Headlines

ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura

ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಕಛೇರಿಯಲ್ಲಿ ಶ್ವಾನಗಳ ಕಾಟಕ್ಕೆ  ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.  ಕಛೇರಿಗೆ ಕಾರ್ಯ ನಿಮಿತ್ತ ಬರುವ ಜನಸಾಮಾನ್ಯರಿಗೆ ಶ್ವಾನಗಳಿಂದ ತೊಂದರೆಯುಂಟಾಗುತಿದ್ದು ಈ ಬಗ್ಗೆ ಹಲವಾರು ಬಾರಿ ಬಂಕಾಪುರ ಪುರಸಭೆಗೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಶ್ವಾನಗಳನ್ನು  ಹಿಡಿದು ಬೇರೆ ಕಡೆ ಸ್ಥಳಾಂತರಿಸಿ ಎಂದು  ಮನವಿಯನ್ನು ಸಲ್ಲಿಸಿದ್ದಾರೆ.  ಆದರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷತೆಯಿಂದ ಸಾರ್ವಜನಿಕರಿಗೆ ಹಲವಾರು ರೀತಿಯಿಂದ ತೊಂದರೆಯನ್ನು ಮಾಡಿವೆ….

Read More

ಇಬ್ಬರು ಒಂದೇ ದಿನ ಹುಟ್ಟಿ ಒಟ್ಟಿಗೆ ಮಸಣ ಸೇರಿದ ದಂಪತಿಗಳ ದುರಂತ ಕಥೆ | uttharakhand

ಇಬ್ಬರು ಒಂದೇ ದಿನ ಹುಟ್ಟಿ ಒಟ್ಟಿಗೆ ಮಸಣ ಸೇರಿದ ದಂಪತಿಗಳ ದುರಂತ ಕಥೆ | uttharakhand ಉತ್ತರಾಖಂಡದ ಎತ್ತರದ ಸ್ಥಳ ಮೈಯಾಳಿಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 19 ಜನರ ಸದಸ್ಯರ ಪೈಕಿ 9ಮಂದಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿದ್ದರು. ಮೃತದೇಹಗಳನ್ನ ಉತ್ತರಾಖಂಡದಿಂದ ಏರ್​ಲಿಫ್ಟ್​ ಮಾಡಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂದವರಿಗೆ ಹಸ್ತಾಂತರ ಮಾಡಲಾಗಿದೆ. ಮೃತಪಟ್ಟವರ ಪೈಕಿ ಹುಬ್ಬಳ್ಳಿ ಮೂಲದ ದಂಪತಿ ಕೂಡ ಇದ್ದು, ಇವರ ಸಾವು ಕುಟುಂಬಸ್ಥರು ಹಾಗೂ ಆಪ್ತರನ್ನು ದುಃಖದ ಮಡುವಿಗೆ ತಳ್ಳಿದೆ. ಹುಬ್ಬಳ್ಳಿಯ ಹುಬ್ಬಳ್ಳಿಯ ವಿನಾಯಕ…

Read More

ಪರೀಕ್ಷೆ ಬರೆದು 5 ತಿಂಗಳಾದರು ಪ್ರಕಟಗೊಳ್ಳದ Bed ಫಲಿತಾಂಶ – ಆತಂಕದಲ್ಲಿ ಪ್ರಶಿಕ್ಷಣಾರ್ಥಿಗಳು

ಪರೀಕ್ಷೆ ಬರೆದು 5 ತಿಂಗಳಾದರು ಪ್ರಕಟಗೊಳ್ಳದ Bed ಫಲಿತಾಂಶ – ಆತಂಕದಲ್ಲಿ ಪ್ರಶಿಕ್ಷಣಾರ್ಥಿಗಳು  ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 17 ಬಿ.ಇಡಿ ಕಾಲೇಜುಗಳ 911 ಪ್ರ-ಶಿಕ್ಷಣಾರ್ಥಿಗಳು 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು 5 ತಿಂಗಳೇ ಕಳೆದಿದ್ದರೂ, ಇನ್ನೂ ಫಲಿತಾಂಶ ಬಾರದ ಕಾರಣ ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರಕ್ಕೀಡಾಗಿದೆ. 2022-23ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಅಂತಿಮ ಸೆಮಿಸ್ಟರ್‌ನ ಪರೀಕ್ಷೆಗಳು ಕಳೆದ ಜನವರಿ 10ರಂದು ಮುಕ್ತಾಯವಾಗಿದೆ.ಆದರೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಈ ಮಧ್ಯೆ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ…

Read More

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar ಚಲನಚಿತ್ರ ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆಂದು ಶಿವಣ್ಣ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಮಾಜಿ ಸಚಿವ‌ ಕುಮಾರ್ ಬಂಗಾರಪ್ಪನವರ ಮನೆ ಮೇಲೆ ಮುತ್ತಿಗೆ ಹಾಕಿರುವ ಬೆನ್ನಲ್ಲೇ ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಎಕ್ಸ್ ಖಾತೆ ಮತ್ತು…

Read More

ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯ ಹೇಳಿಕೆ – ಕುಮಾರ್ ಬಂಗಾರಪ್ಪ ಮನೆ ಮೇಲೆ ಅಭಿಮಾನಿಗಳಿಂದ ಮುತ್ತಿಗೆ | Shivarajkumar – kumarbangarappa

ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯ ಹೇಳಿಕೆ – ಕುಮಾರ್ ಬಂಗಾರಪ್ಪ ಮನೆ ಮೇಲೆ ಅಭಿಮಾನಿಗಳಿಂದ ಮುತ್ತಿಗೆ | Shivarajkumar – kumarbangarappa ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಸೋತ ಬೆನ್ನಲ್ಲೇ ನಟ ಶಿವರಾಜಕುಮಾರ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ( Kumar Bangarppa ) ಅವರ ಬೆಂಗಳೂರಿನ ಸದಾಶಿವನಗರ ಮನೆ ಮೇಲೆ ಶಿವಣ್ಣ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿತ್ತು….

Read More

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬೋಜೆಗೌಡ ಭರ್ಜರಿ ಗೆಲುವು | MLC

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬೋಜೆಗೌಡ ಭರ್ಜರಿ ಗೆಲುವು | MLC  ಶಿವಮೊಗ್ಗ  : ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆದಿದ್ದು ಮತ ಎಣಿಕೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಗೆಲುವು ಸಾಧಿಸಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹೊನ್ನಾಡಿ, ನ್ಯಾಮತಿ, ಚನ್ನಗಿರಿ ತಾಲೂಕು ವ್ಯಾಪ್ತಿಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಹಾಲಿ ಎಂಎಂಸಿ ಎಸ್ ಎಲ್ ಬೋಜೇಗೌಡ, ಐದು ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಮಲೆನಾಡು…

Read More

ಜೂನ್ 8 ರಂದೇ ಹೆಚ್ ಡಿ ಕುಮಾರಸ್ವಾಮಿ‌ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ..!!

ಜೂನ್ 8 ರಂದೇ ಹೆಚ್ ಡಿ ಕುಮಾರಸ್ವಾಮಿ‌ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ..!! ಜೂನ್. 8 ರಂದು ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಪದಗ್ರಹಣದ ಸಮಾರಂಭದ ವೇಳೆಯೇ ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ.  HDKಗೆ ಕೃಷಿ ಖಾತೆಯ ಮೇಲೆ ಒಲವಿದ್ದು, ಕೃಷಿ ಖಾತೆ ಕುಮಾರಸ್ವಾಮಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂ.8…

Read More

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? | VOTE FOR SALE

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? ಒಂದು ರಾಷ್ಟ್ರದ ಗುಣಮಟ್ಟ ಅಲ್ಲಿನ ನಾಗರಿಕರ ಗುಣಮಟ್ಟದ ಮೇಲೆ ನಿರ್ಧಾರವಾದರೇ ನಾಗರಿಕರ ಗುಣಮಟ್ಟ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ‘ರಾಷ್ಟ್ರನಿರ್ಮಾಪಕರು ಎನ್ನಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕನಿಗೆ ದೇವರ ಸ್ಥಾನವನ್ನು (‘ಆಚಾರ್ಯ ದೇವೋ ಭವ’) ನೀಡಲಾಗಿದೆ. ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಎರಡನೇ ಜನ್ಮ ಕೊಡುತ್ತಾನೆಂಬ…

Read More

NEET UG RESULT | ಮೊದಲ ರ‍್ಯಾಂಕ್‌ ನ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಟಾಪರ್ಸ್

NEET UG RESULT | ಮೊದಲ ರ‍್ಯಾಂಕ್‌ ನ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಟಾಪರ್ಸ್ ಕಳೆದ ತಿಂಗಳು ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯ (NEET UG 2024) ಫಲಿತಾಂಶ ಜೂ.4ರಂದು ಪ್ರಕಟವಾಗಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿ ಮೊದಲ ರ‍್ಯಾಂಕ್‌ ಪಡೆದ ಟಾಪ್ 100 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ವಿ.ಕಲ್ಯಾಣ್, ಶ್ಯಾಮ್…

Read More

ಅನ್ನದಾತರಿಗೆ ಸಿಹಿಸುದ್ದಿ – ವಾಡಿಕೆಗಿಂತ ಮುಂಚೆಯೇ ರಾಜ್ಯಕ್ಕೆ ಮುಂಗಾರು ಪ್ರವೇಶ | Rain

ಅನ್ನದಾತರಿಗೆ ಸಿಹಿಸುದ್ದಿ – ವಾಡಿಕೆಗಿಂತ ಮುಂಚೆಯೇ ರಾಜ್ಯಕ್ಕೆ ಮುಂಗಾರು ಪ್ರವೇಶ | Rain ರೈತರ ಜೀವನಾಡಿ ಮುಂಗಾರು ಮಳೆ ರಾಜ್ಯದ ಗಡಿ ಜಿಲ್ಲೆಗಳಿಗೆ ಪ್ರವೇಶಿಸಿದ್ದು,ನಿರೀಕ್ಷೆಗಿಂತ ಎರಡು ದಿನ ಮೊದಲೆ ರಾಜ್ಯಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ. ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನಿರೀಕ್ಷೆಗಿಂತ ಒಂದು ದಿನ ಮೊದಲೇ ಮೇ. 30ರಂದು ಮುಂಗಾರು ಕೇರಳವನ್ನು ಪ್ರವೇಶಿಸಿದ್ದು, ಮೇ. 31 ರಂದು ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರು ಹಾಗೂ ಚಾಮರಾಜನಗರ…

Read More