ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಓಮಿಕ್ರಾನ್ ಸೋಂಕು ಪತ್ತೆ : ಮಲೆನಾಡಿಗೂ ಕಾಲಿಟ್ಟ ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ
ಶಿವಮೊಗ್ಗ : ಹಲವು ದೇಶದಲ್ಲಿ ಆರ್ಭಟ ನೆಡೆಸುತ್ತಿರುವ ಕೊರೋನಾ ವೈರಸ್ ನ ಹೊಸ ತಳಿ ಒಮಿಕ್ರಾನ್ ಶಿವಮೊಗ್ಗ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 20 ವರ್ಷದ ಯುವತಿಯೊಬ್ಬರಿಗೆ ಒಮಿಕ್ರಾನ್ ಸೊಂಕು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 7ರಂದು ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಗಂಟಲ ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್…