ಕಾಂತಾರ 1 ಸಿನಿಮಾ ಶೂಟಿಂಗ್ ವೇಳೆಯಲ್ಲಿ ರಿಷಬ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚು ಕಲಾವಿದರು ಬಚಾವ್: ಅಷ್ಟಕ್ಕೂ ಆಗಿದ್ದೇನು?
‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆಯೇನು.!?

ಶಿವಮೊಗ್ಗದ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್ ನಡೆಯುತ್ತಿದೆ ಆದರೆ ಈ ವೇಳೆ ದೊಡ್ಡ ಅವಘಡವೊಂದು ಸಂಭವಿಸಿದ್ದು, ಅದೃಷ್ಟವಶಾತ್ ಚಿತ್ರ ನಟ ರಿಷಬ್ ಶೆಟ್ಟಿ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರು ಬಚಾವ್ ಆಗಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಜೂನ್ 14ರ ಸಂಜೆ ಶೂಟಿಂಗ್ ವೇಳೆಯಲ್ಲಿ ದೋಣಿ ಮುಗುಚಿದ ಪರಿಣಾಮ 30ಕ್ಕೂ ಹೆಚ್ಚು ಕಲಾವಿದರು ಇರುವ ನೀರು ಪಾಲಾಗಿದ್ದರು. ಸ್ಥಳೀಯ ಮಾಹಿತಿಯಂತೆ ರಿಷಬ್ ಶೆಟ್ಟಿ ಸೇರಿ ಎಲ್ಲ ಕಲಾವಿದರು ಈಜುಕೊಂಡು ದಡ ಸೇರಿದ್ದಾರೆ. ಕೆಲವರನ್ನು ಚಿತ್ರತಂಡದ ಇತರರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲರೂ ಸೇಫ್ ಆಗಿ ಹೊಸನಗರದ ಯಡೂರು ರೆಸಾರ್ಟ್ ಗೆ ವಾಪಸ್ ಆಗಿದ್ದಾರೆಂದು ರೆಸಾರ್ಟ್ ಮಾಲೀಕ ರಾಜಾರಾಮ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಹೀಗೆ ದೊಡ್ಡ ದುರಂತ ನಡೆಯಿತು ಎನ್ನುವ ವಂದತಿಯು ಸದ್ಯ ಮಲೆನಾಡಿನೆಲ್ಲಡೆ ಹಬ್ಬಿಕೊಂಡಿದೆ. ಈ ನಡುವೆ ಘಟನೆ ಕುರಿತು ಶಿವಮೊಗ್ಗ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆಯು ನಡೆದಿದೆ. ಸದ್ಯ ಶೂಟಿಂಗ್ ವೇಳೆ ಏನೆಲ್ಲಾ ನಡೆಯಿತು ಮತ್ತು ಯಾರಿಗೆಲ್ಲ ಸಮಸ್ಯೆ ಆಗಿದೆ ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲದಂತಾಗಿದೆ. ಚಿತ್ರ ತಂಡವೂ ಸಹ ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ.
ಚಿತ್ರತಂಡದ ಮ್ಯಾನೇಜರ್ ಸೇರಿದಂತೆ ಯಾರೂ ಕೂಡಾ ಈ ಘಟನೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಒಂದು ಮೂಲಗಳ ಪ್ರಕಾರ ಘಟನೆಯಲ್ಲಿ ಒಂದಿಷ್ಟು ಕಲಾವಿದರು ಅಸ್ವಸ್ಥಗೊಂಡಿದ್ದರು. ಅವರನ್ನು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಯ ವೈದ್ಯರು ಯಾವುದನ್ನು ಖಚಿತ ಪಡಿಸುತ್ತಿಲ್ಲ. ಒಟ್ಟಾರೆ ಕಾಂತಾರ ಚಾಪ್ಟರ್ 1ರ ಇಂದಿನ ಮತ್ತು ಜೂ.11 ರಂದು ನಡೆದ ಘಟನೆಗಳು ರಹಸ್ಯದಿಂದ ಕೂಡಿವೆ.
ಜೂನ್ 11ರ ರಾತ್ರಿ ತೀರ್ಥಹಳ್ಳಿಯ ಆಗುಂಬೆಯ ಹೋಂ ಸ್ಟೇನಲ್ಲಿದ್ದ ಕಾಂತಾರ ಚಾಪ್ಟರ್ 1 ಚಿತ್ರದ ಕಲಾವಿದ ವಿಜು ವಿಕೆ. ಕಹೃದಯಘಾತದಿಂದ ಮೃತಪಟ್ಟಿದ್ದ. ವಿಜು ವಿ.ಕೆ. ಕೇರಳದ ತ್ರಿಶೂರ್ ಮೂಲದವರು. ವಯಸ್ಸು 50 ಆಗಿತ್ತು. ಮದುವೆ ಆಗಿ ಎರಡು ಮಕ್ಕಳಿದ್ದಾರೆ. ಜೂನ್ 11ರ ರಾತ್ರಿ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ಗಾಗಿ ಮಿಮಿಕ್ರಿ ಕಲಾವಿದ ವಿಜು ತೀರ್ಥಹಳ್ಳಿ ಪಟ್ಟಣಕ್ಕೆ ಬಂದಿದ್ದರು. ಬೆಳಗ್ಗೆ ಕಾಂತರ ಶೂಟಿಂಗ್ ಟೈಂ ಫೀಕ್ಸ್ ಆಗಿತ್ತು. ಒಟ್ಟು 20 ಕಲಾವಿದರು ಆಗುಂಬೆಯ ಹೋಂ ಸ್ಟೇ ನಲ್ಲಿ ತಂಗಿದ್ದರು. ಜೂ 11ರ ರಾತ್ರಿ 10 ಘಂಟೆಯ ಆಸುಪಾಸಿನಲ್ಲಿ ವಿಜುಗೆ ಎದೆನೋವು ಕಾಣಿಸಿಕೊಂಡಿದೆ. ಸಹ ಕಲಾವಿದರು ಮತ್ತು ಸ್ಥಳೀಯರು ಸೇರಿ ವಿಜುನನ್ನು ಅಂಬುಲೇನ್ಸ್ ಮೂಲಕ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ನಡುವೆ ದಾರಿ ಮಧ್ಯೆದಲ್ಲೇ ವಿಜು ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ಕರೆತಂದ ಬಳಿಕ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಆಗಲೇ ಆತನ ಜೀವ ಹೋಗಿತ್ತಂತೆ. ಇಂದಿನ ಶೂಟಿಂಗ್ ನಲ್ಲಿ ಭಾಗವಹಿಸಬೇಕಿದ್ದ ಮಿಮಿಕ್ರೆ ಕಲಾವಿದ ವಿಜು ಸಾವಿನ ಮನೆ ಸೇರಿದ್ದ ಎಲ್ಲರಿಗೂ ದೊಡ್ಡ ಆಘಾತ ತಂದಿತ್ತು. ಈಗಾಗಲೇ ಕಾಂತಾರ ಚಾಪ್ಟರ್ ಶೂಟಿಂಗ್ ಆರಂಭದಿಂದಲೂ ನೂರೆಂಟು ಸಮಸ್ಯೆ ವಿಘ್ನಗಳು ಶುರುವಾಗಿವೆ. ಕರಾವಳಿಯ ದೈವದ ಕುರಿತು ಇರುವ ಚಿತ್ರ ಇದಾಗಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿವೆ ಎನ್ನುವ ಮಾತುಗಳ ಸಹ ಕೇಳಿಬರುತ್ತಿವೆ.
ದೋಣಿ ಮುಗುಚಿದ ಬಳಿಕ ಏನೆಲ್ಲಾ ಅನಾಹುತ ನಡೆಯಿತು ಎನ್ನುವುದನ್ನು ಚಿತ್ರತಂಡವು ಗೌಪ್ಯವಾಗಿ ಇಟ್ಟಿದೆ. ಚಿತ್ರ ತಂಡದ ಯಾವುದೇ ಸಿಬ್ಬಂದಿ ಮತ್ತು ಸಹ ಕಲಾವಿದರಿಗೆ ಘಟನೆ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.ಈ ಹಿನ್ನಲೆಯಲ್ಲಿ ದುರಂತ ನಡೆದಿರುವುದು ಮಾತ್ರ ಬಹಿರಂಗವಾಗಿದೆ.
‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆ
ಶಿವಮೊಗ್ಗನದ ಹೊಸನಗರದ ಸಮೀಪ ಮಾಣಿ ಜಲಾಶಯದಲ್ಲಿ ‘ಕಾಂತಾರ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಸಂಜೆ ಸಮಯದಲ್ಲಿ ರಿಷನ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಇದ್ದ ಸೀನ್ ಒಂದರ ಶೂಟಿಂಗ್ ದೋಣಿಯಲ್ಲಿ ನಡೆಯುತ್ತಿತ್ತು. ಆದರೆ ಈ ವೇಳೆ ಮುಗಿಚಿಕೊಂಡಿದೆ. ಸುಮಾರು 30 ಕಲಾವಿದರು ಮತ್ತು ತಂತ್ರಜ್ಞರು ದೋಣಿಯಲ್ಲಿರುವಾಗಲೇ ದೋಣಿ ಮುಗುಚಿಕೊಂಡಿದೆ. ಈ ಘಟನೆಯಲ್ಲಿ ಯಾರಿಗೂ ಜೀವ ಹಾನಿ ಆಗಿಲ್ಲ ಎನ್ನಲಾಗುತ್ತಿದೆ.
ಘಟನೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಇಂದು, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಎಕ್ಸಿಕ್ಯೂಟಿವ್ ನಿರ್ಮಾಪಕ ಆದರ್ಶ್ ಎಂಬುವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಅಲ್ಲದೆ ಯಾರಿಗೂ ಸಹ ಗಂಭೀರ ಗಾಯಗಳು ಸಹ ಆಗಿಲ್ಲ ಎಂದಿದ್ದಾರೆ. ‘ನಾವು ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಂಡೇ ಸಿನಿಮಾದ ಶೂಟಿಂಗ್ ಮಾಡುತ್ತಿದ್ದೆವು, ಹಾಗಾಗಿ ಯಾರಿಗೂ ಸಹ ಯಾವುದೇ ತೊಂದರೆ ಆಗಿಲ್ಲ’ ಎಂದಿದ್ದಾರೆ.
ಆದರೆ ಸ್ಥಳೀಯರು ಹೇಳಿರುವಂತೆ, ಘಟನೆ ಬಳಿಕ ಕೆಲ ಆಂಬುಲೆನ್ಸ್ಗಳು ಶೂಟಿಂಗ್ ನಡೆದ ಸ್ಥಳಕ್ಕೆ ಬಂದಿದ್ದವಂತೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯ್ತಂತೆ. ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೆಲ ಸ್ಥಳೀಯರು ಹೇಳಿದ್ದಾರೆ. ಆದರೆ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್, ಹೇಳಿರುವಂತೆ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದಿದ್ದಾರೆ.
ದೋಣಿ ನೀರಿನಲ್ಲಿ ಮುಗುಚಿಕೊಂಡಾಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ದೋಣಿಯಲ್ಲಿಯೇ ಇದ್ದರಂತೆ. ರಿಷಬ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವರು ದೋಣಿಯಿಂದ ಹಾರಿ ಈಜಿಕೊಂಡು ದಡ ಸೇರಿದರಂತೆ. ಇನ್ನು ಕೆಲವರನ್ನು ಚಿತ್ರತಂಡದವರು ನೀರಿಗೆ ಹಾರಿ ರಕ್ಷಿಸಿದರಂತೆ. ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ.