Headlines

ರಿಪ್ಪನ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಪಂ ಅಧ್ಯಕ್ಷೆಯ ಮೇಲೆ ಹಲ್ಲೆ – ಆರೋಪಿಯ ಬಂಧನ | Crime News

Ripponpet | ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಪಂ ಅಧ್ಯಕ್ಷೆಯ ಮೇಲೆ ಹಲ್ಲೆ – ಆರೋಪಿಯ ಬಂಧನ ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಧನಲಕ್ಷ್ಮಿ ಗಂಗಾಧರ್ ರವರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಅರಸಾಳು ಗ್ರಾಪಂ ವ್ಯಾಪ್ತಿಯ ಕಲ್ಲುಹಳ್ಳ ಗ್ರಾಮದ ಸುನೀಲ್ (34) ಬಂಧಿತ ಆರೋಪಿಯಾಗಿದ್ದಾನೆ. ನಡೆದಿದ್ದೇನು ..?? ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಲ್ಲುಹಳ್ಳ ಗ್ರಾಮದ ಪುಟ್ಟಪ್ಪ ಹಾಗೂ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ರವರ ಪತಿ…

Read More

SSLC ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಸಾವು

ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಸಾವು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆ ಕೂಲ್ಸುಂ (14) ಸಾವನ್ನಪ್ಪಿದ ವಿದ್ಯಾರ್ಥಿನಿ. ಈಕೆ ಇಂದು ಎಸ್‌.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾಗಿತ್ತು. ಉಮ್ಮೆ ಕೊಲ್ಸುಂ ರಸ್ತೆ ದಾಟುವ ವೇಳೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ – ಪ್ರಕರಣ ದಾಖಲು|Dowry case

ನೂರಾರು ಕನಸು ಹೊತ್ತು ಮದುವೆಯಾಗಿದ್ದ ನವ ವಿವಾಹಿತೆ ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಶಿಕಾರಿಪುರದ ಶಿರಾಳಕೊಪ್ಪದ ಉಡುಗುಣಿ ಗ್ರಾಮದಲ್ಲಿ ನಡೆದಿದೆ. ನವವಿವಾಹಿತೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಸಂಗೀತಾ ಅನುಮಾನಸ್ಪದವಾಗಿ ಸಾವನಪ್ಪಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ, ಅತ್ತೆ ಮಾವನ ಕಿರುಕುಳಕ್ಕೆ ಅಮಾಯಕ ಜೀವ ಬಲಿಯಾಗಿದ್ದು, ಸಂಗೀತಾ ನೂರಾರು ಕನಸು ಹೊತ್ತು ಹರೀಶ್ ಎಂಬಾತನ ಜೊತೆ ಮದುವೆಯಾಗಿದ್ದರು. ಸಂಗೀತಾ ಪೋಷಕರು ಚಿನ್ನ, ಹಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು. ಮದುವೆಯಾದ ಆರು ತಿಂಗಳಿಗೆ…

Read More

Ripponpete | ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕ ವಶಕ್ಕೆ – ಶೂಟ್ ಶೂರರಿಗೆ ಸಿಂಹಸ್ವಪ್ನವಾಗಿರುವ ಪಿಎಸ್‌ಐ ಪ್ರವೀಣ್ ಎಸ್ ಪಿ

Ripponpete | ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕ ವಶಕ್ಕೆ – ಶೂಟ್ ಶೂರರಿಗೆ ಸಿಂಹಸ್ವಪ್ನವಾಗಿರುವ ಪಿಎಸ್‌ಐ ಪ್ರವೀಣ್ ಎಸ್ ಪಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಜಾ ಗಿರಾಕಿಗಳಿಗೆ ಸಿಂಹ ಸ್ವಪ್ನವಾಗಿರುವ ಪಿಎಸ್‌ಐ ಪ್ರವೀಣ್ ಎಸ್ ಪಿ ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟಲು ಟೊಂಕ ಕಟ್ಟಿ ನಿಂತಿದ್ದಾರೆ. ಕೊಲೆ, ದರೋಡೆ, ಅತ್ಯಾಚಾರ, ಅಪಘಾತ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಸೇವಿಸಿ ಕೃತ್ಯವೆಸಗಿರುವುದು ಸಾಬೀತಾಗಿದೆ. ಅಪರಾಧ ಕೃತ್ಯಗಳಿಗೆ ಪ್ರೇರೇಪಿಸುವ ಗಾಂಜಾ ಚಟಕ್ಕೆ ಬಿದ್ದ ಯುವ…

Read More

ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ 9ನೇ ರ‌್ಯಾಂಕ್ ಪಡೆದ JNNC ವಿದ್ಯಾರ್ಥಿನಿಯರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020-23 ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ.ಕೆ.ವಂತಕರ್ ರಾಜ್ಯಕ್ಕೆ ಒಂಬತ್ತನೆ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ…

Read More

ಅಕ್ರಮ ಗೋಮಾಂಸ ಅಂಗಡಿಯ ಮೇಲೆ ದಾಳಿ : ಓರ್ವನ ಬಂಧನ

ಅಕ್ರಮ ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಮಾಳೂರು ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಅಂಗಡಿ ನಡೆಸುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ತೀರ್ಥಹಳ್ಳಿಯ ಮಂಡಗದ್ದೇ ಸಮೀಪದ ಲಿಂಗಾಪುರ ಗ್ರಾಮದ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ವಧಿಸಲು ಸಿದ್ದವಾಗಿದ್ದ ಗೋವನ್ನು ನವೀನ್ ಕುಮಾರ್ ಮಠಪತಿ ನೇತ್ರತ್ವದಲ್ಲಿ  ದಾಳಿ ನಡೆಸಿ ಹಸುವನ್ನು ರಕ್ಷಿಸಿದ್ದಾರೆ.  ಗೋ ಮಾಂಸದ ಜೊತೆಗೆ ಜೀವಂತ ಹಸುವನ್ನು ರಕ್ಷಿದ ಪೊಲೀಸರು ಆರೋಪಿ ಇಜಾಜ್ ಪಾಶಾ ಎಂಬಾತನನ್ನು  ಬಂಧಿಸಿದ್ದಾರೆ.  ಈ ದಾಳಿಯಲ್ಲಿ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ…

Read More

ದೆಹಲಿಗೆ ತೆರಳಿದ್ದು ವೈಯಕ್ತಿಕ ಕೆಲಸಕ್ಕಾಗಿ : ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ , ಗೃಹಸಚಿವ ಆರಗ ಜ್ಞಾನೇಂದ್ರರವರು ಸಹ ದೆಹಲಿ ವಿಮಾನ ಹತ್ತಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೆ, ಆಪ್ತ , ಸಂಘ ಪರಿವಾರ, ಬಿಜೆಪಿ ಮತ್ತು ದೆಹಲಿಯ ಮೂಲಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಇದರ ನಡುವೆ, ತಮ್ಮ ಖಾಸಗಿ…

Read More

ಕೆರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಸೂಟ್ ಕೇಸ್ ನಲ್ಲಿ ಅವಿತು ಕುಳಿತ ಬೃಹತ್ ಕಾಳಿಂಗ ಸರ್ಪ

ಕೆರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಸೂಟ್ ಕೇಸ್ ನಲ್ಲಿ ಅವಿತು ಕುಳಿತ ಬೃಹತ್ ಕಾಳಿಂಗ ಸರ್ಪ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮನೆಯ ಟ್ರಂಕ್‌ನಲ್ಲಿದ್ದ ಹಾವನ್ನು ಕಂಡು ಗಾಬರಿಯಾದ ಮನೆಯವರು ಆ ಬಳಿಕ ಉರಗ ಸಂರಕ್ಷಕರ ಮೂಲಕ ಸರ್ಪವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ.. ತೀರ್ಥಹಳ್ಳಿಯ ಊಂಟೂರುಕಟ್ಟೆ ಸಮೀಪದ ಕಟ್ಟೆಕೊಪ್ಪದ ಬಳಿ ಇರುವ ಮುನಿಯಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕಳೆದ ಭಾನುವಾರ ರಾತ್ರಿ…

Read More

ಕೆಂಚನಾಲದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ : ಗ್ರಾಮಸ್ಥರ ಮಧ್ಯಸ್ಥಿಕೆ |Flex

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಿಂದಾಗಿ ತಿಳಿಗೊಂಡಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ ಗ್ರಾಮದ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.  ಟಿಪ್ಪು ಬ್ಯಾನರ್ ಕಟ್ಟಲು ಕೆಲ ಯುವಕರು ಮುಂದಾದಾಗ ಕೆಲ ಯುವಕರು ಆಕ್ಷೇಪಿಸಿದ್ದಾರೆ. ಕೆಂಚನಾಲ ವೃತ್ತದಲ್ಲಿ ಇದುವರೆಗೂ ಯಾವ ಬ್ಯಾನರ್ ಗಳನ್ನು ಹಬ್ಬದ ಸಂದರ್ಭದಲ್ಲಿಯೂ…

Read More

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ನಿಧನ Former Prime Minister H.D. Deve Gowda’s wife Chennamma passes away at 85 in Bengaluru after prolonged illness. JDS leaders and family mourn her demise. ಬೆಂಗಳೂರು: ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (85) ಅವರು ಶನಿವಾರ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆರೋಗ್ಯದಲ್ಲಿ ಏರುಪೇರು ಕಂಡುಬಂದ…

Read More