
ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದು ಸಂಚಾರ ಬಂದ್
ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದು ಸಂಚಾರ ಬಂದ್ ಶಿವಮೊಗ್ಗ: ಮಲೆನಾಡಿನಲ್ಲಿ ಪುಷ್ಯಮಳೆ ಅಬ್ಬರ ಜೋರಾದ ಪರಿಣಾಮ ಹುಲಿಕಲ್ ಘಾಟಿಯಲ್ಲಿ ಭೂಕುಸಿತವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇರುವ ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದಿದೆ. ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಘಾಟಿಯಾದ ಹುಲಿಕಲ್ ಘಾಟಿಯಲ್ಲಿ ರಾಜ್ಯ ಹೆದ್ದಾರಿ 52 ಹಾದು ಹೋಗಲಿದೆ. ಬಾಳೆಬರೆ ಫಾಲ್ಸ್ ಪಕ್ಕದಲ್ಲೇ ಧರೆ ಕುಸಿದಿದೆ. ರಸ್ತೆಯ ಮೇಲೆ ಕುಸಿದ ಮಣ್ಣು ಬಿದ್ದಿದೆ.ಮಣ್ಣಿನ ಜೊತೆ ಕುಸಿದ ಘಾಟಿಯಲ್ಲಿ ಇದ್ದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ …