20 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ
ರಿಪ್ಪನ್‌ಪೇಟೆ;-ಯಡೇಹಳ್ಳಿಯಿಂದ ರಿಪ್ಪನ್‌ಪೇಟೆಯ ವರಗಿನ ಸಂಪರ್ಕ ರಸ್ತೆಗೆ 20 ಕೋಟಿ ರೂ ವೆಚ್ಚದ 9 ಕಿ.ಮೀ.ದೂರದ ರಾಜ್ಯಹೆದ್ದಾರಿಯ ಆಗಲೀಕರಣ ಕಾಮಗಾರಿಗೆ ಶಾಸಕ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.



ನಂತರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಮಾತನಾಡಿ ಟೀಕೆ ಟಿಪ್ಪಣಿಗಳು ಸತ್ತಹೋಗುತ್ತವೆ ಆದರೆ ಮಾಡಿದ ಅಭಿವೃದ್ದಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ.ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧಪಕ್ಷದವರು ಬಾಯಿ ಬಡಿದುಕೊಳ್ಳುತ್ತಿದ್ದು ಇದರಿಂದ ನಮ್ಮ ಸರ್ಕಾರ ಇನ್ನೂಷ್ಟು ಆಭಿವೃದ್ಧಿಗೆ ಹಣ ಹರಿದು ಬರುತ್ತಿರುವುದರೊಂದಿಗೆ ಗ್ಯಾರಂಟಿ ಯೋಜನೆಯಿಂದಾಗಿ ರೈತ ಮಹಿಳೆಯರು ಬಡವರು ದೀನದಲಿತರ ಉದ್ದಾರವಾಗುವಂತಾಗಿದೆ.ಬಡವರ ಕಣ್ಣೀರು ಹಾಕಿಸುವ ಮೂಲಕ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲಕ್ಷಾಂತರ ಕೋಟಿ ಸಾಲ ಮಾಡಿ ಖಜಾನೆ ಖಾಲಿ ಮಾಡಿತ್ತು ನಮ್ಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲವನ್ನು ತೀರಿಸುವ ಮೂಲಕ ಆಭಿವೃದ್ದಿಗೂ ಹಣದ ಹೊಳೆ ಹರಿಸುತ್ತಿದ್ದಾರೆಂದರು.
ಕೊರೂನಾ ಕಾರಣ ಹೇಳಿಕೊಂಡು ಹಳೆಯ ಸರ್ಕಾರಿ ಬಸ್‌ಗಳನ್ನು ಓಡಿಸುತ್ತಿದ್ದು ಮೂರುಪಟ್ಟು ಬೆಲೆ ಏರಿಸಿ ಬಡವವರಿಗೆ ಬರೆ ಎಳೆದಿದ್ದು ಈಗಿನ ಸರ್ಕಾರ 3 ಸಾವಿರಕ್ಕೂ ಆಧಿಕ ಸರ್ಕಾರಿ ಬಸ್‌ಗಳನ್ನು ಖರೀದಿಸಿ ಹಂತಹಂತವಾಗಿ ಓಡಾಡಲು ರಾಜ್ಯದ ಎಲ್ಲಾ ಡಿಪೋಗಳಿಗೆ ಕಳುಹಿಸುತ್ತಿದ್ದಾರೆಂದರು.ಅದರಂತೆ ನನ್ನ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈಗಾಗಲೇ 9 ಹೊಸಬಸ್‌ಗಳು ಬಂದಿದ್ದು ಸಾಗರದಿಂದ ಮಣಿಪಾಲ ಮಂಗಳೂರಿಗೆ ಹಾಗೂ ಸಾಗರದಿಂದ ನೇರ ತಿರುಪತಿಗೆ ಬಸ್‌ಗಳನ್ನು ಬಿಡಲಾಗಿದೆ ಇನ್ನೂ ಸಾಗರ ಅನಂದಪುರ ರಿಪ್ಪನ್‌ಪೇಟೆ ಮಾರ್ಗ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಶರಾವತಿ ಮುಳಗಡೆ ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದ್ದು ಸುಪ್ರೀಂ ಕೋರ್ಟ್ನಲ್ಲಿ ರೈತರ ಪರವಾಗಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಶೀಘ್ರದಲ್ಲಿ ರೈತರ ಪರ ತೀರ್ಪು ಬರುವ ಎಲ್ಲಾ ಲಕ್ಷಣಗಳು ಇದೆ ಎಂದು ವಿವರಿಸಿ ಯಾವುದೇ ಕಾರಣಕ್ಕೂ ಸಂತ್ರಸ್ತ ರೈತರನ್ನು ಒಕ್ಕಲೇಬಿಸಲು ಬಿಡುವುದಿಲ್ಲ ಎಂದು ದೈರ್ಯ ತುಂಬಿದರು.
ಈಗಾಗಲೇ ಚಕ್ರನಗರದಿಂದ ಸೂಡೂರು ವರಗಿನ ಎಲ್ಲ ಗ್ರಾಮಗಳಿಗೂ ಸುಮಾರು 418 ಕೋಟಿ ರೂ ವೆಚ್ಚದಲ್ಲಿ ಶುದ್ದಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ.ರಿಪ್ಪನ್‌ಪೇಟೆ ನಗರಕ್ಕೆ 36 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣ ಹಂತದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜನರಿಗೆ ಈ ಸೌಲಭ್ಯ ದೊರೆಯಲಿದ್ದು 7 ವಾರ್ಡ ವ್ಯಾಪ್ತಿಯಲ್ಲಿ ಆಭಿವ್ದದ್ದಿ ಪಡಿಸುವುದಾಗಿ ತಿಳಿಸಿ ಈಗಾಗಲೇ ಸಾಗರ ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿಗೆ 5.85 ಕೋಟಿ ಆನುದಾನ ಬಡುಗಡೆಯಾಗಿ ಕಾಮಗಾರಿ ಕಾರ್ಯ ಭರದಿಂದ ಸಾಗಿದೆ ಇನ್ನೂ ಶಿವಮೊಗ್ಗ ಹೊಸನಗರ ರಸ್ತೆ ಆಗಲೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿ ಸಚಿವರೊಂದಿಗೆ ಸಹ ಚರ್ಚಿಸಲಾಗಿದ್ದು ಮುಂದಿನ ಬಜೆಟ್‌ನಲ್ಲಿ ಹೆಚ್ಚು ಹಣವನ್ನು ಇಡಿಸಿ ಕೊಡುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆಂದ ಅವರು ಆಭಿವೃದ್ದಿಗೆ ಹಣಕಾಸಿ ಕೊರತೆಯಿಲ್ಲ ಎಂದು ವಿವರಿಸಿದರು.
ಸಚಿವರಾಗುವ ಕಾಲ ದೂರವಿಲ್ಲ;-
ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ನ ಬೇಳೂರು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವರಾಗವ ಕಾಲ ದೂರವಿಲ್ಲ ಎಂದು ಎಂ.ಎಲ್.ಸಿ.ಬಲ್ಕಿಸ್‌ಬಾನು ಹೇಳುತ್ತಿದ್ದಂತೆ ಸಭಿಕರ ಚಪ್ಪಾಳೆ ಶಿಳ್ಳೆ ಮುಗಿಲು ಮುಟ್ಟುವಂತೆ ಮಾಡಿತು.ಮಾತು ಮುಂದುವರಿಸಿ ಸಿದ್ದರಾಮಯ್ಯ ಶಿವಕುಮಾರ ನೇತೃತ್ವದ ಸರ್ಕಾರ ಚುನಾವಣೆ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳುವುದರೊಂದಿಗೆ ಬಲಿಷ್ಟ ಸರ್ಕಾರವಾಗಿ ಜನಮನಗೆದ್ದಿದೆ ಎಂದರು.



ಈ ಸಭೆಯಲ್ಲಿ ಮಲೆನಾಡು ಪ್ರದೇಶಾಭಿವ್ದದ್ದಿ ಮಂಡಳಿಯ ಅಧ್ಯಕ್ಷ ಮಂಜುನಾಥಗೌಡ,ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಮಚಂದ್ರ,ಶಿಮುಲ್ ಆಧ್ಯಕ್ಷ ವಿದ್ಯಾಧರ,ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷಿ,ಉಪಾಧ್ಯಕ್ಷ ಸುದೀಂದ್ರಪೂಜಾರಿ,ಹೊಸನಗರ ತಾಲ್ಲೂಕ್ ಬ್ಲಾಕ್ ಕಾಂಗ್ರೇಸ್ ಆಧ್ಯಕ್ಷ ಬಿ.ಜೆ.ಚಂದ್ರಮೌಳಿ,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಎನ್.ಚಂದ್ರೇಶ್,ಆಶೀಫ್,ಗಣಪತಿಗವಟೂರು,ಪ್ರಕಾಶಪಾಲೇಕರ್,ಸಾರಾಭಿ,ವೇದಾವತಿ, ನಿರುಪಮ ರಾಕೇಶ್, ವಿನೋಧ,ಮಹಾಲಕ್ಷಿ, ಪರಮೇಶ್,ತಹಶೀಲ್ದಾರ್ ರಶ್ಮಿಹಾಲೇಶ್, ಸುಬ್ರಹ್ಮಣ್ಯ ಮಾಸ್ತಿಕಟ್ಟೆ,ಉಭೇದುಲ್ಲಾ ಷರೀಫ್,ಅಮ್ಮೀರ್‌ಹಂಜಾ,ರವೀದ್ರಕೆರೆಹಳ್ಳಿ ಇನ್ನಿತರ ಹಲವರು ಹಾಜರಿದ್ದರು.
ವರ್ಣರಂಜಿತ ನಾಯಕ ದಿ.ಎಸ್.ಬಂಗಾರಪ್ಪನವರು ಬಡವರ ಕಣ್ಣೀರು ಒರೆಸುವ ಮೂಲಕ ಅಭಿವೃದ್ದಿಗಿಂತ ಬಡವರ ಸೇವೆ ಮುಖ್ಯ ಎಂದು ಹೇಳಿದಂತೆ ನಾನು ಅವರ ಗರಡಿಯಲ್ಲಿ ಬೆಳೆದು ಬಂದಂತಹ ವ್ಯಕ್ತಿ ಅವರ ಸಾರ್ವಜನಿಕ ಕಾರ್ಯಗಳೇ ನನಗೆ ಸ್ಪೂರ್ತಿಯೆಂದು ಹೇಳಿ ಬಡವರ ಸೇವೆಯೇ ನನಗೆ ಶ್ರೀರಕ್ಷೆ – ಬೇಳೂರು ಗೋಪಾಲಕೃಷ್ಣ