Headlines

ವರುಣನ ಕೃಫೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ|moolegadde

`ವರುಣನ ಕೃಫೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ’’ ರಿಪ್ಪನ್‌ಪೇಟೆ;-ಶ್ರಾವಣ ಮಾಸದಲ್ಲಿ ಶಿವಪೂಜೆಯೊಂದಿಗೆ ಶಿವಮಂತ್ರ ಪಠಣ ಮಾಡುವುದರಿಂದ ಪಾಪ ದೂರವಾಗಿ ಪುಣ್ಯಪ್ರಾಪ್ತಿಯಾಗುವುದೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ “ಶ್ರಾವಣ ಮಾಸದ ಅಂಗವಾಗಿ ಅಯೋಜಿಸಲಾದ ಶಿವಪೂಜೆ’’ ಕಾರ್ಯಕ್ರಮದೊಂದಿಗೆ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು ವರುಣನ ಕೃಫೆಗಾಗಿ ಶ್ರೀಗಳು ಮೌನಜಪಾನುಷ್ಟಾನ ಶಿವಪೂಜೆಯನ್ನು ನೆರವೇರಿಸಿದರು. ಈ ಪೂಜಾ ಕಾರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನಾಶೀರ್ವಾದ ಪಡೆದರು.

Read More

ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಧಾನವಾಗುತ್ತದೆ: ಬೇಳೂರು ಗೋಪಾಲಕೃಷ್ಣ

ಗಡಿಕಟ್ಟೆ: ಕಷ್ಟ ಎಲ್ಲಾರಿಗೂ ಇರುತ್ತದೆ ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಾಧಾನವಾಗುತ್ತದೆ ಎಂದು ಮಾಜಿ ಶಾಸಕರೂ,ಕೆ.ಪಿ.ಸಿ.ಸಿ. ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಲ್ಲಿನ ಗಡಿಕಟ್ಟೆಯ ಹಾವುಗೊಲ್ಲರ ಸುಮಾರು 50 ಕುಟುಂಬದ ಸದಸ್ಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಇಂತಹವರನ್ನು ನಿರ್ಲಕ್ಷಿಸಿರುವುದು ಖಂಡನೀಯ, ನಿಮ್ಮ ಸಂಕಷ್ಟದ ಜೊತೆ ಗೋಪಾಲಕೃಷ್ಣ ಬೇಳೂರು ಸದಾ ಇರುತ್ತಾರೆ ಎಂದರು.    ಈ ಸಂದರ್ಭದಲ್ಲಿ ರಂಜಿತ ರಾಧಾ ಗೋಪಾಲ ಕೃಷ್ಣ ಬೇಳೂರು, ತಾಲ್ಲೂಕು…

Read More

ನೀರಿನಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು :

ಶಿವಮೊಗ್ಗ : ಪಿತೃ ಪಕ್ಷದ‌ ಪೂಜೆಗೆಂದು ಕಡೂರಿನಿಂದ ಬಂದಿದ್ದ ಇಂಜಿನಿಯರ್ ವಿದ್ಯಾರ್ಥಿ ಕೊಡ್ಲಿ ತುಂಗಾಭದ್ರಾ ಸಂಗಮದಲ್ಲಿ ಮಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಪಿತೃ ಪಕ್ಷದ ಅಂಗವಾಗಿ ಬಿರೂರಿನಿಂದ ಫಣಿಯಾಚರ್ ಕುಟುಂಬದ ಹರೀಶ್ ಹಾಗೂ ಯಶವಂತ್ ಎಂಬುವರು ಸಂಗಮದಲ್ಲಿ ಇಳಿದಿದ್ದರು. ಯಶವಂತ ಸ್ನಾನ ಮುಗಿಸಿ ವಾಪಸ್ ಬಂದ್ರೆ, ಹರೀಶ್( 24) ನೀರಿನಲ್ಲಿ ತೇಲಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೋಟ್​​​ನಲ್ಲಿ ಹುಡುಕಾಟ ನಡೆಸಿದ್ದಾರೆ. ನಿನ್ನೆ  ಸಂಜೆ ಕತ್ತಲಾದ…

Read More

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಆನಂದಪುರ ಠಾಣೆಗೆ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ.!? ಈ ಸುದ್ದಿ ನೋಡಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ. ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರನ್ನು ಅನಂದಪುರ ಪೊಲೀಸ್…

Read More

ಅಪಾಯದಂಚಿನಲ್ಲಿ ಕಾರಗೋಡು ಸರ್ಕಾರಿ ಶಾಲೆ : ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ

ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗವಿರುವ ಅಕೇಶಿಯ ಮರ ಬೀಳುವ ಆತಂಕದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನದೂಡುತಿದ್ದಾರೆ. ಇಲ್ಲಿನ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಬೆಳೆದುನಿಂತ ಅಕೇಶಿಯ ನೆಡುತೋಪು ಇದ್ದು ಈ ಮರಗಳ ರೆಂಬೆಕೊಂಬೆಗಳು ಶಾಲೆಯ ಮೇಲ್ಛಾವಣಿಗೆ ಬಾಗಿ ನಿಂತಿವೆ. ಮಲೆನಾಡಿನ ಈ ಭಾಗದಲ್ಲಿ ಸುರಿಯುತ್ತಿರುವ  ಭಾರಿ ಮಳೆ ಗಾಳಿಯಿಂದ ಜನ ತತ್ತರಗೊಂಡಿದ್ದು ಇದೀಗ ಯಾವ  ಗಳಿಗೆಯಲ್ಲಾದರೂ ಶಾಲೆಯ ಮೇಲೆ ಮರ ಬೀಳಬಹುದೆಂಬ ಆತಂಕ ಪೋಷಕರನ್ನು ಕಾಡುತ್ತಿದೆ.ಇದರಿಂದ…

Read More

ಮೂಗೂರು ಏತ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ:

ಸೊರಬ: ತಾಲೂಕಿನ ಆನವಟ್ಟಿ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಮೂಗೂರು ಏತನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ ನಡೆಯಿತು. ಈ ಸಂಧರ್ಭದಲ್ಲಿ ತಹಶಿಲ್ದಾರ ಗ್ರೇಡ್ 2 ರವರು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಆನವಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ದಂಡಾವತಿ AEE ರವರು ಹಾಗೂ ಸಿಬ್ಬಂದಿ ವರ್ಗ, MI AEE ರವರು, AEE PRED ರವರು, ಪಿಡಿಒ , ರಾಜಸ್ತ ನಿರೀಕ್ಷಕರು ಮೂಗೂರು…

Read More

ರಿಪ್ಪನ್‌ಪೇಟೆ : ತೋಟದಲ್ಲಿ ಹುಲ್ಲು ಕೊಯ್ಯುವಾಗ ಹಾವು ಕಚ್ಚಿ ವೃದ್ದೆ ಸಾವು|snake bite

ಮನೆ ಹಿಂಬಾಗದ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಸಮೀಪದ ಕೆ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಮ್ಮ (72 )ಹಾವು ಕಡಿತದಿಂದ ಮೃತಪಟ್ಟ ಮಹಿಳೆಯಾಗಿದ್ದು, ಜಾನುವಾರುಗಳಿಗೆ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿದೆ. ಕೂಡಲೇ ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಾಗ ಮಹಿಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ…

Read More

ಮಗಳ ಮೆಸೇಜ್‌ನಿಂದ ಬಯಲಾದ ರಹಸ್ಯ | ಶಿವಮೊಗ್ಗದ ಜ್ಯೋತಿಷಿ ಜೊತೆಗಿನ ಅನೈತಿಕ ಸಂಬಂಧ – ರಾತ್ರೋರಾತ್ರಿ ದಾಳಿ , ಓರ್ವ ಸಾವು

A shocking stabbing and murder case in Siddapur of Uttara Kannada has exposed an alleged illicit relationship between a Shivamogga-based astrologer and a married woman. Police say the incident followed revelations made by the woman’s daughter to her father, leading to a violent late-night attack. One person was killed while others were injured. Several accused,…

Read More

20 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ

20 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ರಿಪ್ಪನ್‌ಪೇಟೆ;-ಯಡೇಹಳ್ಳಿಯಿಂದ ರಿಪ್ಪನ್‌ಪೇಟೆಯ ವರಗಿನ ಸಂಪರ್ಕ ರಸ್ತೆಗೆ 20 ಕೋಟಿ ರೂ ವೆಚ್ಚದ 9 ಕಿ.ಮೀ.ದೂರದ ರಾಜ್ಯಹೆದ್ದಾರಿಯ ಆಗಲೀಕರಣ ಕಾಮಗಾರಿಗೆ ಶಾಸಕ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ನಂತರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಮಾತನಾಡಿ ಟೀಕೆ ಟಿಪ್ಪಣಿಗಳು ಸತ್ತಹೋಗುತ್ತವೆ ಆದರೆ ಮಾಡಿದ ಅಭಿವೃದ್ದಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ.ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧಪಕ್ಷದವರು ಬಾಯಿ…

Read More

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ|Araga

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ  ರಿಪ್ಪನ್ ಪೇಟೆ – ಜು.7 ರಂದು ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸಿದರು. ಅದು ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಕೇಂದ್ರ ಹಾಗೂ ರಾಜ್ಯದ ಹಳೆಯ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಪುಸ್ತಕ.14 ನೇ ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ರು. ಆದರೆ ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೂಡ ಇತಿಹಾಸದಲ್ಲಿ ಸೇರಿರುವ ಘಟನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು….

Read More