ವಿದ್ಯುತ್ ತಗುಲಿ ಇಬ್ಬರು ಸಾವು – ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವಿನ ವೇಳೆ ನಡೆದ ದುರಂತ|electric-shock
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕಟಾವ್ ಮಾಡಲು ಹೋಗಿದ್ದ ಇಬ್ಬರು ಕರೆಂಟ್ ತಗುಲಿ ಸಾವನ್ನಪ್ಪಿದ್ಧಾರೆ. ಶಿವಮೊಗ್ಗ ನಗರದ ಊರುಗಡೂರ್ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವರು ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಎಂದು ಗೊತ್ತಾಗಿದ್ದು, ಇನ್ನೊಬ್ಬರ ಸುಳಿವು ಸಿಗಬೇಕಿದೆ. ಘಟನೆಯಲ್ಲಿ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮೇನ್ ಲೇನ್ ಸಂಪರ್ಕಗೊಂಡಿದ್ದು, ಅದರಿಂದ ಹರಿದ ವಿದ್ಯುತ್ನಿಂದಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು 108 ಗೆ ಕರೆ ಮಾಡಿ ಆ್ಯಂಬುಲೆನ್ಸ್ನ್ನ ಕರೆಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿದ್ದು,…