Headlines

ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದುವೆ  -ಮಗಳ ಮದುವೆ ದಿನವೇ ಮಸಣಕ್ಕೆ ಸೇರಿದ ಹೃದಯವಿದ್ರಾವಕ ಘಟನೆ

ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದುವೆ  -ಮಗಳ ಮದುವೆ ದಿನವೇ ಮಸಣಕ್ಕೆ ಸೇರಿದ ಹೃದಯವಿದ್ರಾವಕ ಘಟನೆ ಮಗಳ ಮದುವೆಯ ಸಂಭ್ರಮದಲ್ಲಿದ್ದ ತಂದೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮದುವೆಯ ಬಳಿಕ ತಂದೆ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಿಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಆಪ್ತಮಿತ್ರನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ ವಿಷಯವೇ ಗೊತ್ತಿಲ್ಲದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ನಿನ್ನೆ ಹಾಗೂ ಇವತ್ತು ತರೀಕೆರೆ…

Read More

SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಯಾವ್ಯಾವ ದಿನ, ಯಾವ ಪರೀಕ್ಷೆ?

SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಯಾವ್ಯಾವ ದಿನ, ಯಾವ ಪರೀಕ್ಷೆ? ಬೆಂಗಳೂರು: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ SSLC ಪರೀಕ್ಷೆ- 1 ಹಾಗೂ ಮಾರ್ಚ್ 1 ರಿಂದ, ಮಾರ್ಚ್ 20 ರ ವರೆಗೆ ದ್ವೀತಿಯ ಪಿಯುಸಿ- 1 ಪರೀಕ್ಷೆ ನಡೆಯಲಿದೆ. SSLC ಪರೀಕ್ಷೆ  ವೇಳಾಪಟ್ಟಿ…

Read More

ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯ ಬಾಲ ಹಿಡಿದು ಬಲೆಗೆ ಬೀಳಿಸಿದ ಯುವಕ

ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯ ಬಾಲ ಹಿಡಿದು ಬಲೆಗೆ ಬೀಳಿಸಿದ ಯುವಕ ತುಮಕೂರು: ಜನರ ಕೂಗಾಟದಿಂದ ಬಲೆಗೆ ಬೀಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರತೆಯನ್ನು ಅದರ ಬಾಲ ಹಿಡಿದು ಯುವಕನೊಬ್ಬ ಬಲೆಗೆ ಬೀಳಿಸಿದ ಘಟನೆ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ. ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಗ್ರಾಮಸ್ಥರ ನೆರವಿನೊಂದಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ರಂಗಾಪುರ ಗ್ರಾಮದ ಪುರಲೇಹಳ್ಳಿ ರಸ್ತೆ ಕುಮಾರಣ್ಣ ಎಂಬವರ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಸುಮಾರು ನಾಲ್ಕೈದು ವರ್ಷದ ಚಿರತೆಯನ್ನು ಸೆರೆ ಹಿಡಿಯಲು…

Read More

3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಏಕಾಏಕಿ ಕುಸಿದು ಬಿದ್ದು ಬಾಲಕಿ ಸಾವು

3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಏಕಾಏಕಿ ಕುಸಿದು ಬಿದ್ದು ಬಾಲಕಿ ಸಾವು ಚಾಮರಾಜನಗರ | ಲೋಬಿಪಿ ಹಾಗೂ ಹೃದಯಾಘಾತದಿಂದ 3 ನೇ ತರಗತಿಯ 8 ವರ್ಷದ ಬಾಲಕಿ ತೇಜಸ್ಬಿನಿ ಅಂಬ ಪುಟ್ಟ ಬಾಲಕಿ ಅಸ್ವಸ್ಥಗೊಂಡು ಶಾಲಾ ಆವರಣದಲ್ಲಿ ಮೃತಳಾಗಿದ್ದಾಳೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಹಾಗೂ ಶೃತಿ ದಂಪತಿಯ ಪುಟ್ಟ ಮಗಳು8 ವರ್ಷದ ತೇಜಸ್ವಿನಿ ಶಾಲೆಯ ತರಗತಿಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಚಾಮರಾಜನಗರ ಪಟ್ಟಣದ ಸೆಂಟ್ ಪ್ರಾನ್ಸಿಸ್ ಶಾಲೆಯ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ…

Read More

ಆನ್‌ಲೈನ್ ಗೇಮಿಂಗ್ ನಲ್ಲಿ ಲಕ್ಷಾಂತರ ರೂ ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆ

ಆನ್‌ಲೈನ್ ಗೇಮಿಂಗ್ ನಲ್ಲಿ ಲಕ್ಷಾಂತರ ರೂ ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆ ಆನ್‌ಲೈನ್‌ ಗೇಮಿಂಗ್‌(online gaming) ವ್ಯಾಮೋಹಕ್ಕೆ ಸಿಲುಕಿ 10 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಮನನೊಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಬೇಲೂರು ಗ್ರಾಮದಲ್ಲಿ ನಡೆದಿದೆ. ಹುಲಸೂರ ತಾಲೂಕಿನ ಬೇಲೂರ ಗ್ರಾಮದ ವಿಜಯಕುಮಾ‌ರ್ ಹೊಳ್ಳೆ (25) ಮೃತ ಯುವಕ. ಡಿ.ಫಾರ್ಮ್ ಪದವೀಧರನಾಗಿದ್ದ ಯುವಕ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ…

Read More

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನು ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ ಎಂದು ಪತ್ನಿ ಗೀತಾ ಶಿವರಾಜ್​ಕುಮಾರ್ ಹಾಗೂ ಬಾಮೈದ ಮಧು ಬಂಗಾರಪ್ಪ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯು ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿದೆ. ”ಶಸ್ತ್ರಚಿಕಿತ್ಸೆ ವೇಳೆ ಮತ್ತು ನಂತರದ ಆರೈಕೆ ಸಮಯದಲ್ಲಿ ಶಿವರಾಜ್‌ಕುಮಾರ್…

Read More

RIPPONPETE | ಏನಾದರೂ ನಾ ತೆಗೆಯಲ್ಲ – ಹಾಗಾದರೇ ನಾನು ಬಿಡೋ ಪ್ರಶ್ನೆನೇ ಇಲ್ಲಾ  | ಇದು ತಹಶೀಲ್ದಾರ್ ರಶ್ಮಿ ಖಡಕ್ ಕಾರ್ಯಾಚರಣೆ ಶೈಲಿ

ಏನಾದರೂ ನಾ ತೆಗೆಯಲ್ಲ – ಹಾಗಾದರೇ ನಾನು ಬಿಡೋ ಪ್ರಶ್ನೆನೇ ಇಲ್ಲಾ  | ಇದು ತಹಶೀಲ್ದಾರ್ ರಶ್ಮಿ ಖಡಕ್ ಕಾರ್ಯಾಚರಣೆ ಶೈಲಿ ರಿಪ್ಪನ್‌ಪೇಟೆ ಪಟ್ಟಣದ ಬಹುದಿನಗಳ ಬೇಡಿಕೆಯ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿಯಾಗಿದ್ದ ಸಾಗರ ರಸ್ತೆಯ ಖಾಸಗಿ ಕಟ್ಟಡವನ್ನು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತ್ರತ್ವದಲ್ಲಿ ದಿಡೀರ್  ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಕಟ್ಟಡದ ಮಾಲೀಕರಿಗೆ ಶಾಕ್ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಈ ಅನಧೀಕೃತ ಕಟ್ಟಡದಿಂದಾಗಿ ದ್ವಿಪಥ ರಸ್ತೆ ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ…

Read More

ಪರಿಸರಕ್ಕೆ ಮಾರಕವಾಗುತ್ತಿದೆ ಒಣಶುಂಠಿಗೆ ಬಳಸುತ್ತಿರುವ ಗಂಧಕ..!!

ಪರಿಸರಕ್ಕೆ ಮಾರಕವಾಗುತ್ತಿದೆ ಒಣಶುಂಠಿಗೆ ಬಳಸುತ್ತಿರುವ ಗಂಧಕ..!! ರಿಪ್ಪನ್‌ಪೇಟೆ: ಕಳೆದೆರಡು ವರ್ಷದಿಂದ ಹಸಿ ಶುಂಠಿಗೆ ಬೆಲೆ ಇಲ್ಲ. ಆದ್ದರಿಂದ ಕೆಲ ವ್ಯಾಪಾರಸ್ಥರು, ದಲ್ಲಾಳಿಗಳು, ಶ್ರೀಮಂತ ರೈತರು ಕಂಡು ಕೊಂಡ ಪರಿಹಾರ ಗಂಧಕ ಬಳಸಿ ಒಣ ಶುಂಠಿ ಮಾಡುವುದು !ಶುಂಠಿಗೆ ಬಣ್ಣ ಬರಲು ಹಾಗೂ ಮಾರುಕಟ್ಟೆ ಆಕರ್ಷಿಸಲು ಗಂಧಕ ಬಳಸುವ ತಂತ್ರಕ್ಕೆ ಅವರು ಮೊರೆ ಹೋಗಿದ್ದಾರೆ. ಇದರಿಂದ ಅವರ ಕೆಲಸವೇನೋ ಆಗಿದೆ. ಆದರೆ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯು ವಾತಾವರಣದಲ್ಲಿ ಸೇರಿ ದುರ್ನಾತ ಬೀರುತ್ತಿದೆ. ಶುಂಠಿಗೆ ಗಂಧಕ ಬಳಸುವುದರಿಂದ…

Read More

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ ಉಡುಪಿ : ಕಳೆದ ಆರು ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕ್ಷಣ ಶನಿವಾರ ನಡೆದ ರಾಷ್ಟ್ರಿಯ ಲೋಕ ಅದಾಲತ್‍ನಲ್ಲಿ ಸಾಕ್ಷಿಯಾಯಿತು. ಪ್ರಕರಣದ ಹಿನ್ನಲೆ: ಸೊರಬದ ರಾಘವೇಂದ್ರ ಆಚಾರ್ಯರವರು ಮಂದಾರ್ತಿ ಮುದ್ದುಮನೆಯ ಮಾಲತಿಯವರೊಂದಿಗೆ 2018 ನೇ ಏಪ್ರಿಲ್‍ನಲ್ಲಿ ಯಡ್ತಾಡಿಯ ಚಾಮುಂಡೇಶ್ವರಿ ಸಭಾ ಭವನದಲ್ಲಿ ವಿವಾಹ ಆಗಿದ್ದರು. ಮದುವೆ ಆದ ಸ್ವಲ್ಪ ಸಮಯದ ನಂತರ…

Read More

ಕಸ ಎಸೆಯುವವರಿಗೆ ವಿಭಿನ್ನ ಬ್ಯಾನರ್ ಮೂಲಕ ಪಿಂಡ ಪ್ರಧಾನದ ಎಚ್ಚರಿಕೆ ಕೊಟ್ಟ ಸ್ಥಳೀಯರು

ಕಸ ಎಸೆಯುವವರಿಗೆ ವಿಭಿನ್ನ ಬ್ಯಾನರ್ ಮೂಲಕ ಪಿಂಡ ಪ್ರದಾನದ ಎಚ್ಚರಿಕೆ ಕೊಟ್ಟ ಸ್ಥಳೀಯರು ಮಂಗಳೂರು: ಸಾರ್ವಜನಿಕರು ಕಸ ಎಸೆಯುವ ಎಷ್ಟು  ಏರಿಯಾಗಳಿವೆಯೋ ಅದರಷ್ಟೇ ಗಲೀಜಾದ ಏರಿಯಾಗಳೂ ಇವೆ. ಕಸವನ್ನು ಜನ ಎಲ್ಲಿ ಬೇಕೆಂದರಲ್ಲಿ ಎಸೆದು ಪರಿಸರವನ್ನು ಹಾಳುಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಲು ಹಾಕಿರುವಂಥ ಬ್ಯಾನರ್ ಒಂದು ಇದೀಗ  ಮಂಗಳೂರಿನ ಹಳ್ಳಿಯೊಂದರಲ್ಲಿ  ಕಂಡುಬಂದಿದೆ. ಎಲ್ಲೆಡೆ ವೈರಲ್ ಆಗುತ್ತಿದೆ. “ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಸಹ ಇಲ್ಲೇ ಮಾಡುವ, ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್ ಒಂದನ್ನು…

Read More