Headlines

SHIVAMOGGA | ವೈಭವದ ದಸರಾ ಮೆರವಣಿಗೆ

SHIVAMOGGA | ವೈಭವದ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ…

Read More

ಕ್ರಿಸ್ಮಸ್ ರಜೆ ಹಿನ್ನಲೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು

ಕ್ರಿಸ್ಮಸ್ ರಜೆ ಹಿನ್ನಲೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು ಶಿವಮೊಗ್ಗ: ನಗರದ   ಕಲ್ಲೂರು-ಮಂಡ್ಲಿ ಬಳಿಯ ಬಂಡೆಕಲ್ಲು ಎಂಬಲ್ಲಿ ತುಂಗಾ ಚಾನೆಲ್‌ಗೆ ಕ್ರಿಸ್ಮಸ್ ದಿನದಂದು ಈಜಲು ತೆರಳಿದ್ದ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಮುಳುಗಿ ಸಾವನ್ನಪ್ಪಿದ್ದು, ಗುರುವಾರ  ಶವ ಪತ್ತೆಯಾಗಿದೆ. ಹಳೆ ಮಂಡ್ಲಿ ನಿವಾಸಿ ಮೋಹಿತ್ (೧೫) ಸ್ನೇಹಿತರೊಂದಿಗೆ ಬುಧವಾರ  ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಕಲ್ಲೂರು ಮಂಡ್ಲಿ ಬಳಿಯ ಚಾನೆಲ್ ಬಳಿ ಹೋಗಿದ್ದನು. ನೀರು ನೋಡಿ ಈಜಲು ಹೋದ ಬಾಲಕ ನೀರುಪಾಲಾಗಿದ್ದನು.  ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ…

Read More

10 ಕೋಟಿ ರೂ ಬೆಲೆಯ ನಾಯಿಯ ನೋಡಲು ಮುಗಿಬಿದ್ದ ಜನ – ಭೀಮಾ ನ ಲುಕ್ ಗೆ ಎಲ್ಲಾ ಫಿದಾ….|DOG SHOW

ಶಿವಮೊಗ್ಗ ದಸರಾದ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ನಡೆದ ಡಾಗ್ ಶೋ ನಲ್ಲಿ ಬೆಂಗಳೂರಿನ ಸತೀಶ್ ಮಾಲೀಕತ್ವದ ಟಿಬೇಟಿಯನ್ ಮಸ್ತೀಪ್ ಬ್ರೀಡ್ ನಾಯಿ ಭೀಮ ಎಲ್ಲಾರ ಆಕರ್ಷಣೀಯವಾಗಿತ್ತು ಈ ನಾಯಿಯ ಹೆಸರು ಭೀಮಾ,ಇದರ ಬೆಲೆ ಬರೋಬ್ಬರಿ 10 ಕೋಟಿ. ಎ ಸಿ ರೂಂ ನಲ್ಲಿ ವಾಸ ,ಡೈಲಿ ಚಿಕನ್ ಬೇಕೆ ಬೇಕು.. 10 ಕೋಟಿ ಬೆಲೆಯ ನಾಯಿಗೆ ಡಾಗ್ ಶೋನಲ್ಲಿ ಡಿಮ್ಯಾಂಡೋ ಡಿಮ್ಯಾಂಡ್ ಇದೆ. ಡಾಗ್ ಶೋ ನಲ್ಲಿ ಮಾಲೀಕ ಸತೀಶ್ ಎರಡು ಸುತ್ತು ಪ್ರೇಕ್ಷಕರಿಗೆ ಪ್ರದರ್ಶಿಸಿದರು….

Read More

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್ ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ಸಂಚಾರ ವ್ಯತ್ಯಯವಾಗಿದೆ.ಮರ ಬಿದ್ದ ಪಕ್ಕದಲ್ಲಿಯೇ ಪಿಕಪ್ ವಾಹನವೊಂದು ನಿಂತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಭಾರಿ ಅನಾಹುತವೊಂದು ತಪ್ಪಿದೆ. ಸಾಗರ ರಸ್ತೆಯ ಮುಸ್ಲಿಂ ಖಬರ್ ಸ್ಥಾನ್ ಮುಂಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ವ್ಯತ್ಯಯವಾಗಿದೆ.ಈ ಸಂಧರ್ಭದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ…

Read More

ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ ಶಿವಮೊಗ್ಗ ಜಿಲ್ಲೆಯ ಯಡವಾಲ ಸಮೀಪ ಕೊಂಡಜ್ಜಿ ಹಳ್ಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್(40) ಎಂಬ ವ್ಯಕ್ತಿ ಹಳ್ಳ ದಾಟುತ್ತಿದ್ದಾಗ ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದನು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.ಇದೀಗ ಶವ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ತುಸು ದೂರದಲ್ಲಿ ಮೃತದೇಹ ಸಿಕ್ಕಿದೆ. ಘಟನೆ ನಡೆದ ದಿನ ಸ್ಥಳಕ್ಕೆ ಸಂಸದ ಬಿ ವೈ ರಾಘವೇಂದ್ರ ಭೇಟಿ…

Read More

ರಿಪ್ಪನ್ ಪೇಟೆ : ಆಲುವಳ್ಳಿ,ಕೆಂಚನಾಲ ಸುತ್ತಮುತ್ತ ಆಕಾಶದಲ್ಲಿ ವಿಚಿತ್ರ ಕೌತುಕ : ಬೆಚ್ಚಿಬಿದ್ದ ಜನರು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಆಲುವಳ್ಳಿ ಹಾಗೂ ಕೆಂಚನಾಲ ಗ್ರಾಮದಲ್ಲಿ ಇಂದು ಸರಿಯಾಗಿ ಆಕಾಶದಲ್ಲಿ ಸಾಲು ಸಾಲಾಗಿ ಸಣ್ಣ ಸಣ್ಣ ದೀಪಗಳು ಹಾದು ಹೋಗಿ ಅಚ್ಚರಿ ಮೂಡಿಸಿವೆ. ಬಾಹ್ಯಾಕಾಶದಲ್ಲಿ ನಡೆಯುವ‌ ಕೌತುಕಗಳಿಗೆ ಕೊನೆಯೇ ಇಲ್ಲ. ಆಕಾಶದಲ್ಲಿ ಅದೇ ನಕ್ಷತ್ರ, ಅದೇ ಚಂದ್ರ, ಅದೇ ಸೂರ್ಯ ಇದ್ದಿದ್ದರೆ ಯಾವ ಕುತೂಹಲವೂ ಅನುಸುತ್ತಿರಲಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಏಕಾಏಕಿ ಲೈಟ್ ಗಳ ಸರಣಿ ಹಾದು ಹೋದರೆ ನಿಮ್ಮನ್ನ ಅಚ್ಚರಿ ಪಡಿಸದೆ ಇರದು. ಇಂತಹ ಒಂದು ಕೌತುಕಕ್ಕೆ ಹೊಸನಗರ ತಾಲೂಕಿನ ಕೆಂಚನಾಲ,ಆಲುವಳ್ಳಿ…

Read More

ಮಳೆಯಿಂದ ಹಾನಿಯಾದ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.

    ಸಾಗರ : ತಾಲೂಕಿನ ಹೊಸೂರು ಗ್ರಾಮ ಪಂಚಾಯತಿಯ ನೆದರವಳ್ಳಿ ಗ್ರಾಮದ ವೀರೇಂದ್ರ ಗೌಡ್ರು ಹಾಗೂ ಚಿದಾನಂದ ಗೌಡರ ಕೊಟ್ಟಿಗೆ ಮನೆ  ನಿನ್ನೆ ಬಂದ ಗಾಳಿ ಮಳೆಯ ಆರ್ಭಟಕ್ಕೆ ಹಾನಿಗೊಳಗಾಗಿತ್ತು. ಇಂದು ಸ್ಥಳಕ್ಕೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡಿದರು ಸ್ಥಳ ಪರಿಶೀಲಿಸಿದ  ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಆನಂದ…

Read More

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ|rpet

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ರಿಪ್ಪನ್‌ಪೇಟೆ : ಸಮೀಪದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ  ತಾಜುನ್ ಬಿ ರವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಮೂಲತಃ ಗ್ರಾಮದ ನಿವಾಸಿ ತಾಜುನ್ ಬಿ ರಹಮತ್ ಉಲ್ಲಾ ರವರು ಕಳೆದ 13 ವರ್ಷಗಳಿಂದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ತಾಜುನ್ ಬಿ ರಹಮತ್ ಉಲ್ಲಾ ರವರು ನಿರೂಪಣೆ ಹಾಗೂ ಕವನ…

Read More

ಆರಗ ಬಳಿ ಮೃತದೇಹ ಸಮೇತ ಕಾರು ಸುಟ್ಟ ಪ್ರಕರಣ : ಮೃತ ವ್ಯಕ್ತಿಯ ಪತ್ನಿ ಸೇರಿ ಐವರ ಬಂಧನ

ತೀರ್ಥಹಳ್ಳಿ : ತಾಲೂಕಿನ ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿ ಪಂಜರ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೃತನನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ವಿನೋದ್ ಅವರನ್ನು ಮನೆಯಲ್ಲಿಯೇ ಆತನ ಪತ್ನಿ ಮತ್ತು ಸಹಚರರು ಕೊಲೆಗೈದು ಮಿಟ್ಲಗೋಡು ಕಾಡಿನಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಟ್ಟ ಕಾರು,…

Read More

ಮಹಾಕುಂಭಮೇಳದಲ್ಲಿ ಕಾಲ್ತುಳಿತ: ಕರ್ನಾಟಕದ ತಾಯಿ-ಮಗಳು ಸಾವು

ಮಹಾಕುಂಭಮೇಳದಲ್ಲಿ ಕಾಲ್ತುಳಿತ: ಕರ್ನಾಟಕದ ತಾಯಿ-ಮಗಳು ಸಾವು ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಟ (50), ಮೇಘಾ ಹತ್ತರವಾಟ ಎಂದು ಗುರುತಿಸಲಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಬಳಿಕ ಅವರನ್ನು ಇಂದು‌‌ ಬೆಳಗ್ಗೆ ಪ್ರಯಾಗ್​ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ – ಮಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತ ಜ್ಯೋತಿ ಅವರ ಪತಿ…

Read More