ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ :
ಸಾಗರ : ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜೋಗದ ಶಿರೂರು ಕೆರೆಯಲ್ಲಿ ಶುಕ್ರವಾರ ನಡೆದಿದೆ. ಗಾಯಿತ್ರಿ(43), ಮೃತ ದುರ್ಧೈವಿಯಾಗಿದ್ದಾರೆ.ಇವರು ಕೆ.ಇ.ಬಿ ನೌಕರ ಶಂಕರ್ ಅವರ ಪತ್ನಿ ಎಂದು ತಿಳಿದು ಬಂದಿದೆ.ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಹಿಳೆ ಕೆರೆಗೆ ಹಾರುತ್ತಿರುವುದನ್ನು ಹೋಂ ಗಾರ್ಡ್ ಒಬ್ಬರು ಗಮನಿಸಿದ್ದಾರೆ. ಈ ಮಾಹಿತಿಯನ್ನು ಜೋಗ ಠಾಣೆಯ ಪಿಎಸ್ಐ ಅವರಿಗೆ ನೀಡಿದ್ದು,ತಕ್ಷಣ ಸ್ಥಳಕ್ಕಾಗಮಿಸಿದ ಸಬ್ ಇನ್ಸ್ ಪೆಕ್ಟರ್ ನಿರ್ಮಲಾ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತಿದ್ದಾರೆ. ಕಾರ್ಗಲ್ ಪೊಲೀಸ್…