ರಿಪ್ಪನ್ ಪೇಟೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಸಂಭ್ರಮ : ಸಂಭ್ರಮದ ಯಶಸ್ವಿಗೆ ಸಕಲ ಸಿದ್ಧತೆ : ಮಂಜುಳಾ ಕೇತಾರ್ಜಿ ರಾವ್
ರಿಪ್ಪನ್ ಪೇಟೆ : ಆಜಾದ್ ಕಿ ಅಮೃತ್ ಮಹೋತ್ಸವ ಅಂಗವಾಗಿ ರಿಪ್ಪನ್ ಪೇಟೆಯ ಗ್ರಾಮಾಡಳಿತ ಸಕಲಸಿದ್ಧತೆಯನ್ನು ಮಾಡಿದ್ದು 3000ಕ್ಕೂ ಅಧಿಕ ಜನರು ಈ ಸಂಭ್ರಮಕ್ಕೆ ಸಾಕ್ಷಿಗಳಾಗಲಿದ್ದಾರೆ ಎಂದು ಪಟ್ಟಣದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೇತರ್ಜಿ ರಾವ್ ಹೇಳಿದರು. ಇಂದು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಆಜಾದ್ ಕೀ ಅಮೃತ್ ಮಹೋತ್ಸವವನ್ನು ಸಡಗರದಿಂದ ಆಚರಿಸಲು ದೇಶಾದ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಿದ್ಧತೆಯನ್ನು ನಡೆಸುತ್ತಿದ್ದಾರೆ ಹಾಗೆಯೇ ನಮ್ಮ ರಿಪ್ಪನ್ ಪೇಟೆ ಗ್ರಾಮ…