Headlines

ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು

ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು ಶಿವಮೊಗ್ಗದಲ್ಲಿ ಕುಖ್ಯಾತ ಅಂತರರಾಜ್ಯ ಕಳ್ಳ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಜಯನಗರ ಠಾಣೆ ಪೊಲೀಸರು ಇಂದು (ಗುರುವಾರ, ಜೂನ್ 5, 2025) ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಕಲ್ಕೆರೆ ಮೂಲದ 47 ವರ್ಷ ಮಂಜ, ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳಿವೆ. ಈತ ಕಳೆದ ಕೆಲವು ದಿನಗಳಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿದ್ದ. ಈ ಸಂಬಂಧ …

Read More

ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ | ಬೆಟ್ಟೆ 56 ಸಾವಿರ ,ಸರಕು 83 ಸಾವಿರ – ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ..!??

ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ | ಬೆಟ್ಟೆ 56 ಸಾವಿರ ,ಸರಕು 83 ಸಾವಿರ  Arecanut Rate today |Shimoga | Sagara |  Arecanut/ Betelnut/ Supari | Date Apr 18, 2024|Shivamog ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು ಶಿವಮೊಗ್ಗ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.   ಅಡಿಕೆ …

Read More

ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್: ವರದಿ ನೋಡಿ ತಕ್ಷಣ ಎಚ್ಚೆತ್ತ ಅಧಿಕಾರಿಗಳು:

ಸಾಗರ: ಕಳೆದ 3ದಿನಗಳ ಹಿಂದೆ ನಿಮ್ಮ ನೆಚ್ಚಿನ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಸಾಗರದ ಪೋಲಿಸ್ ಇಲಾಖೆಯ ವಸತಿಗೃಹಗಳು ಕಾಡಿನಂತಾಗಿವೆ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಸುದ್ದಿ ಪ್ರಸರಣದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೀಗ ಪೋಲಿಸ್ ವಸತಿಗೃಹಗಳಿಗೆ ಹೊಸ ಜೀವಕಳೆಯನ್ನು ನೀಡುತ್ತಿದ್ದಾರೆ.ಸುತ್ತಮುತ್ತಲ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಮುಂದೆ ಉಂಟಾಗುತ್ತಿದ್ದ ರೋಗರುಜಿನಗಳಿಗೆ ಇದೀಗ ಕಡಿವಾಣ ಹಾಕಿದಂತಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತ ಪೋಸ್ಟಮನ್ ನ್ಯೂಸ್ ತಂಡ ಅಧಿಕಾರಿಗಳನ್ನ ಎಚ್ಚೆತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದರಿಂದ ಪೊಲೀಸ್ ವಸತಿಗೃಹದ ಸುದ್ದಿಯನ್ನು ಬಿತ್ತರಿಸಿ ಅಧಿಕಾರಿಗಳು…

Read More

ಭಾರಿ ಮಳೆಗೆ ಕುಸಿದು ಬಿದ್ದ ಮನೆ

ಭಾರಿ ಮಳೆಗೆ ಕುಸಿದು ಬಿದ್ದ ಮನೆ ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಮಳವಳ್ಳಿ ಗ್ರಾಮದ ಶೈಲಜಾ ಎಂಬುವವರ ಮನೆ ಭಾರಿ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ,ಹೆದ್ದಾರಿಪುರ ಗ್ರಾಮ ಪಂಚಾಯತ್ ಸದಸ್ಯ ಮಳವಳ್ಳಿ ಚಂದ್ರಶೇಖರ್ ಅಧಿಕಾರಿಗಳು ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ.

Read More

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದಿಂದ ಭದ್ರತಾ ತಪಾಸಣೆ

Railway Protection Force and local police conducted a joint security inspection at Shivamogga railway station with dog squad and ASC teams checking platforms, ticket counters, parcel office and waiting halls. ಶಿವಮೊಗ್ಗ : ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಇಂದು ರೈಲ್ವೆ ಭದ್ರತಾ ಪಡೆ (RPF) ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಅಧಿಕಾರಿಗಳ ಸೂಚನೆಯ ಮೇರೆಗೆ ನಡೆದ ಈ ವಿಶೇಷ…

Read More

ನಕಲಿ ಸಹಿ ಬಳಸಿ ಪೋಡಿ ದುರಸ್ಥಿಗೊಳಿಸಿ ವಂಚನೆ – ಸರ್ಕಾರಿ ಭೂಮಾಪಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲು

ನಕಲಿ ಸಹಿ ಬಳಸಿ ಪೋಡಿ ದುರಸ್ಥಿಗೊಳಿಸಿ ವಂಚನೆ – ಸರ್ಕಾರಿ ಭೂಮಾಪಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲು ಜಮೀನು ಮಾಲೀಕರ ನಕಲಿ ಸಹಿ ಬಳಸಿ ಪೋಡಿ ದುರಸ್ತಿ ಮಾಡಿರುವ ಆರೋಪದಲ್ಲಿ ಹೊಸನಗರ ತಾಲೂಕ್ ಕಛೇರಿಯ ಭೂ ಮಾಪಕ ಸೇರಿದಂತೆ ನಾಲ್ವರ ಮೇಲೆ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳೂರು ಗ್ರಾಮದ ಸರ್ವೆ ನಂ 99/3 ರಲ್ಲಿ 4.13 ಎಕರೆ ಜಮೀನು ದೂರುದಾರ ಹಾಲುಗುಡ್ಡೆ ಗ್ರಾಮ ಸತ್ಯನಾರಾಯಣ ಹಾಗೂ ಸಹೋದರಿಯ ಜಂಟಿ ಖಾತೆಯಲ್ಲಿರುತ್ತದೆ.ಆದರೆ ಗೋಮೇದ ಬಿನ್…

Read More

ರಿಪ್ಪನ್ ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಸ್ನೇಹಿತರಿಂದಲೇ ವ್ಯಕ್ತಿಯ ಕೊಲೆ : ಮಲೆನಾಡಲೊಂದು ಧಾರುಣ ಘಟನೆ

ರಿಪ್ಪನ್‌ಪೇಟೆ: ಸಮೀಪದ ಗರ್ತಿಕೆರೆಯಲ್ಲಿ ಬುಧವಾರ ರಾತ್ರಿ ತನ್ನ ಸ್ನೇಹಿತರಿಂದಲೇ ವ್ಯಕ್ತಿಯೋರ್ವ ಕೊಲೆಯಾಗಿ ಕೆರೆಯಲ್ಲಿ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಗರ್ತಿಕೆರೆ ಗ್ರಾಮದ ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ, ಗರ್ತಿಕೆರೆಯ ಕೋಳಿ ಪಯಾಜ್,ಗರ್ತಿಕೆರೆಯ ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಸತೀಶ್ ಶೆಟ್ಟಿಯ ಮನೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ನಡೆಸಿದ್ದಾರೆ. ನಂತರ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಜಗಳವಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಮಾರಕಾಸ್ತ್ರಗಳಿಂದ ಸತೀಶ್ ಶೆಟ್ಟಿ (53)ಯನ್ನು ಕೊಲೆ ಮಾಡಿ…

Read More

ಬಾರದ ಮಳೆ : ಹಣ್ಣು-ತರಕಾರಿ ದರಗಳಲ್ಲಿ ಭಾರಿ ಏರಿಕೆ|price hike

ಮಳೆಯ ವಿಳಂಬದ ನಡುವೆ ಮಲೆನಾಡಿನಲ್ಲಿ ದಿನೇ ದಿನೇ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಶಿವಮೊಗದಲ್ಲಿ ಎರಡು ದಿನಗಳ ಹಿಂದಷ್ಟೇ ಟೊಮೆಟೊ ಕೆ.ಜಿಗೆ ₹40ಕ್ಕೆ ಸಿಗುತ್ತಿತ್ತು. ಆದರೆ ಈಗ ಅದು ₹80ಕ್ಕೆ ಹೆಚ್ಚಳಗೊಂಡಿದೆ. ಅದರ ಬೆನ್ನಲ್ಲೇ ಬೀನ್ಸ್ ಕೆ.ಜಿಗೆ ₹100, ಕ್ಯಾರೆಟ್ ₹80, ಬದನೆ ₹60, ಮೂಲಂಗಿ ₹40, ಹೂಕೋಸು ₹40, ಆಲೂಗಡ್ಡೆ ₹25, ಬಟಾಣಿಯ ಬೆಲೆಯೂ (₹80) ಒಂದೂವರೆ ಪಟ್ಟು ಹೆಚ್ಚಾಗಿದೆ. ಸೊಪ್ಪಿನ ಬೆಲೆಯೂ ಗಗನಕ್ಕೇರಿದೆ. ಕೊತ್ತಂಬರಿ ಕಟ್ಟಿಗೆ ₹ 10, ಸಬ್ಬಸಿಗೆ, ಎಳೆಹರಿವೆ, ದಂಟಿನ ಸೊಪ್ಪು, ಮೆಂತೆ…

Read More

ಪುರಾಣ ಪ್ರಸಿದ್ದ ಕೆರೆಹಳ್ಳಿಯ ಶ್ರೀರಾಮೇಶ್ವರ ದೇವರ ಪುನರ್ ಪ್ರತಿಷ್ಠಾಪನೆ

ರಿಪ್ಪನ್‌ಪೇಟೆ: ಪುರಾಣಪ್ರಸಿದ್ಧ ಕೆರೆಹಳ್ಳಿಯ ಶ್ರೀರಾಮೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ, ನೂತನ ದೇವಸ್ಥಾನದ ಕಟ್ಟಡದಲ್ಲಿ ಫೆ. 13 ರ ಭಾನುವಾರ ನೆರವೇರಲಿದೆ. ಪುರಾಣಕಾಲದ ಐತಿಹ್ಯವನ್ನು ಹೊಂದಿರುವ ದೇವರನ್ನು ಸೀತಾರಾಮರು ವನವಾಸ ಕಾಲದ ಸಂದರ್ಭದಲ್ಲಿ ಶಿವನ ಆರಾಧನೆಗಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರೆಂಬ ಪ್ರತೀತಿ ಇಲ್ಲಿನ ಜನರಲ್ಲಿ ಪ್ರಚಲಿತದಲ್ಲಿದೆ.  ಪ್ರಾಚೀನಕಾಲದ ಶಿಥಿಲಾವಸ್ಥೆಗೊಂಡಿದ್ದ ದೇವಸ್ಥಾನವನ್ನು ತೆರವುಗೊಳಿಸಿ ಶಿವನ ಲಿಂಗವನ್ನು ವಿಸರ್ಜಿಸಲಾಗಿತ್ತು. ಭಕ್ತರ ಅಭಿಲಾಷೆಯಂತೆ ದಾನಿಗಳ ಸಹಾಯದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ರೂಪುಗೊಂಡಿದ್ದು, ಸುಸಜ್ಜಿತ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ದಿನ ( ಜೂ.08 ಮತ್ತು 09 ರಂದು) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ..|mescom

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 08/06/23 ಮತ್ತು 09/06/2023 ರಂದು ಬೆಳಿಗ್ಗೆ 9-00 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಜ. 23 ಮತ್ತು 24 ರಂದು ಬೃಹತ್ ಕಾಮಗಾರಿ ವಿಭಾಗ ಕವಿಪ್ರನಿನಿ ಶಿವಮೊಗ್ಗ ಇವರು 110 ಕೆವಿ ಎಸ್ಎಸ್ 2 ಮಾರ್ಗವನ್ನು ಕುಂಸಿ ವಿವಿ ಕೇಂದ್ರದ ಹತ್ತಿರ ಕಾಮಗಾರಿ ನಡೆಸಲು 110 ಕೆವಿ ಎಸ್ಎಸ್ 1 ಮತ್ತು 110 ಕೆವಿ ಎಸ್ಎಸ್ 2 ಮಾರ್ಗದ ಮಾರ್ಗ ಮುಕ್ತತೆ…

Read More