ಕರ್ನಾಟಕ ರಾಜ್ಯ ಬರಹಗಾರರ ಬಳಗದಿಂದ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಟಿ: ರಫ಼ಿ ರಿಪ್ಪನ್ ಪೇಟೆ
ಶಿವಮೊಗ್ಗ::ದಿನಾಂಕ 04/07/21 ಭಾನುವಾರದಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಬರಹಗಾರರ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಟಿ ಏರ್ಪಡಿಸಲಾಗಿದೆ ಎಲ್ಲ ಕವಿಮನಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬರಹಗಾರರ ಬಳಗದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾನುವಾರ ಸಂಜೆ 4 ಗಂಟೆಗೆ ಅನ್ನದಾತ ಎಂಬ ವಿಷಯದ ಅಡಿಯಲ್ಲಿ ಗೂಗಲ್ ಮೀಟ್ ನಲ್ಲಿ ಜಿಲ್ಲಾಮಟ್ಟದ ಅಂತರ್ಜಾಲ…