ಇನ್ನೂ ಪತ್ತೆಯಾಗದ ವೃದ್ದನನ್ನು ರಕ್ಷಿಸಲು ಚಾನೆಲ್ ಗೆ ಹಾರಿ ನಾಪತ್ತೆಯಾಗಿದ್ದ ರಿಪ್ಪನ್ ಪೇಟೆಯ ಯುವಕ : ಅಗ್ನಿಶಾಮಕ ದಳದವರಿಂದ ಬಿರುಸಿನ ಕಾರ್ಯಾಚರಣೆ
ದಾವಣಗೆರೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಚಾನೆಲ್ ನಲ್ಲಿ ವೃದ್ದನೊಬ್ಬನನ್ನು ರಕ್ಷಿಸಲು ಹೋಗಿ ರಿಪ್ಪನ್‌ಪೇಟೆಯ ಯುವಕನೊಬ್ಬ ನಾಪತ್ತೆಯಾಗಿ ಸುಮಾರು 48 ಗಂಟೆ ಕಳೆದಿದ್ದು ಇನ್ನೂ ಯುವಕನ ಸುಳಿವು ಪತ್ತೆಯಾಗಿಲ್ಲ. ರಿಪ್ಪನ್ ಪೇಟೆ ನೆಹರು ನಗರ ನಿವಾಸಿ ಅನೀದ್ (22) ವರ್ಷ ಎಂಬ ಯುವಕ ಮಂಗಳವಾರ ಬೆಳಿಗ್ಗೆ ದಾವಣಗೆರೆಯಿಂದ ಲಾರಿಯೊಂದರಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಸಿದ್ದಾಪುರ ರಸ್ತೆ ಬದಿಯ ಚಾನೆಲ್ ಬಳಿ ಸೇರಿದ ಜನಸ್ತೋಮವನ್ನು ನೋಡಿ ಪ್ರಶ್ನಿಸಿದ್ದಾನೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಚಾನೆಲ್ ಗೆ ಹಾರಿರುವ ವಿಚಾರ ಗಮನಕ್ಕೆ ಬಂದಿದ್ದು,ತಕ್ಷಣವೇ…