್ದು 78 ಜನರು  ಮೊದಲ ಬಾರಿ ರಕ್ತದಾನ ಮಾಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ಉಪಾಧ್ಯಕ್ಷರಾದ ಗಣೇಶ್ ಬಿಳಕಿ ,ಸುಹಾಸ್ ಶಾಸ್ತ್ರಿ, ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿಗಳಾದ ಮೇಘರಾಜ್ ಹೊಳಲೂರು,…

Read More

ದಳಪತಿಗಳನ್ನು ಹಾಡಿ ಹೊಗಳಿದ ಸಿ ಎಂ ಇಬ್ರಾಹಿಂ

ಭದ್ರಾವತಿ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ  ಕುಮಾರ ಸ್ವಾಮಿಯವರನ್ನು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಇಂದು ಹಾಡಿಹೊಗಳಿದ್ದಾರೆ.‌ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿ ನಡೆದ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ  ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದರು. ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ.ಅಂತಹ ಕೆಲಸವನ್ನು ನಾವು ಮಾಡುತ್ತೇವೆ.ಮುಂದಿನ…

Read More

ಭದ್ರಾವತಿ : ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಿ ಶಾರದ ಅಪ್ಪಾಜಿ ಗೌಡರ ಹೆಸರು ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ

ಭದ್ರಾವತಿ : ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಭದ್ರಾವತಿಯ ಮುಂದಿನವಿಧಾನ ಸಭೆಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪಾಜಿ ಗೌಡರ ಪತ್ನಿ ಶಾರದ ಅಪ್ಪಾಜಿಗೌಡರನ್ನೇ ಕಣಕ್ಕಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅವರು ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿರುವ ಅಪ್ಪಾಜಿಗೌಡರ ತೋಟದಲ್ಲಿ ಅವರ ಪುಣ್ಯಸ್ಮರಣೆಯ ದಿನದಂದು ಪ್ರತಿಮೆಯನ್ನ ಅನಾವರಣಗೊಳಿಸಿ ಮಾಧ್ಯಮದವರ ಜೊತೆ ಮಾತನಾಡಿದರು. ಭದ್ರಾವತಿಯ ಅಪ್ಪಾಜಿ ಗೌಡರ ಅಭಿಮಾನಿಗಳು ಯಾರನ್ನು ಅಭ್ಯರ್ಥಿಯನ್ನ…

Read More

ಸಾಗರ : ಅಕ್ರಮವಾಗಿ ಶೇಖರಿಸಿಟ್ಟಿದ್ದ ಗಾಂಜಾ ಪತ್ತೆ

ಸಾಗರ : ತಾಲ್ಲೂಕ್ಕಿನ ವ್ಯಾಪ್ತಿಯ ಕಬ್ಬನದಕೊಪ್ಪ ಗ್ರಾಮದಲ್ಲಿ ವಾಸದ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಕಬ್ಬನದಕೊಪ್ಪ ಗ್ರಾಮದ ಪುಟ್ಟಪ್ಪ ಇವರಿಗೆ ಸೇರಿದ ವಾಸದ ಮನೆಯ ಮೊದಲನೆ ಕೊಠಡಿಯಲ್ಲಿ ಅಕ್ರಮವಾಗಿ ಸುಮಾರು 330 ಗ್ರಾಂ ಹಸಿ ಗಾಂಜಾವನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ) ರೀತ್ಯಾ ಉಲ್ಲಂಘನೆ ಹಾಗೂ ಇದೇ ಕಾಯ್ದೆಯ ಕಲಂ 20(b) 20 (ii) (A),25 ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಮೊಕದ್ದಮೆಯನ್ನು ದಾಖಲಿಸಲಾಯಿತು. …

Read More

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಸವಾರ ಸಾವು:

ಶಿವಮೊಗ್ಗ: ಹೊಳೆಹೊನ್ನೂರು ಸಮೀಪ ಆಗರದಳ್ಳಿ ಸಿದ್ದರ ಕಾಲೊನಿ ಬಳಿ ನಿನ್ನೆ ಸಂಜೆ ಬೈಕ್ ಒಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ‌ ಹೊಡೆದ ಪರಿಣಾಮ ಸವಾರ ಸಾವು ಕಂಡ ಘಟನೆ‌ವರದಿಯಾಗಿದೆ. ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ನಿವಾಸಿ ಪ್ರದೀಪ್ (33) ಮೃತ ದುರ್ದೃವಿ. ತನ್ನ ಸ್ನೇಹಿತನೊಂದಿಗೆ ಶಿವಮೊಗ್ಗಕ್ಕೆ ಬಂದು ಖಾಸಗಿ ಆಸ್ಪತ್ರಯಲ್ಲಿ ಚರ್ಮದ ಚಿಕಿತ್ಸೆ ಪಡೆದು ಚನ್ನಗಿರಿಗೆ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿದೆ. ಹಿಂಬಂದಿ ಸವಾರನಿಗೆ ಗಂಭೀರ ಗಾಯಗಾಳಾಗಿದ್ದು, ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಿಪ್ಪನ್ ಪೇಟೆ : ಕಟ್ಟುಕೋವಿಯಿಂದ ಕಾಲು ಕಳೆದುಕೊಂಡ ಯುವಕನ ಸಂಕಷ್ಟ ಕೇಳುವವರಾರು !!??

ರಿಪ್ಪನ್ ಪೇಟೆ : ತನ್ನದಲ್ಲದ ತಪ್ಪಿಗೆ ಕಾಲನ್ನು ಕಳೆದುಕೊಂಡು ಸಂಕಷ್ಟಕೊಳಗಾಗಿರುವ ಯುವಕನ ಗೋಳು ಕೇಳುವರಿಲ್ಲದೇ ಪರಿತಪಿಸುತ್ತಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯತಿಯ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಡಿಸೆಂಬರ್‌ನಲ್ಲಿ ಬೆನವಳ್ಳಿ ಗ್ರಾಮದ ಪ್ರವೀಣ (26) ಎಂಬ ಯುವಕನಿಗೆ ಖಾಸಗಿ ವ್ಯಕ್ತಿಯೋರ್ವ ಗದ್ದೆಯಲ್ಲಿ ಕಟ್ಟಿದ ಕಟ್ಟುಕೋವಿಯಿಂದ ಸಿಡಿದ ಗುಂಡು ಕಾಲಿಗೆ ತಾಗಿ ಈಗ ಕಾಲು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿ ಜೀವನ ಪರಿಹಾರಕ್ಕಾಗಿ ಬೇರೆಯವರಲ್ಲಿ ಕೈಚಾಚುವ ಪರಿಸ್ಥಿತಿ ಬಂದೊದಗಿದೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಹಾಗೂ…

Read More

ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಇಬ್ಬರಿಗೆ ಅವಕಾಶ

ಶಿವಮೊಗ್ಗ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಶಿವಮೊಗ್ಗ ವಲಯದ ಮಿಥೇಶ್ ಕುಮಾರ್ ಹಾಗೂ 19 ವರ್ಷದೊಳಗಿನ ಮಹಿಳಾ ರಾಜ್ಯ ತಂಡಕ್ಕೆ ಶಿವಮೊಗ್ಗದ ನಿರ್ಮಿತ ಸಿ ಜೆ ಅವಕಾಶ ಪಡೆದಿದ್ದಾರೆ ಎಂದು ಕೆಎಸ್​ಸಿಎ ಶಿವಮೊಗ್ಗ ವಲಯದ ಸಂಚಾಲಕರಾದ ಡಿ ಎಸ್ ಅರುಣ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಡಿ ಎಸ್ ಅರುಣ್ ಶಿವಮೊಗ್ಗ ವಲಯಕ್ಕೆ ಇದೊಂದು ಹೆಮ್ಮೆಯ ವಿಷಯ. ಹಲವು ವರ್ಷಗಳಿಂದ ಇದ್ದ ಕೊರಗು ಈ ವರ್ಷ ನೀಗಿದೆ….

Read More

ಶಿವಮೊಗ್ಗ: ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಯಾಗ

ಶಿವಮೊಗ್ಗ : ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಚಾರ ಮಂಚ್ ಹಾಗೂ ಅರ್ಚಕರ ವೃಂದದಿಂದ ಪ್ರಧಾನಿ ಮೋದಿ ಅವರ 71 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಗಣಪತಿ ಯಾಗ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ, ಪ್ರಧಾನಿ ಮೋದಿ ಅವರು ಕೊರೋನ ಲಸಿಕೆ ಹಂಚಿಕೆಯನ್ನ ಗುರಿಯಾಗಿ ಇಟ್ಟುಕೊಂಡು ಮುಂದುವರಿದು ಇಂದು ಯಶಸ್ವಿಯಾಗಿ 80 ಕೋಟಿ ಜನರಿಗೆ ಲಸಿಕೆ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸೆ. 17 ರ ಅವರ ಹುಟ್ಟುಹಬ್ಬದ…

Read More
Exit mobile version