Headlines

ಚಲಾವಣೆಯಿಂದ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆದ RBI

ನೋಟು ಅಮಾನ್ಯೀಕರಣದ ನಂತ್ರ ಹೊಸ ನೋಟುಗಳಾಗಿ 2000 ರೂ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು. ಇದೀಗ ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ ಬಿ ಐ ನಿರ್ಧಾರ ಕೈಗೊಂಡಿದೆ. ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ಬಿಐ ನಿರ್ಧಾರ ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ ಎಂದು ತಿಳಿಸಿದೆ.

Read More

ಈಡೇರಿದ ತೀರ್ಥಹಳ್ಳಿ ಜನತೆಯ ಬಹುದಿನಗಳ ಕನಸು :ಸಚಿವರಾಗಿ ಆರಗ ಜ್ಞಾನೇಂದ್ರ ಇಂದು ಪ್ರಮಾಣ ವಚನ ಸ್ವೀಕಾರ

  ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರರಿಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ದೊರೆತಿದ್ದು ಇಂದು ಮಧ್ಯಾಹ್ನ 2.15 ಕ್ಕೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವಿಷಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವಾಗ ಜ್ಞಾನೇಂದ್ರ ರವರು ತುಂಬಾ ಭಾವುಕರಾಗಿದ್ದರು.ಸಚಿವ ಸ್ಥಾನಕ್ಕಾಗಿ ಯಾವುದೇ ಲಾಭಿ ಮಾಡದ ಜನನಾಯಕನಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ಸಚಿವರಾಗಿ ಅರಗ ಜ್ಞಾನೇಂದ್ರರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿ 4 ಬಾರಿ…

Read More

ರಿಪ್ಪನ್ ಪೇಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜೆ ಎನ್ ಷಣ್ಮುಖಪ್ಪ ಗೌಡ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜಯದೇವ ರೈಸ್ ಮಿಲ್ ನ ಮಾಲೀಕರಾದ ಜೆ ಎನ್ ಷಣ್ಮುಖಪ್ಪ ಗೌಡರು(99) ಇಂದು ರಿಪ್ಪನ್ ಪೇಟೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ ತಮ್ಮ ರಿಪ್ಪನ್ ಪೇಟೆಯ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಏಳು ಪುತ್ರರು,ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ಹೋರಾಟಗಾರ ಜೆ ಎನ್…

Read More

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

ಅಂಧ ಮಹಿಳೆಯರ T20 ಚಾಂಪಿಯನ್ ತಂಡದ ರಿಪ್ಪನ್ ಪೇಟೆಯ ಕಾವ್ಯಾಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ ಟಿ20 ಅಂಧರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಅಂದರ ತಂಡವು ಗೆಲುವು ಸಾಧಿಸಿತ್ತು. ಈ ಗೆಲುವಿಗೆ ಹರ್ಷವನ್ನು ರಿಪ್ಪನ್ ಪೇಟೆಯ ಕಾವ್ಯಾ.ವಿ ಕೂಡ ಕಾರಣ ಎಂಬ ವಿಷಯ ತಿಳಿದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ಅವರು, ಭಾರತದ ಅಂಧರ ಮಹಿಳಾ…

Read More

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ಜಯ ಕರ್ನಾಟಕ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ

ಶಿವಮೊಗ್ಗ : ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ ಶನಿವಾರ ಆಗಸ್ಟ್ 28 ರಂದು ಅಮಾಯಕ ಶಿಕ್ಷಕರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ಮೊದಲಿನಿಂದಲು ನಾಗರಿಕರು ಸ್ಮಾರ್ಟ್ ಸಿಟಿಯ ನಿಧಾನಗತಿಯ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ ಆದರೆ ಇದರ ಬಗ್ಗೆ ಪಾಲಿಕೆಯಾಗಲೀ ಜಿಲ್ಲಾಡಳಿತವಾಗಲಿ ಉಸ್ತುವಾರಿ ಸಚಿವರಾಗಲಿ ಗಮನ ಹರಿಸಿದಿರುವುದು ನಿಜಕ್ಕೂ ವಿಷಾದನೀಯ,ಈಗಾಗಲೇ ನಗರದ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆ 2 ವರ್ಷದಿಂದ ಅಗೆದು ಹಾಕಿ ಜನರಿಗೆ ತೊಂದರೆಯಾಗುವಂತೆ ಮಾಡಲಾಗಿದೆ ಎಂಜಿನಿಯರ್ ಮತ್ತು ಗುತ್ತಿಗೆದಾರರು…

Read More

Shivamogga | ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ – ಅಧಿಕೃತವಾಗಿ ಹೊರಬಿತ್ತು ಪ್ರಕಟಣೆ| ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ..?? ಈ ಸುದ್ದಿ ನೋಡಿ

ಶಿವಮೊಗ್ಗ ಜಿಲ್ಲೆಯಿಂದ ವಿಮಾನಯಾನ ಸೇವೆ ಆರಂಭಸಿಲು ಸಜ್ಜಾಗಿರುವ ಸ್ಟಾರ್‌ ಏರ್‌ (STAR AIR) ಸಂಸ್ಥೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ. ನ.6ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗದ ಬಿ.ಹೆಚ್‌.ರಸ್ತೆಯಲ್ಲಿರುವ ರಾಯಲ್‌ ಆರ್ಕಿಡ್‌ ಹೊಟೇಲ್‌ನಲ್ಲಿ ಸಂದರ್ಶನ ನಡೆಸಲಿದೆ. ಈ ಕುರಿತು ಸ್ಟಾರ್‌ ಏರ್‌ ಸಂಸ್ಥೆ ತನ್ನ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದೆ. ಸ್ಟಾರ್​ ಏರ್​ ಸೋಶಿಯಲ್ ಮೀಡಿಯಾದಲ್ಲಿ ನೀಡಿದ ಜಾಹಿರಾತಿನ ಪ್ರಕಾರ, ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಕಮರ್ಷಿಯಲ್‌ ವಿಭಾಗದಲ್ಲಿ ಡ್ಯೂಟಿ ಸೂಪರ್‌ವೈಸರ್‌…

Read More

ಮನೆ ಕಳ್ಳತನವೆಸಗಿದ್ದ ಮೂವರು ಆರೋಪಿಗಳ ಬಂಧನ | Arrested

ಮನೆ ಕಳ್ಳತನವೆಸಗಿದ್ದ ಮೂವರು ಆರೋಪಿಗಳ ಬಂಧನ | Arrested ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಮೊಹಮ್ಮದ್ ರಫೀಕ್ @ ಕಾಣ 24 ವರ್ಷ, ಚಿಕ್ಕಲ್, ಶಿವಮೊಗ್ಗ ,ಅತಾವುಲ್ಲಾ, 29 ವರ್ಷ, ಬಾಪೂಜಿನಗರ.  ಶಿವಮೊಗ್ಗ, ರೂಮನ್ ಕುರೇಶಿ, 20 ವರ್ಷ ಬಾಪೂಜಿನಗರ, ಇವರುಗಳನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದ  ಅಂದಾಜು ಮಾಲ್ಯ 15,40,500/- ರೂಗಳ 237 ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ  ಬಳಸಿದ ಅಂದಾಜು ಮೌಲ್ಯ 50,000/-…

Read More

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು :‌ ಬೇಳೂರು ಗೋಪಾಲಕೃಷ್ಣ

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು :‌ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ: ಸಮಾಜದಲ್ಲಿ ನೊಂದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಹಾಗೂ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಒದಗಿಸಿ ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು. ಅವರು ಭಾನುವಾರ ಪಟ್ಟಣದ ವಿಶ್ವಮಾನವ ಸಭಾಂಗಣದಲ್ಲಿ ಹೊಸನಗರ ತಾಲ್ಲೂಕ್ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ತಾಲ್ಲೂಕ್…

Read More

ಹೆದ್ದಾರಿಪುರ : ಗ್ರಾಪಂ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಕೆ|election

ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಫೆ.25 ರ ಶನಿವಾರ ಚುನಾವಣೆ ನಡೆಯಲಿದೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಸದಸ್ಯರಾಗಿದ್ದ ಚೂಡಾಮಣಿ ರವರು ಇತ್ತೀಚಿಗೆ ನಿಧನರಾದ ಹಿನ್ನಲೆಯಲ್ಲಿ ಉಪ ಚುನಾವಣೆ ನಡೆಯುತಿದ್ದು ಈ ಸ್ಥಾನಕ್ಕೆ ಕ್ರೀಯಾಶೀಲ ಯುವಕ ಬೇಕರಿ ಸುರೇಶ್ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದು ಹೆದ್ದಾರಿಪುರ ಗ್ರಾಮ ಪಂಚಾಯತಿಯಲ್ಲಿ ಚುನಾವಣಾಧಿಕಾರಿ ಸತೀಶ್ ರವರಲ್ಲಿ ಬೇಕರಿ ಸುರೇಶ್ ನಾಮಪತ್ರ…

Read More

ರಿಪ್ಪನ್‌ಪೇಟೆ – ಕ್ಯಾಂಟರ್ ಲಾರಿ ಮತ್ತು ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ|accident

ಕ್ಯಾಂಟರ್ ಲಾರಿ ಹಾಗೂ ಟೊಯೋಟಾ ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಸೂಡೂರು ಗೇಟ್ ಸಮೀಪದಲ್ಲಿ ನಡೆದಿದೆ. ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಟೊಯೋಟಾ ಇನ್ನೋವಾ ಕಾರು ಹಾಗೂ ಶಿವಮೊಗ್ಗದಿಂದ ಹೊಸನಗರಕ್ಕೆ ತೆರಳುತಿದ್ದ ಕ್ಯಾಂಟರ್ ಲಾರಿ ನಡುವೆ ಸೂಡೂರು ಗೇಟ್ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಘಟನೆಯಲ್ಲಿ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More