ರಿಪ್ಪನ್ ಪೇಟೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ಪ್ರಮೀಳಾ ಲಕ್ಷ್ಮಣಗೌಡ ಪದವಿ ಸ್ವೀಕಾರ
ರಿಪ್ಪನ್‌ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ನಾಗರಿಕರಿಗೆ ಮಾನಸಿಕ ನೆಮ್ಮದಿ ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಮಾನವ ಸಮಾಜ ಸೇವೆಯಲ್ಲಿ ಪಡೆದುಕೊಂಡಾಗ ಮಾತ್ರ ನೆಮ್ಮದಿಯನ್ನು ಕಾಣಬಹುದು ಎಂದು ರೋಟರಿ ಸಂಸ್ಥೆಯ ಮಾಜಿ ಗವರ್ನರ್ ರೊಟೇರಿಯನ್ ಎಚ್ ಎಲ್ ರವಿ ಹೇಳಿದರು. ಪಟ್ಟಣದ ಸಾಗರ ರಸ್ತೆಯಲ್ಲಿನ ವಿಶ್ವಮಾನವ ಸಮುದಾಯಭವನದಲ್ಲಿ ಅಯೋಜಿಸಲಾಗಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ಜಗತ್ತಿನಲ್ಲಿ…