POSTMANNEWS

ನೈಜ ಸುದ್ದಿ ನೇರ ಬಿತ್ತರ..

ಸೇತುವೆ ಉದ್ಘಾಟನೆಯ ನಂತರದ ಮೊದಲ ಜಾತ್ರೆಗೆ ಸಿಗಂದೂರು ಸಿದ್ಧ – ಯಾವಾಗ ಗೊತ್ತಾ!!? ಈ ಸುದ್ದಿ ನೋಡಿ

GridArt 20260102

marking the first celebration after the inauguration of the Siganduru Chowdeshwari Bridge. With early-morning rituals, sacred homas, grand processions, cultural programmes and a popular night drama, the two-day event is expected to draw a massive gathering of devotees. Faith, tradition and festivity will come together once again at Siganduru.

ಸೇತುವೆ ಉದ್ಘಾಟನೆಯ ನಂತರದ ಮೊದಲ ಜಾತ್ರೆಗೆ ಸಿಗಂದೂರು ಸಿದ್ಧ – ಯಾವಾಗ ಗೊತ್ತಾ!!? ಈ ಸುದ್ದಿ ನೋಡಿ

ಶಿವಮೊಗ್ಗ:ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಗಂದೂರಿನಲ್ಲಿ ಜನವರಿ 14 ಮತ್ತು 15ರಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ನಂತರ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ.

ಎರಡು ದಿನಗಳ ಜಾತ್ರೆಯಲ್ಲಿ ದೇವಿಗೆ ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜನವರಿ 14ರಂದು ಬೆಳಗ್ಗೆ 4.00ರಿಂದ ಮಹಾಭಿಷೇಕ ಆರಂಭವಾಗಲಿದೆ. ರಥಪೂಜೆ, ಚಂಡಿಕಾ ಹೋಮ, ಧರ್ಮಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ದಿನಪೂರ್ತಿ ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7.00ರಿಂದ ಶಿವದೂತ ಗುಳಿಗ ನಾಟಕ ಪ್ರದರ್ಶನವಿದೆ.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.