ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ರವರಿಗೆ ಹುಟ್ಟೂರಿನಲ್ಲಿ ಆತ್ಮೀಯ ಸನ್ಮಾನ :
ರಿಪ್ಪನ್‌ಪೇಟೆ: ಜಿ.ಪಂ. ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರರವರನ್ನು ಕಾಂಗ್ರೇಸ್ ಪಕ್ಷ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿಯನ್ನಾಗಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಕೋಡೂರಿನ ಗ್ರಾಮಸ್ಥರು ಮತ್ತು ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು. ಕೋಡೂರಿನ ಶ್ರೀಶಂಕ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ, ಕಾರ್ಯಕ್ರಮದಲ್ಲಿ ಕಲಗೋಡು ರತ್ನಾಕರರವರು ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಬೆಳವಣಿಗೆಗೆ ಗ್ರಾಮದ ಎಲ್ಲಾ ಹಿರಿಯರ ಆಶೀರ್ವಾದ, ಕಿರಿಯರ ಸಹಕಾರವಿದೆ. ಕಾಂಗ್ರೇಸ್ ಪಕ್ಷದಲ್ಲಿ ಭೂತ್ ಮಟ್ಟದ ಕಾರ್ಯದರ್ಶಿಯಿಂದ ರಾಜ್ಯ ಮಟ್ಟದ ಪ್ರಧಾನಕಾರ್ಯದರ್ಶಿಯವರೆಗೆ ಬೆಳೆಸಿದವರು ನಮ್ಮೂರಿನ ಜನ. ಪಕ್ಷನಿಷ್ಠೆ, ಸಂಘಟನೆ ಮತ್ತು…